ಗಂಡನನ್ನು ಹೆದರಿಸಲು ಗರ್ಭಿಣಿ ಮಾಡಿದಳು ಪ್ಲ್ಯಾನ್ | ಆದರೆ ನಂತರ ನಡೆದದ್ದು ದುರಂತ!

ಕೆಲವೊಮ್ಮೆ ಏನೋ ಮಾಡಲು ಹೋಗಿ.. ಮತ್ತೆನೋ ಅವಾಂತರ ಮೈ ಗೆ ಎಳೆದುಕೊಳ್ಳುವ ಪ್ರಕರಣ ಹೆಚ್ಚಾಗಿ ನಾವು ನೋಡಿರುತ್ತೇವೆ. ಕೆಲವೊಮ್ಮೆ ನಮ್ಮ ಹುಚ್ಚಾಟದ ಎಲ್ಲೆ ಮೀರಿ ಮುಂದಾಗುವ ಅನಾಹುತ ಅರಿವಿಲ್ಲದೆ ಸಾವಿನ ಮನೆಗೆ ಆಹ್ವಾನ ತಂದುಕೊಳ್ಳುವ ಪ್ರಮೇಯವನ್ನು ಅಲ್ಲಗಳೆಯುವಂತಿಲ್ಲ. ಇದೇ ರೀತಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ.

 

ಅಜಯ್​ ಪ್ರಕಾಶ್​ ಎಂಬ ಓರ್ವ ಯೋಧನ ಮಡದಿ ಯಾಗಿರುವ ಅರುಣಿಮಾ ಎಂಬ 27 ರ ಹರೆಯದ ಯುವತಿ ಸೀಮೆಎಣ್ಣೆ ಸುರಿದುಕೊಂಡು ಜೀವದ ಜೊತೆ ಚೆಲ್ಲಾಟ ನಡೆಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ. ಘಟನೆ ನಡೆದ ಸಂದರ್ಭ ಪತಿ ಅಜಯ್​ ಮನೆಯಲ್ಲೇ ಇದ್ದ ಎನ್ನಲಾಗಿದ್ದು, ಸೇನೆಯಿಂದ ರಜೆಯ ಮೇಲೆ ಊರಿಗೆ ಬಂದಿದ್ದಾಗಲೇ ಅರುಣಿಮಾ ಈ ದುಡುಕಿನ ತೀರ್ಮಾನ ಕೈಗೊಂಡಿದ್ದಾಳೆ ಎನ್ನಲಾಗಿದೆ.

ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಅರುಣಿಮಾಳನ್ನು ಮೊದಲು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ವೇಳೆ ಪತಿ ಗ್ಯಾಸ್​ ಸ್ಫೋಟದಿಂದ ಘಟನೆ ನಡೆದಿದೆ ಎಂದ ಹೇಳಿಕೆ ನೀಡಿ ಅಜಯ್​ ಆಸ್ಪತ್ರೆಗೆ ಸೇರಿಸಿದ್ದಾರೆ ಎನ್ನಲಾಗಿದೆ. ಅ ರುಣಿಮಾ ಸ್ಥಿತಿ ಹದಗೆಡುತ್ತಿದ್ದ ಕಾರಣ ಆಕೆಯನ್ನು ಮೆಡಿಕಲ್​ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ.

ಈ ಘಟನೆಯ ನಡುವೆ ಪಾರಸ್ಸಾಲಾದಲ್ಲಿರುವ ಅಜಯ್​ ಮನೆಯನ್ನು ಪೊಲೀಸರು ಸೀಲ್​ ಮಾಡಿದ್ದು, ಮ್ಯಾಜಿಸ್ಟ್ರೇಟ್ ಸೇರಿದಂತೆ ಹಲವರು ಆಕೆಯ ಹೇಳಿಕೆಯನ್ನು ದಾಖಲು ಮಾಡಿಕೊಂಡಿದ್ದು, ಪತಿಗೆ ಬೆದರಿಕೆ ಹಾಕಲು ಈ ಕೃತ್ಯ ಎಸಗಿದ್ದಾಳೆ ಎಂದು ಆಕೆಯ ತಂದೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಗಂಡನನ್ನು ಹೆದರಿಸುವ ಸಲುವಾಗಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಗರ್ಭಿಣಿಯ ಸ್ಥಿತಿ ಇದೀಗ ಗಂಭೀರವಾಗಿದ್ದು, ಸತ್ತು ಹೋಗಿರುವ ಮಗುವನ್ನು ಹೊರ ತೆಗೆಯಲು ಮೂರು ದಿನಗಳಿಂದ ನಿರಂತರ ಎಲ್ಲ ರೀತಿಯ ಪರಿಶ್ರಮ ಮಾಡಲಾಗುತ್ತಿದೆ ಎಂದು ಪರಸ್ಸಾಲಾದ ವೈದ್ಯಕೀಯ ಕಾಲೇಜು ಆಸ್ಪತ್ರೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

Leave A Reply

Your email address will not be published.