ಕಾಂತಾರ ನಟನಿಗೆ ಟಾಂಗ್‌ ಕೊಟ್ಟ ಕಿರಿಕ್‌ ಬೆಡಗಿ | ಕೈಸನ್ನೆ ಬಗ್ಗೆ ರಶ್ಮಿಕಾ ಮಂದಣ್ಣ ಹೇಳಿದ್ದೇನು?

ಕಿರಿಕ್ ಚೆಲುವೆ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಒಂದಲ್ಲ ಒಂದು ವಿಚಾರಕ್ಕೆ ಜನರ ಚರ್ಚಾ ವಿಷಯವಾಗಿ ಮಾರ್ಪಟ್ಟಿದ್ದಾರೆ. ಕಾಂತಾರ ಸಿನೆಮಾದ ಬಗ್ಗೆ ಪ್ರತಿಕ್ರಿಯೆ ನೀಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದ ನ್ಯಾಷನಲ್ ಕ್ರಷ್ ಮತ್ತೊಮ್ಮೆ ವಿವಾದ ಮೈ ಮೇಲೆ ಎಳೆದುಕೊಳ್ಳುವ ಲಕ್ಷಣಗಳು ಕಂಡುಬರುತ್ತಿವೆ.

 

ಕನ್ನಡದ ಕಿರಿಕ್ ಪಾರ್ಟಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಚೆಲುವೆ ರಶ್ಮಿಕಾ ಮಂದಣ್ಣ ತೆಲುಗು , ತಮಿಳು, ಮಾತ್ರವಲ್ಲದೆ ಬಾಲಿವುಡ್ ನಲ್ಲಿಯೂ ತನ್ನ ಛಾಪು ಮೂಡಿಸಲು ಮುಂದಾಗಿದ್ದಾರೆ. ಆದರೆ ಇತ್ತೀಚೆಗೆ, ಕಾಂತಾರಾ ಚಿತ್ರದ ಕುರಿತು ಕಾಮೆಂಟ್ ಮಾಡಿದ್ದರಿಂದ ಕನ್ನಡಿಗರ ಕೋಪಕ್ಕೆ ತುತ್ತಾಗಿ ನೆಟ್ಟಿಗರ ಟ್ರೊಲಿಂಗ್ ವಿಚಾರವಾಗಿ ಮಾರ್ಪಟ್ಟಿದ್ದಾರೆ. ಇದೀಗ, ಮತ್ತೊಮ್ಮೆ ನಾಲಗೆ ಹರಿ ಬಿಟ್ಟು ವಿವಾದ ಸೃಷ್ಟಿ ಮಾಡಿಕೊಳ್ಳುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.

ಹೌದು!!!! ನ್ಯಾಷನಲ್ ಕ್ರಶ್ ” ನನ್ನ ಕೈ ಸನ್ನೆಗಳು ಕೆಲವರಿಗೆ ಇಷ್ಟವಾಗದಿರಬಹುದು ಆದರೆ ನಾನು ಹೆಚ್ಚು ಎಕ್ಸ್ ಪ್ರೆಸಿವ್ ಎಂದು ನಟಿ ರಶ್ಮಿಕಾ ಮಂದಣ್ಣ ಹೇಳಿಕೆ ನೀಡಿದ್ದು, ಈ ರೀತಿಯ ಟಾಂಗ್ ಅನ್ನು ಕಿರಿಕ್ ಚೆಲುವೆ ಹೇಳಿದ್ದು ರಿಷಬ್ ಶೆಟ್ಟಿಗಾ ಎಂಬ ಸಂಶಯ ಭುಗಿಲೆದ್ದಿದೆ.

ಹಿಂದಿ ಚಿತ್ರರಂಗದ ದೊಡ್ಡ ದೊಡ್ಡ ಸ್ಟಾರ್ ಕಲಾವಿದರ ಜೊತೆ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಕಿರಿಕ್ ಚೆಲುವೆಗೆ ಕಿರಿಕ್ ಪಾರ್ಟಿ ಎಂಬ ಸಿನಿಮಾ ದೊಡ್ಡ ಮಟ್ಟದ ನೇಮ್ ಫೇಮ್ ತಂದುಕೊಟ್ಟಿದ್ದು, ಇದೀಗ ಅವರ ಕಾಲ್ ಶೀಟ್ ಪಡೆಯಲು ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ಎದುರು ನೋಡುತ್ತಿವೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ.

ಈ ಹಿಂದೆ ಸಂದರ್ಶನವೊಂದರಲ್ಲಿ ರಶ್ಮಿಕಾ ಮಂದಣ್ಣ, ಕಿರಿಕ್ ಪಾರ್ಟಿ ಸಿನಿಮಾ ಬಗ್ಗೆ ಹೇಳುವಾಗ ಪ್ರೊಡಕ್ಷನ್ ಹೌಸ್ ಹೆಸರನ್ನು ಕೈ ಬೆರಳ ಸನ್ನೆಯಿಂದ ಹೇಳಿ ವ್ಯಂಗ್ಯ ಮಾಡಿದ್ದರು. ಇದಕ್ಕೆ ಪ್ರತಿಯಾಗಿ, ರಿಷಬ್ ಶೆಟ್ಟಿ ಕೂಡ ಸಂದರ್ಶನವೊಂದರಲ್ಲಿ ಕೈ ಸನ್ನೆ ಮಾಡಿ ತೋರಿಸುವ ನಟಿಯರ ಜೊತೆ ನಟಿಸಲ್ಲ ಎನ್ನುವ ಮೂಲಕ ಕಿರಿಕ್ ಚೆಲುವೆ ಗೆ ಮುಟ್ಟಿ ನೋಡುವಂತೆ ಉತ್ತರ ನೀಡಿದ್ದರು. ಹೀಗಾಗಿ, ರಶ್ಮಿಕಾ ಕೈ ಸನ್ನೆ ತೀವ್ರ ವಿವಾದಕ್ಕೊಳಗಾಗಿ ಆಕೆಯನ್ನು ಬ್ಯಾನ್ ಮಾಡಬೇಕು ಎನ್ನುವ ಕೂಗು ಕೂಡ ಜೋರಾಗಿ ಕೇಳಿ ಬಂದಿತ್ತು.

ಬಾಲಿವುಡ್ ಬಬಲ್‍ಗೆ ನೀಡಿದ ವಿಶೇಷ ಸಂದರ್ಶನದ ಸಂದರ್ಭ ರಶ್ಮಿಕಾ ಮಂದಣ್ಣ ಟಾಂಗ್ ನೀಡುವ ರೀತಿ ಹೇಳಿಕೆ ನೀಡಿದ್ದಾರೆ. ನಾನು ಮಾತನಾಡುವುದು, ನನ್ನ ಕೈ ಸನ್ನೆಗಳು ಕೆಲವರಿಗೆ ಇಷ್ಟವಾಗದಿರಬಹುದು ಅಲ್ಲದೆ ತಾನು ಹೆಚ್ಚು ಎಕ್ಸ್ ಪ್ರೆಸಿವ್ ಎಂದು ನಟಿ ರಶ್ಮಿಕಾ ಮಂದಣ್ಣ ಹೇಳಿದ್ದು, ಕಾಂತಾರ ನಟ ರಿಷಬ್ ಶೆಟ್ರಿಗಾ ಎಂಬ ಅನುಮಾನ ಸೃಷ್ಟಿಯಾಗಿದೆ. ಇದರ ಜೊತೆಗೆ ಎಲ್ಲವನ್ನೂ ಹೊರತುಪಡಿಸಿ ರಶ್ಮಿಕಾ ಸದಾ ಟ್ರೋಲ್ ಗೆ ಒಳಗಾಗುತ್ತಿದ್ದರೂ ಕೂಡ ನನ್ನನ್ನು ಇಷ್ಟ ಪಡುವ ಜನರಿದ್ದಾರೆ ಎಂದು ರಶ್ಮಿಕಾ ಮಂದಣ್ಣ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

Leave A Reply

Your email address will not be published.