ಕಮರ್ಷಿಯಲ್​ ವಾಹನಗಳ ಎಫ್​​​ಸಿಗೆ ಟ್ರಾಫಿಕ್ ಪೊಲೀಸ್ ಫೈನ್​ ಲೆಟರ್ ಕಡ್ಡಾಯ – ವಾಹನ ಮಾಲೀಕರೇ ಗಮನಿಸಿ

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಹಳೆಯ ವಾಹನಗಳನ್ನು ಮಾರಾಟ ಮಾಡುವ ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡಿದ್ದು, ವಿತರಕರ ನೋಂದಣಿಯನ್ನು ಕಡ್ಡಾಯಗೊಳಿಸಿದೆ. ಎಲೆಕ್ಟ್ರಾನಿಕ್ ವಾಹನ ಟ್ರಿಪ್ ನೋಂದಣಿ ಕಡ್ಡಾಯವಾಗಿದ್ದು, ಈ ಹಂತದಲ್ಲಿ, ಕಾರನ್ನು ಎಷ್ಟು ಕಿಲೋಮೀಟರ್ ಓಡಾಟ ನಡೆಸಲಾಗಿದೆ ಜೊತೆಗೆ ಚಾಲಕನ ಮಾಹಿತಿ ಹೀಗೆ ವಾಹನದ ಬಳಕೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕಾಗುತ್ತದೆ.

 

ಯೆಲ್ಲೋ ಬೋರ್ಡ್ ವಾಹನ ಮಾಲೀಕರು ಈಗಾಗಲೇ ನೂರಾರು ಕೋಟಿ ದಂಡ ಬಾಕಿ ಉಳಿಸಿಕೊಂಡಿದ್ದು, ಹೀಗಾಗಿ ಎಫ್ ಸಿ ಗೆ ಟ್ರಾಫಿಕ್ ಪೊಲೀಸ್ ಫೈನ್ ಲೆಟರ್ ಕಡ್ಡಾಯ ಮಾಡಬೇಕೆಂದು ಸಾರಿಗೆ ಇಲಾಖೆಗೆ ಟ್ರಾಫಿಕ್ ಪೊಲೀಸರು ಒತ್ತಡ ಹೇರಿದ್ದಾರೆ ಎನ್ನಲಾಗುತ್ತಿದೆ. ವಾಣಿಜ್ಯ ಉದ್ದೇಶ ವಾಹನಗಳಿಂದ ಕೋಟ್ಯಾಂತರ ರೂಪಾಯಿ ದಂಡ ಪಾವತಿಗೆ ಬಾಕಿ ಉಳಿದಿದ್ದು, ವಾಹನ ಮಾಲೀಕರು ದಂಡ ಕಟ್ಟದೇ ಇರುವ ಹಿನ್ನೆಲೆ ಸಂಚಾರಿ ಪೊಲೀಸರು ಈ ಸಲುವಾಗಿ ಮೋಟಾರು ವಾಹನ ಕಾಯಿದೆಗೆ ತಿದ್ದುಪಡಿ ತರಲು ಪೊಲೀಸ್ ಇಲಾಖೆ ಮನವಿ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳು ಮೂರು ನಾಲ್ಕು ಬಾರಿ ಸಭೆ ನಡೆಸಿದ್ದಾರೆ.

ರಾಜ್ಯ ಸಾರಿಗೆ ಇಲಾಖೆ ತಿದ್ದುಪಡಿ ತರುವ ನಿಟ್ಟಿನಲ್ಲಿ ಸರ್ಕಾರಕ್ಕೆ ಪ್ರಸ್ತಾಪ ನೀಡಿದ್ದು, ಆದರೆ ಯಲೋ ಬೋರ್ಡ್ ಚಾಲಕರು ಎಫ್ ಸಿ (Fitness Certificate) ಮಾಡಿಸಲು ಹರ ಸಾಹಸ ಪಡುತ್ತಿದ್ದಾರೆ ಎನ್ನಲಾಗಿದೆ. ಈ ರೀತಿಯ ಪರಿಸ್ಥಿತಿಯಲ್ಲಿ RTO ಮತ್ತು ಪೊಲೀಸ್ ಇಲಾಖೆ ಜಾರಿಗೆ ತರುವ ಎನ್ಓಸಿ (NOC) ನೀತಿ ಸರಿಯಲ್ಲ ಎನ್ನಲಾಗುತ್ತಿದೆ. ರಾಜ್ಯದಲ್ಲಿ 30,42,350 ವಾಣಿಜ್ಯ ಉದ್ದೇಶದ ವಾಹನಗಳಿಗಳಿವೆ.

ಯಲ್ಲೋ ಬೋರ್ಡ್ ವಾಹನ ಮಾಲೀಕರು ನೂರಾರು ಕೋಟಿ ದಂಡ ಬಾಕಿ ಉಳಿಸಿಕೊಂಡಿದ್ದಾರೆ. ಹಾಗಾಗಿ ಎಫ್ ಸಿ ಗೆ ಟ್ರಾಫಿಕ್ ಪೊಲೀಸ್ ಫೈನ್ ಲೆಟರ್ ಕಡ್ಡಾಯ ಮಾಡಿ ಎಂದು ಸಾರಿಗೆ ಇಲಾಖೆ ಮೇಲೆ ಇತ್ತ ಟ್ರಾಫಿಕ್ ಪೊಲೀಸರು ಒತ್ತಡ ಹಾಕಟ್ಟಿದ್ದಾರೆ. ಆದರೆ ಯಲ್ಲೋ ಬೋರ್ಡ್ ವಾಹನ ಮಾಲೀಕರು ಮಾತ್ರ ಇದು ಸರಿಯಲ್ಲ. ದಂಡ ಪಾವತಿ ಮಾಡಿದರೆ ಮಾತ್ರ ಎಫ್ ಸಿ ಮಾಡುವ ಬಗ್ಗೆ ಯೋಜನೆ ಹಾಕಿದ್ದು,ಈ ಆದೇಶವನ್ನು ಯಾವುದೇ ಕಾರಣಕ್ಕೂ ಮಾಡಬಾರದು ಎನ್ನುತ್ತಿದ್ದಾರೆ.

ದಶಕಕ್ಕೂ ಹೆಚ್ಚು ಕಾಲ ದಂಡ ಕಟ್ಟದಿದ್ದರುವ ವಾಹನ ಮಾಲೀಕರು, ಕಮರ್ಷಿಯಲ್​ ವಾಹನಗಳಿಂದ ಕೋಟ್ಯಂತರ ರೂಪಾಯಿ ದಂಡ ಬಾಕಿ ಇರುವ ಹಿನ್ನೆಲೆ ಕ್ರಮ ಕೈಗೊಳ್ಳಲು ಮುಂದಾಗಿದೆ. ದಂಡ ಕಟ್ಟದಿದ್ದರು ಸಂಚಾರಿ ಪೊಲೀಸರು ಅಸಹಾಯಕರಾಗಿದ್ದಾರೆ.

ವಾಣಿಜ್ಯ ಬಳಕೆ ವಾಹನಗಳಿಗೆ ಪ್ರತಿ 2 ವರ್ಷಕ್ಕೆ ಎಫ್ಸಿ ನವೀಕರಿಸಬೇಕಾಗಿದೆ. ವಿಮೆ ಮತ್ತು ಎಮಿಷನ್ ಸರ್ಟಿಫಿಕೇಟ್ ಹೊಂದಿರಬೇಕು ಎಂಬ ನಿಯಮವಿದೆ. ಆದರೂ ಕೂಡ ಸಂಚಾರ ನಿಯಮ ಉಲ್ಲಂಘನೆ ದಂಡ ಬಾಕಿ ಈ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂಬುದನ್ನು ಗಮನಿಸಬೇಕು. ಎಫ್​​​ಸಿ ನವೀಕರಣಕ್ಕೆ ಪೊಲೀಸ್ ಇಲಾಖೆಯ ಎನ್ಒಸಿ ಕಡ್ಡಾಯಕ್ಕೆ ಚಿಂತನೆ ಮಾಡಲಾಗಿದೆ.

ಸಾರಿಗೆ ಇಲಾಖೆಯ ಯೋಜನೆ ಹೀಗಿದೆ:
ವಿಮೆ ನವೀಕರಿಸುವಾಗ ನಿಯಮ ಉಲ್ಲಂಘನೆ ಬಗ್ಗೆ ಪರಿಶೀಲಿಸಬೇಕು. ದಂಡ ಬಾಕಿ ಉಳಿಸಿಕೊಂಡಿರುವ ಬಗ್ಗೆ ಕಡ್ಡಾಯ ಪರಿಶೀಲನೆ ಮಾಡಬೇಕು.ದಂಡ ಬಾಕಿ ಉಳಿಸಿಕೊಂಡಿದ್ದರೆ ವಿಮೆ ನವೀಕರಣ ತಡೆ ಹಿಡಿಯಬೇಕಾಗಿದೆ. ಇದರ ಜೊತೆಗೆ ದಂಡ ಬಾಕಿ ಪಾವತಿಸಿದ ಬಳಿಕವಷ್ಟೇ ವಿಮೆ ನವೀಕರಿಸಬೇಕು. ಸಂಚಾರ ನಿಯಮ ಉಲ್ಲಂಘನೆ ಬಗ್ಗೆ ಅಪ್ಲಿಕೇಷನ್ ರೂಪಿಸಲಾಗುತ್ತದೆ.ಆ ಅಪ್ಲಿಕೇಷನ್​​ನಲ್ಲಿ ದಂಡ ಉಳಿಸಿಕೊಂಡಿರುವ ವಿವರ ಲಭ್ಯವಾಗುತ್ತದೆ.ಮೊದಲು ಬೆಂಗಳೂರು ನಗರಕ್ಕೆ ಸೀಮಿತವಾಗಿ ಈ ವ್ಯವಸ್ಥೆ ಜಾರಿಯಾಗುತ್ತದೆ ಎನ್ನಲಾಗಿದೆ.

Leave A Reply

Your email address will not be published.