ಅಪ್ರಾಪ್ತ ವಯಸ್ಕರಿಗೆ ಪಾನ್ ಕಾರ್ಡ್ ಯಾವಾಗ ಮಾಡಿಸಬೇಕು? | ಅರ್ಜಿ ಸಲ್ಲಿಸುವ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ

ಪ್ರತಿಯೊಬ್ಬ ನಾಗರಿಕನಿಗೂ ಗುರುತಿನ ಚೀಟಿಯಾದ ಆಧಾರ್ ಕಾರ್ಡ್ ಹೇಗೆ ಮುಖ್ಯನೋ ಹಾಗೆಯೇ ಪಾನ್ ಕಾರ್ಡ್ ಕೂಡ ಅಷ್ಟೇ ಮುಖ್ಯ. ಹಾಗಾಗಿ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೂ ಎಲ್ಲರೂ ಪಾನ್ ಕಾರ್ಡ್ ಹೊಂದುವುದು ಮುಖ್ಯ.

ಆದ್ರೆ, 18 ವರ್ಷ ವಯಸ್ಸಿನ ನಂತರವೇ ಪಾನ್ ಕಾರ್ಡ್ ಮಾಡಬಹುದು ಎಂಬುದು ಹೆಚ್ಚಿನವರ ಅಭಿಪ್ರಾಯ. ಆದಾಯ ತೆರಿಗೆ ಇಲಾಖೆಯ ನಿಯಮಗಳ ಪ್ರಕಾರ, ಐಟಿಆರ್ ಸಲ್ಲಿಸಲು ಯಾವುದೇ ಮಿತಿಯಿಲ್ಲ. ಅಪ್ರಾಪ್ತ ವಯಸ್ಕನು ತಿಂಗಳಿಗೆ 15,000 ರೂ.ಗಿಂತ ಹೆಚ್ಚು ಗಳಿಸಿದರೆ, ಅವನು ಐಟಿಆರ್ ಅನ್ನು ಸಲ್ಲಿಸಬಹುದು.

ನಿಗಮಗಳು, ಸಂಸ್ಥೆಗಳು ಮತ್ತು ಸ್ಥಳೀಯ ಸರ್ಕಾರಗಳು ಸೇರಿದಂತೆ ತೆರಿಗೆಗಳನ್ನು ಪಾವತಿಸುವ ಪ್ರತಿಯೊಬ್ಬರಿಗೂ PAN ಕಾರ್ಡ್ ಅವಶ್ಯಕವಾಗಿದೆ. ಹೀಗಾಗಿ ತೆರಿಗೆ ಪಾವತಿಸುವ ಪ್ರತಿಯೊಬ್ಬ ಜನರಿಗೂ ಪಾನ್ ಕಡ್ಡಾಯ. ಅಪ್ರಾಪ್ತ ವಯಸ್ಕರ ಪಾನ್ ಕಾರ್ಡ್ ಮಾಡಲು ಪೋಷಕರು ಅರ್ಜಿ ಸಲ್ಲಿಸಬೇಕು. ಐಟಿಆರ್ ಸಲ್ಲಿಸುವುದು ಪೋಷಕರ ಜವಾಬ್ದಾರಿಯೂ ಹೌದು. ಅಪ್ರಾಪ್ತರ ಹೆಸರಿನಲ್ಲಿ ನೀಡಲಾದ ಪಾನ್ ಕಾರ್ಡ್‌ನಲ್ಲಿ ಫೋಟೋ ಮತ್ತು ಸಹಿ ಇರುವುದಿಲ್ಲ. ಇದನ್ನು ಪ್ರಮಾಣಪತ್ರವಾಗಿ ಬಳಸಲಾಗುವುದಿಲ್ಲ. ಮಗುವಿಗೆ 18 ವರ್ಷ ತುಂಬಿದಾಗ, ಪಾನ್ ಕಾರ್ಡ್ ನವೀಕರಣಕ್ಕಾಗಿ ಒಬ್ಬರು ಅರ್ಜಿ ಸಲ್ಲಿಸಬೇಕು.

ಮಕ್ಕಳ ಪಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವ ವಿಧಾನ :
* ಮೊದಲು NSDL ನ ವೆಬ್‌ಸೈಟ್‌ಗೆ ಹೋಗಿ.
* ಫಾರ್ಮ್ 49A ಅನ್ನು ಭರ್ತಿ ಮಾಡಲು ಸೂಚನೆಗಳನ್ನು ಓದಿ. ಸರಿಯಾದ ವರ್ಗವನ್ನು ಆರಿಸುವ ಮೂಲಕ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ.
* ಈಗ ಅಪ್ರಾಪ್ತ ವಯಸ್ಸಿನ ಪ್ರಮಾಣಪತ್ರ ಸೇರಿದಂತೆ ಇತರ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
* 107 ರೂ. ಪಾವತಿ ಮಾಡುವ ಮೂಲಕ ಕಾರ್ಯವಿಧಾನವನ್ನು ಪೂರ್ಣಗೊಳಿಸಿ.
* ನಂತ್ರ, ಸಲ್ಲಿಸು(submit) ಬಟನ್ ಮೇಲೆ . ಸ್ವೀಕೃತಿ ಸಂಖ್ಯೆಯನ್ನು ನೀಡಲಾಗುವುದು, ಅದನ್ನು ಅರ್ಜಿಯ ಸ್ಥಿತಿಯನ್ನು ಪರಿಶೀಲಿಸಲು ಬಳಸಬಹುದು. ಯಶಸ್ವಿ ಪರಿಶೀಲನೆಯ ನಂತರ, ಪ್ಯಾನ್ ಕಾರ್ಡ್ ಅನ್ನು 15 ದಿನಗಳಲ್ಲಿ ನಿಮಗೆ ತಲುಪಿಸಲಾಗುತ್ತದೆ.

ಮಕ್ಕಳಿಗೆ ಪಾನ್ ಕಾರ್ಡ್, ಪೋಷಕರು ಮಗುವಿನ ಹೆಸರಿನಲ್ಲಿ ಹೂಡಿಕೆ ಮಾಡುವಾಗ, ನಿಮ್ಮ ಹೂಡಿಕೆಯ ಫಲಾನುಭವಿಯಾಗಿ ನಿಮ್ಮ ಮಗುವನ್ನು ಗೊತ್ತುಪಡಿಸಿದಾಗ, ಮಗುವಿನ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆಯಲು ಉದ್ದೇಶಿಸಿದಾಗ, ಮಗು ಸ್ವತಃ ಸಂಪಾದನೆ ವೇಳೆ ಪಾನ್ ಕಾರ್ಡ್ ಮಾಡಿಸಬೇಕು.

Leave A Reply

Your email address will not be published.