ಉಪೇಂದ್ರ ನಿರ್ದೇಶನದ ‘ಯುಐ’ ಸಿನಿಮಾ ಹೀರೋಯಿನ್ ರಿವೀಲ್ !ಇವರೇ ನೋಡಿ ಆ ಕೊಡಗಿನ ಬೆಡಗಿ

Share the Article

ಇಂದು ಇಡೀ ಭಾರತವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುತ್ತಿದ್ದು, ಇತ್ತೀಚೆಗೆ ಬಿಡುಗಡೆಯಾದ ಕೆಲವು ಸಿನಿಮಾಗಳು ಸ್ಯಾಂಡಲ್ ವುಡ್ ನ ಲೆವೆಲ್ ಅನ್ನು ಬೇರೆ ಸ್ಟೇಜ್ ಗೆ ಕೊಂಡು ಹೋಗಿವೆ. ಇದೀಗ ಮತ್ತೆ ಎಲ್ಲರೂ ಕನ್ನಡ ಸಿನಿರಂಗದತ್ತ ತಿರುಗಿ ನೋಡುವಂತೆ ಮಾಡಲು ಉಪೇಂದ್ರ ನಿರ್ದೇಶನದ ‘ಯುಐ’ ಚಿತ್ರ ರೆಡಿಯಾಗುತ್ತಿದೆ. ಸಿನಿಮಾ ಕಥೆಯಿಂದ ಹಿಡಿದು ಎಲ್ಲಾ ವಿಷಯವನ್ನು ಸಸ್ಪೆನ್ಸ್ ಇಟ್ಟಿದ್ದ ಚಿತ್ರ ತಂಡದಿಂದ ಸದ್ಯ ಸಿಹಿ ಸುದ್ಧಿಯೊಂದು ಹೊರಬಿದ್ದಿದೆ.

ರಿಯಲ್ ಸ್ಟಾರ್ ಉಪೇಂದ್ರ ನಟಿಸಿ, ನಿರ್ದೇಶಿಸುತ್ತಿರುವ ಬಹು ನಿರೀಕ್ಷಿತ ಸಿನಿಮಾ `ಯುಐ’ ಚಿತ್ರವು ಕನ್ನಡ ಚಿತ್ರರಂಗದಲ್ಲಿ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿ ಮಾಡುತ್ತಿದೆ. ಆದರೆ ಎಲ್ಲಾ ವಿಷಯಗಳಲ್ಲೂ ಸಸ್ಪೆನ್ಸ್ ಕಾಪಾಡಿಕೊಂಡು ಬಂದಿದ್ದ ತಂಡವು ಇದೀಗ ತಮ್ಮ ಚಿತ್ರದ ನಾಯಕಿ ಯಾರೆಂದು ರಿವೀಲ್ ಮಾಡಿದೆ. ನಾಯಕಿ ಕುರಿತು ಸಾಕಷ್ಟು ಬಾಲಿವುಡ್ ಕ್ವೀನ್ ಗಳ ಹೆಸರು ಕೇಳಿ ಬರುತ್ತಿದ್ದ ಬೆನ್ನಲ್ಲೇ ಕನ್ನಡದ್ದೇ ನಟಿಯಾದ, ಕೊಡಗಿನ ಬೆಡಗಿ ರೀಷ್ಮಾ ನಾನಯ್ಯ ನಮ್ಮ ಚಿತ್ರದ ನಾಯಕಿಯಾಗಿ ಫಿಕ್ಸ್ ಆಗಿದ್ದಾರೆ ಎಂದು ತಿಳಿಸಿದೆ.

ರೀಷ್ಮಾ ನಾನಯ್ಯ ಸದ್ಯ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದು, ಉದಯೋನ್ಮುಖ ನಟಿಯಾಗಿದ್ದಾರೆ. ಮೂಲತಃ ಕೊಡಗಿನವರಾದ ಇವರು ಪ್ರೇಮ್ ನಿರ್ದೇಶನದ `ಎಕ್ ಲವ್ ಯಾ’ ಚಿತ್ರದ ಮೂಲಕ ಕನ್ನಡ ಸಿನಿರಂಗ ಪ್ರವೇಶಿಸಿದರು. ನಂತರ ವಾಮನ, ಮಾರ್ಗ, ಬಾನ ದಾರಿಯಲ್ಲಿ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಪ್ಯಾನ್ ಇಂಡಿಯಾ ಸಿನೆಮಾ ಆಗಿರುವ ಈ ಚಿತ್ರವನ್ನು ಲಹರಿ ಫಿಲ್ಮ್ಸ್ ನ ಶ್ರೀಕಾಂತ್ ನಿರ್ಮಾಣ ಮಾಡುತ್ತಿದ್ದು ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನ ಮಾಡುತ್ತಿದ್ದಾರೆ. ವಿಕ್ರಾಂತ್ ರೋಣಗೆ ಕಲಾ ನಿರ್ದೇಶನ ಮಾಡಿರುವ ಶಿವಕುಮಾರ್ ‘ಯುಐ’ ಸಿನಿಮಾದ ಕಲಾ ನಿರ್ದೇಶನ ಮಾಡುತ್ತಿರುವುದು ವಿಶೇಷ. ಸಿನಿ ಪ್ರೇಕ್ಷಕರಿಗೆ ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇದ್ದು, ತೆರೆ ಕಂಡ ನಂತರ ಬೆಳ್ಳಿ ಪರದೆ ಮೇಲೆ ಅಬ್ಬರಿಸೋದು ಗ್ಯಾರಂಟಿ.

Leave A Reply

Your email address will not be published.