ಮಾರುಕಟ್ಟೆಗೆ ಬಂದಿಗೆ ಬಕೆಟ್‌ ಗೀಸರ್‌ | ಇನ್ನು ಬಿಸಿ ನೀರಿಗೆ ಚಿಂತೆ ಮಾಡಬೇಕಾಗಿಲ್ಲ

Share the Article

ಆಧುನಿಕ ಜೀವನದಲ್ಲಿ ಬಿಡುವಿಲ್ಲದ ಜೀವನ ಶೈಲಿ ನಮ್ಮದಾಗಿದೆ. ಹಾಗಿರುವಾಗ ನಾವು ನಮ್ಮ ಬಗೆಗಿನ ಕಾಳಜಿ ವಹಿಸಲು ಸಮಯ ಅವಕಾಶ ಇರುವುದಿಲ್ಲ. ಅದಲ್ಲದೆ ದಿನ ಇಡೀ ಕೆಲಸ ಮಾಡಿ ಸುಸ್ತು ಆಗಿರುವಾಗ ಬೆಚ್ಚಗೆ ಸ್ನಾನ ಮಾಡಬೇಕು ಅನ್ನಿಸುತ್ತೆ ಅಲ್ವಾ. ಹಾಗಿದ್ದರೆ ನಿಮಗಾಗಿ ಬಕೆಟ್‌ನಲ್ಲಿಯೇ ನೀರು ಬಿಸಿ ಮಾಡಬಲ್ಲ ಸೌಕರ್ಯವನ್ನು ಹೊಂದಿರು ವ ಬಕೆಟ್ ಗೀಸರ್ ಅನ್ನು ಪರಿಚಯಿಸಲಾಗಿದೆ.

ಹೌದು ಸುಮಾರು 20 ಲೀಟರ್‌ನಿಂದ 25 ಲೀಟರ್‌ಗಳಷ್ಟು ನೀರನ್ನು ಒಂದೇ ಬಾರಿಗೆ ಬಿಸಿ ಮಾಡಬಹುದಾದ ಬಕೆಟ್ ಗೀಸರ್ ಬಗ್ಗೆ ನೀವು ತಿಳಿದುಕೊಳ್ಳಲೇ ಬೇಕು. ಸಾಮಾನ್ಯ ಗೀಸರ್‌ಗಳಿಗೆ ಹೋಲಿಸಿದರೆ, ಇದು ಅತ್ಯಂತ ಆರ್ಥಿಕ, ಅತ್ಯಂತ ಶಕ್ತಿಯುತ ಉತ್ಪನ್ನವಾಗಿದೆ.

ಇದು ಕಡಿಮೆ ಬಜೆಟ್ ನಲ್ಲಿ ನಿಮಗೆ ದೊರೆಯುತ್ತದೆ.
ಹೌದು, ಇತ್ತೀಚಿನ ದಿನಗಳಲ್ಲಿ ಬಕೆಟ್ ಗೀಸರ್ ಹೆಚ್ಚು ಟ್ರೆಂಡ್ ಆಗಿದೆ. ಎಲ್ಲಿ ಬೇಕಾದರೂ ಸುಲಭವಾಗಿ ಕೊಂಡೊಯ್ಯಬಹುದಾಗಿದೆ.

ಈ ಬಕೆಟ್ ಗೀಸರ್ ಅನ್ನು ಗ್ರಾಹಕರು ₹ 1200 ರಿಂದ ₹ 2000 ಗಳಲ್ಲಿ ಖರೀದಿಸಬಹುದಾಗಿದೆ. ವಿಶೇಷವೆಂದರೆ ಇದು ಆಫ್‌ಲೈನ್ ಮತ್ತು ಆನ್‌ಲೈನ್ ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಿದೆ.

ಬಕೆಟ್ ಗೀಸರ್ ವೈಶಿಷ್ಟ್ಯಗಳು:

  • ಇದರಲ್ಲಿ ಸುಮಾರು 20 ಲೀಟರ್‌ನಿಂದ 25 ಲೀಟರ್‌ಗಳಷ್ಟು ನೀರನ್ನು ಒಂದೇ ಬಾರಿಗೆ ಬಿಸಿ ಮಾಡಬಹುದಾಗಿದೆ.
  • ಸಾಮಾನ್ಯ ಗೀಸರ್‌ಗಳಿಗೆ ಹೋಲಿಸಿದರೆ, ಇದು ಅತ್ಯಂತ ಆರ್ಥಿಕ, ಅತ್ಯಂತ ಶಕ್ತಿಯುತ ಉತ್ಪನ್ನವಾಗಿದೆ.
  • ಇದರಲ್ಲಿರುವ ನೀರನ್ನು ಕಾಯಿಸಲು ಹೆಚ್ಚು ಶ್ರಮಪಡಬೇಕಿಲ್ಲ.
  • ಬಕೆಟ್ ಒಳಗೆ ಬಿಸಿಮಾಡಲು ಇಮ್ಮರ್ಶನ್ ಹೀಟರ್ ಇದೆ.
  • ಕ್ಷಣಾರ್ಧದಲ್ಲಿ ನೀರನ್ನು ಬಿಸಿ ಮಾಡಿ ಕೆಲಸ ಮುಗಿದ ನಂತರ ತಕ್ಷಣ ಅದನ್ನು ಕೊಂಡುಹೋಗಬಹುದು.

ಕಡಿಮೆ ಬಜೆಟ್ ನಲ್ಲಿ ನೀವು ಗೀಸರ್ ಕೊಂಡುಕೊಳ್ಳಲು ಯೋಜನೆ ಇದ್ದರೆ ಇದೊಂದು ಉತ್ತಮ ಆಯ್ಕೆ ಆಗಿದೆ

Leave A Reply