ಕ್ಯಾಮರಾ ಕಣ್ಣಲ್ಲಿ ಹಾವುಗಳ ಮಿಲನ ದೃಶ್ಯ!

ದಿನಂಪ್ರತಿ ಒಂದಲ್ಲ ಒಂದು ವಿಡಿಯೋ ವೈರಲ್ ಆಗಿ ನೋಡುಗರ ಮನ ಸೆಳೆಯುವಲ್ಲಿ ಯಶಸ್ವಿಯಾಗುತ್ತದೆ.ಕೆಲವೊಂದು ವಿಡಿಯೋಗಳು ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸಿದರೆ ಮತ್ತೆ ಕೆಲವು ಜಗತ್ತಿನ ವಿಸ್ಮಯ ಲೋಕದ ಅಚ್ಚರಿಯ ವಿಷಯಗಳನ್ನೂ ಅನಾವರಣಗೊಳಿಸಿ ನೋಡುಗರ ಕಣ್ಣಿಗೆ ಹಬ್ಬ ಉಂಟು ಮಾಡುತ್ತದೆ. ಈ ಜಗವೇ ಒಂದು ವಿಸ್ಮಯ ನಗರಿ.. ಇಲ್ಲಿ ನಡೆಯುವ ಪವಾಡಗಳು ಕೆಲವೊಮ್ಮೆ ನಮ್ಮನ್ನು ಅಚ್ಚರಿಗೆ ತಳ್ಳುತ್ತವೆ. ಇದೀಗ, ಕ್ಯಾಮರಾ ಕಣ್ಣಲ್ಲಿ ಸೆರೆಯಾದ ಹಾವುಗಳ ಮಿಲನ ಮಹೋತ್ಸವದ ಸುಂದರವಾದ ವಿಡಿಯೋ ತುಣುಕುಗಳು ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.

ಶಿವನಪ್ರಿಯ… ನಾಗರಾಜನ ವೈಭವದ ಮಿಲನ ಮಹೋತ್ಸವ ದ ಅದ್ಭುತ ವನ್ನು ನೋಡಬೇಕೆಂಬ ಅಭಿಲಾಷೆ ಹೊತ್ತವರು ಈ ಸುಂದರ ವಿಡಿಯೋವನ್ನು ಕಣ್ತುಂಬಿ ಕೊಳ್ಳಬಹುದು. ಏಷ್ಟೋ ಬಾರಿ.. ಹಾವು ಮಾರು ದೂರ ದಲ್ಲಿ ಇದ್ದಾಗ ಅದನ್ನು ನೋಡಬೇಕು ಎಂದು ಎನಿಸಿದರೂ ಭಯ ವೆಂಬ ಪೆಡಂಭೂತ ಮೈಗಂಟಿ ಅದನ್ನು ನೋಡಿದಾಗಲೇ ಹೌಹಾರಿ ಅದಕ್ಕೂ ಗಾಬರಿ ಹುಟ್ಟಿಸುವ ಪ್ರಮೇಯವೇ ಹೆಚ್ಚು. ಅದರಲ್ಲಿಯೂ ಹಾವುಗಳ ಮಿಲನದ ಸೊಬಗನ್ನು ಕಣ್ಣಾರೆ ನೋಡಲು ಸಿಗುವುದು ಬಹು ಅಪರೂಪ ಎಂದರೆ ತಪ್ಪಾಗದು.

ಡ್ಯಾನ್ಸ್ ರೀಲ್‌ಗಳು, ತಮಾಷೆಯ ವಿಡಿಯೋಗಳು ಹೀಗೆ ನಾನಾ ರೀತಿಯ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಮೂಡಿಸುತ್ತವೆ. ಹಾವಿನ ವಿಡಿಯೋಗಳನ್ನು ನೋಡಿದಾಗ ಭಯ ಅವರಿಸಿದರೂ ಕೂಡ ಅವುಗಳ ವೀಡಿಯೋ ನೋಡಲು ಉತ್ಸಾಹ ತೋರುವವರು ಇದ್ದಾರೆ. ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ ಎರಡು ಹಾವುಗಳ ಮಿಲನ ಮಹೋತ್ಸವವನ್ನು ನೋಡುವ ಅವಕಾಶ ನಿಮ್ಮದಾಗಿಸಿಕೊಳ್ಳಬಹುದು.

https://www.instagram.com/p/CQI-WFphuaC/?igshid=Yzg5MTU1MDY=

ಕೆಲವರ ಅಭಿಪ್ರಾಯದ ಅನುಸಾರ, ಮಿಲನದ ವೇಳೆ ಹಾವುಗಳು ಹೀಗೆ ಸುತ್ತಿಕೊಳ್ಳುತ್ತವೆ ಎನ್ನಲಾಗುತ್ತದೆ. ವಿಜ್ಞಾನಿಗಳ ಅನಿಸಿಕೆ ವಿಮರ್ಶೆ ಪ್ರಕಾರ ಸುರುಳಿಯಾಕಾರದ ಕುತ್ತಿಗೆಯಲ್ಲಿ ಒಟ್ಟಿಗೆ ಸುತ್ತಿಕೊಂಡಿರುವ ಹಾವುಗಳು ವಾಸ್ತವವಾಗಿ ಜಿದ್ದಿಗೆ ಬಿದ್ದಂತೆ ಸೆಣಸಾಡುವ ಪ್ರಕ್ರಿಯೆ ಆಗಿದ್ದು ಅದು ಮಿಲನ ಇಲ್ಲವೇ ನೃತ್ಯವಲ್ಲ ಎನ್ನುತ್ತಾರೆ. ಅಷ್ಟೆ ಅಲ್ಲದೆ, ವಾಸ್ತವವಾಗಿ ಒಂದೇ ಜಾತಿಯ ಎರಡು ಗಂಡು ಹಾವುಗಳ ನಡುವಿನ ಕುಸ್ತಿ ಪಂದ್ಯದಂತೆ ಎಂದು ಬಲ್ಲವರ ಎಣಿಕೆಯಾಗಿದೆ.

ಈ ಅಚ್ಚರಿಯ ವಿಡಿಯೋವನ್ನು ಗುಂಜನ್ ಕಪೂರ್ ಎಂಬುವವರು ತಮ್ಮ ಇನ್ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ಹಂಚಿಕೊಂಡಿದ್ದು, ಎರಡು ಹಾವುಗಳು ಚಲಿಸುತ್ತಿರುವ ಹಾಗೂ ಪರಸ್ಪರ ಸುತ್ತಿಕೊಂಡಿರುವುದನ್ನು ಗಮನಿಸಬಹುದು.

ಇದು ಅಪರೂಪದ ದೃಶ್ಯವಾಗಿದ್ದು, ವಾಸ್ತವವಾಗಿ ಎರಡು ಹಾವುಗಳ ನೃತ್ಯ ವೆಂದು ಕೆಲವರು ಅಭಿಪ್ರಾಯ ಪಟ್ಟರೆ ಮತ್ತೆ ಕೆಲವರು ಅದನ್ನು ಮಿಲನ ಸಂಗಮ ಎಂದು ಬಣ್ಣಿಸುತ್ತಾರೆ. ಸದ್ಯ, ಈ ವಿಡಿಯೋ ಸುಮಾರು ಒಂದು ಲಕ್ಷ ವೀಕ್ಷಣೆ ಪಡೆದಿದೆ. ತಮ್ಮ ತಿಳುವಳಿಕೆ ಅನುಸಾರ ವಿಭಿನ್ನ ಅಭಿಪ್ರಾಯ ಹೊರ ಹಾಕಿದರೂ ಕೂಡ ಹಾವಿನ ಮಿಲನ ಮಹೋತ್ಸವ ನೋಡುಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ ಎಂಬುದಂತೂ ಸ್ಪಷ್ಟ.

Leave A Reply

Your email address will not be published.