Heart Health: ಬಿಸಿಲಲ್ಲಿ ಸುತ್ತಾಡದವರಿಗೊಂದು ಕಿವಿಮಾತು | ಈ ಹೊಸ ಅಧ್ಯಯನದ ಕುರಿತು ಕಿರು ಪರಿಚಯ ನಿಮಗೆ ತಿಳಿದಿರಲಿ
ಕಳೆದ ಕೆಲವು ವರ್ಷಗಳಿಂದ ಅತೀ ಹೆಚ್ಚಾಗಿ ಕಂಡು ಬರುವ ಕಾಯಿಲೆಯೆಂದರೆ ಹೃದ್ರೋಗ. ಕಳಪೆ ಜೀವನಶೈಲಿ, ಆಹಾರದ ಕ್ರಮ, ವ್ಯಾಯಮ ಮಾಡದೇ ಇರುವುದು ಇದಕ್ಕೆ ಮುಖ್ಯ ಕಾರಣ. ಆದರೆ ಹೊಸ ಅಧ್ಯಯನದ ಪ್ರಕಾರ, ವಿಟಮಿನ್ ಡಿ ಕೊರತೆಯು ಹೃದ್ರೋಗವನ್ನು ಉತ್ತೇಜಿಸುತ್ತದೆ ಎಂಬುದನ್ನು ಕಂಡು ಹಿಡಿದಿದೆ. ವಿಟಮಿನ್ ಡಿ ಯ ಮುಖ್ಯ ಮೂಲ ಸೂರ್ಯನ ಬೆಳಕು. ಬಿಸಿಲಿನಲ್ಲಿ ನೀವೆನಾದರೂ ಅತಿಯಾಗಿ ಸುತ್ತಾಡುತ್ತಿದ್ದರೆ ಈ ಸಮಸ್ಯೆಗಳು ನಿಮ್ಮನ್ನು ಅಷ್ಟು ಸುಲಭವಾಗಿ ಬಾಧಿಸುವುದಿಲ್ಲ. ವಿಟಮಿನ್ ಡಿ ಹಂತ ಹೆಚ್ಚಿರುವ ಜನರಿಗಿಂತ ಈ ಅಂಶಗಳಿಲ್ಲದ ಜರನಲ್ಲಿಯೇ ಹೃದ್ರೋಗ ಸಮಸ್ಯೆಗಳು ಹೆಚ್ಚಾಗಿ ಬಾಧಿಸಲಿವೆ ಎಂಬುದು ತಿಳಿದುಬಂದಿದೆ.
ವಿಟಮಿನ್ ಡಿ ಕೊರತೆಯ ಕಾರಣ ಕಂಜಕ್ಟೈವ್ ಹಾರ್ಟ್ ಫೆಲ್ಯೂರ್ ಹಾಗೂ ಪಾರ್ಶ್ವವಾಯುವಿಗೆ ಕಾರಣವಾಗುತ್ತಿವೆ ಎಂದು ಹೇಳಿದೆ. ಕಳೆದ ವರ್ಷದ ಆರಂಭದಲ್ಲಿ, ದಕ್ಷಿಣ ಆಸ್ಟ್ರೇಲಿಯಾದ ಕ್ಯಾನ್ಸರ್ ಸಂಶೋಧನಾ ಸಂಸ್ಥೆಯ ಆಸ್ಟ್ರೇಲಿಯನ್ ಸೆಂಟರ್ ಫಾರ್ ಪ್ರಿಸಿಶನ್ ಹೆಲ್ತ್‌ನ ನಿರ್ದೇಶಕಿ ಪ್ರೊಫೆಸರ್ ಅಲೀನಾ ಹೈಪೋಲಿನ್ ಮತ್ತು ಅವರ ತಂಡವು ವಿಟಮಿನ್ ಡಿ ಕೊರತೆಯು ರಕ್ತದೊತ್ತಡ ಮತ್ತು ಸಿವಿಡಿಯ ಅಪಾಯವನ್ನು ಹೆಚ್ಚಿಸುತ್ತದೆ ಎಂಬುದಕ್ಕೆ ಪುರಾವೆಗಳನ್ನು ಕಂಡುಕೊಂಡಿದೆ.
ವಿಟಮಿನ್ ಡಿ ಕೊರತೆಯಿಂದ ಮುಖ್ಯವಾಗಿ ಅಧಿಕ ರಕ್ತದೊತ್ತಡ, ರಕ್ತ ಹೆಪ್ಪುಗಟ್ಟಿ ಹೃದಯ ಸ್ತಂಭನ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗಬಹುದು ಎಂದು ತೋರಿಸುತ್ತಿವೆ.ಇದನ್ನು ಹೊರತುಪಡಿಸಿ, ದಿ ಜರ್ನಲ್ ವರದಿ ಫ್ಯಾಮಿಲಿ ಮೆಡಿಸಿನ್ ಮತ್ತು ಪ್ರೈಮರಿ ಕೇರ್, ಅಕಾಡೆಮಿ ಆಫ್ ಫ್ಯಾಮಿಲಿ ಫಿಸಿಶಿಯನ್ಸ್ ಇನ್ ಇಂಡಿಯಾದ ಅಧಿಕೃತ ಜರ್ನಲ್ ಮಾಡಿರುವ ವರದಿ ಪ್ರಕಾರ, ಕಡಿಮೆ ಮಟ್ಟದ ವಿಟಮಿನ್ ಡಿ ಹೊಂದಿರುವ ರೋಗಿಗಳಲ್ಲಿ ಶೇ.60%ರಷ್ಟು ಹೃದ್ರೋಗದ ಅಪಾಯವು ಹೆಚ್ಚಾಗಿದೆ ಎಂದು ಬಹಿರಂಗಪಡಿಸಿದೆ. ಇದಲ್ಲದೆ, ಜರ್ನಲ್ ಆಫ್ ಕ್ಲಿನಿಕಲ್’ನ ವರದಿಯಲ್ಲಿ, ವಿಟಮಿನ್ ಬಿ ಕೊರತೆಯಿಂದಾಗಿ ಹೈಪರ್‌ಟೆನ್ಶನ್ ಹೃದಯ ವೈಫಲ್ಯ ಸಂಭವಿಸುತ್ತದೆ ಎಂದು ಹೇಳುತ್ತದೆ.
ನೀವು ಹೃದಯದ ಸಮಸ್ಯೆಗಳಿಂದ ಬಳಲುತ್ತಿದ್ದರೆ, ನಿಮಗೆ ವಿಟಮಿನ್ ಡಿ ಕೊರತೆಯಿರುವ ಸಾಧ್ಯತೆ ಹೆಚ್ಚು. ವಿಟಮಿನ್ ಡಿ ಸೇವನೆಯನ್ನು ಹೆಚ್ಚಿಸುವುದರಿಂದ ಹೃದಯದ ಆರೋಗ್ಯವನ್ನು ಉತ್ತೇಜಿಸುವುದರ ಜೊತೆಗೆ ಜೀವನದ ಗುಣಮಟ್ಟವನ್ನು ಸುಧಾರಿಸುತ್ತದೆ. ಅಲ್ಲದೇ, ದೇಹದಲ್ಲಿ ಉರಿಯೂತದ ಗುಣಲಕ್ಷಣಗಳೊಂದಿಗೆ ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ರಕ್ತದೊತ್ತಡವನ್ನು ಕಾಪಾಡಿಕೊಳ್ಳಲು ನೇರವಾಗಿ ಸಹಾಯ ಮಾಡುತ್ತದೆ. ನಿಮ್ಮ ದೇಹದಲ್ಲಿ ಸಾಕಷ್ಟು ಪ್ರಮಾಣದ ವಿಟಮಿನ್ ಡಿ ಇದ್ದರೆ, ಹೃದಯ ಮತ್ತು ರಕ್ತನಾಳಗಳನ್ನು ಉತ್ತಮ ಸ್ಥಿತಿಯಲ್ಲಿ ಇರಿಸುತ್ತದೆ. ಇದು ರಕ್ತನಾಳಗಳ ಗೋಡೆಯ ಮಟ್ಟವನ್ನು ಬಲಪಡಿಸುತ್ತದೆ, ಇದರಿಂದ ರಕ್ತವು ಮುಕ್ತವಾಗಿ ಹರಿಯುತ್ತದೆ.
ವಿಟಮಿನ್-ಡಿ ನಮ್ಮ ದೇಹಕ್ಕೆ ಯಾಕೆ ಬೇಕು ಅಂದ್ರೆ, ನಮ್ಮ ಮೂಳೆಯ ಶಕ್ತಿ ಮತ್ತು ಸ್ನಾಯುಗಳು ಸ್ಟ್ರಾಂಗ್ ಆಗಲು ಬೇಕು. ಕ್ಯಾನ್ಸರ್, ಹೃದ್ರೋಗ ಮತ್ತು ಟೈಪ್ 2 ಮಧುಮೇಹದಂತಹ ಅಪಾಯಕಾರಿ ರೋಗಗಳನ್ನು ಕಡಿಮೆ ಮಾಡಲು ವಿಟಮಿನ್ ಡಿ ಬೇಕು. ಮತ್ತು ಪ್ರತಿರಕ್ಷಣಾ ವ್ಯವಸ್ಥೆ ಬಲಪಡಿಸಲು ವಿವಿಧ ಆರೋಗ್ಯ ಪರಿಸ್ಥಿತಿಗಳಿಗೆ ವಿಟಮಿನ್ ಡಿ ಅವಶ್ಯಕವಾಗಿ ಬೇಕು ಎಂದು ಸಂಶೋಧನೆಗಳು ಹೇಳುತ್ತವೆ. ಕೊಲೊನ್, ಪ್ರಾಸ್ಟೇಟ್ ಮತ್ತು ಸ್ತನ ಕ್ಯಾನ್ಸರ್ ಬೆಳವಣಿಗೆ ನಿಯಂತ್ರಿಸುವಲ್ಲಿ ವಿಟಮಿನ್ ಡಿ ಪರಿಣಾಮಕಾರಿ ಎಂದು ಕೆಲವು ಅಧ್ಯಯನಗಳು ಹೇಳಿವೆ.
ವಿಟಮಿನ್ ಡಿ ಯ ಮುಖ್ಯ ಮೂಲ ಸೂರ್ಯನ ಬೆಳಕು ಎಂಬುವುದು ಈಗಾಗಲೆ ಎಲ್ಲರಿಗೂ ತಿಳಿದಿದೆ. ಆದರೆ ಕೆಲವೊಮ್ಮೆ ನಗರ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ವಿಶೇಷವಾಗಿ ಸಾಂಕ್ರಾಮಿಕ ರೋಗದ ನಂತರ ಹೊರಗಿನಿಂದ ಸಾಕಷ್ಟು ವಿಟಮಿನ್ ಡಿ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ, ಮನೆ ಒಳಗಡೆ ಸುರಕ್ಷಿತವಾಗಿ ಕುಳಿತರೂ ಸಹ ಆರೋಗ್ಯ ಸಮಸ್ಯೆಗಳು ಕಾಡುತ್ತಿರಬಹುದು. ಸೂರ್ಯನ ಬೆಳಕಿನ ಕೊರತೆಯಿಂದ ವಿಟಮಿನ್ ಡಿ ಕೊರತೆ ಕಂಡು ಬಂದಿರಬಹುದು. ಇದು ದೀರ್ಘಕಾಲದವರೆಗೆ ಮನುಷ್ಯನ ದೇಹದ ಮೇಲೆ ಮತ್ತು ಮನಸ್ಥಿತಿಯ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ತೋರಿಸುತ್ತದೆ
ಆದ್ದರಿಂದ ಈ ಕೊರತೆಯನ್ನು ಪೂರೈಸಲು ಪೂರಕ ಅಗತ್ಯವಿದೆ.
ವಿಟಮಿನ್ ಡಿ ಯ ಕೆಲವು ಉತ್ತಮ ಮೂಲಗಳಲ್ಲಿ ಸಾಲ್ಮನ್, ಸಾರ್ಡೀನ್, ಹೆರಿಂಗ್ ಮತ್ತು ಮ್ಯಾಕೆರೆಲ್, ಹಾಗೆಯೇ ಕೆಂಪು ಮಾಂಸ, ಮೊಟ್ಟೆಯ ಹಳದಿ ಮತ್ತು ಬಲವರ್ಧಿತ ಆಹಾರಗಳು ಸೇರಿವೆ. ಇದಲ್ಲದೆ, ಇದನ್ನು ಹೊರತು ಪಡಿಸಿದರೆ ಕಿತ್ತಳೆ, ಮೊಸರು, ಬೆಳ್ಳುಳ್ಳಿ, ಚಾಕಲೇಟ್, ಕಪ್ಪು ಸಾಸಿವೆ, ಅಣಬೆಗಳು, ಅರಿಶಿಣದಂತಹ ಆಹಾರದಲ್ಲಿ ವಿಟಮಿನ್ ಡಿ ಪ್ರಮಾಣ ಅಧಿಕವಾಗಿರುತ್ತದೆ. ಪೌಷ್ಟಿಕ ಆಹಾರದ ಸೇವನೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ಆರೋಗ್ಯ ಸುಧಾರಣೆಯನ್ನು ಮಾಡಿಕೊಳ್ಳಬಹುದು.