ಕೇಂದ್ರ ಸರಕಾರದಿಂದ ಸ್ಪೆಷಲ್ ನ್ಯೂಸ್ | ಬರೋಬ್ಬರಿ 7 ಲಕ್ಷ ಮನೆಗಳಿಗೆ ಫ್ರೀ ಡಿಶ್ ಟಿವಿ ಲಭ್ಯ | ಯಾರಿಗೆಲ್ಲ? ಇಲ್ಲಿದೆ ಮಾಹಿತಿ

ಮನರಂಜನಾ ವಾಹಿನಿಯಾದ ದೂರದರ್ಶನ ಮತ್ತು ಆಲ್ ಇಂಡಿಯಾ ರೇಡಿಯೋ (AIR)ಗಳ ಸ್ಥಿತಿಯನ್ನು ಉತ್ತಮಗೊಳಿಸಲು ಕೇಂದ್ರ ಸರ್ಕಾರ ಸುಮಾರು 2,539 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಿದ್ದು, ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೇ ನಡೆಸಿ, ನಿರ್ಧಾರ ತೆಗೆದುಕೊಳ್ಳಲಾಗಿದೆ.

 

ಬ್ರಾಡ್ ಕಾಸ್ಟಿಂಗ್ ಮೂಲಸೌಕರ್ಯ ಮತ್ತು ನೆಟ್ವರ್ಕ್ ಡೆವಲಪ್ಮೆಂಟ್ (BIND) ಅಡಿಯಲ್ಲಿ, ಜನರಿಗೆ ಉತ್ತಮ, ಸರಿಯಾದ ಸುದ್ದಿ, ಶಿಕ್ಷಣದ ಮಾಹಿತಿ ಮತ್ತು ಮನರಂಜನೆಯನ್ನು ನೀಡುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ. ಹಾಗಾಗಿ 2022 ರಿಂದ 2026 ರವರೆಗೆ ಸರ್ಕಾರದ ಆರ್ಥಿಕ ವ್ಯವಹಾರಗಳ ಸಮಿತಿ ಬಿಂಡ್ ಬಿಡುಗಡೆ ಮಾಡಿದ್ದು, ಈ ಮೂಲಕ ಪರೋಕ್ಷವಾಗಿ ಹಲವು ಉದ್ಯೋಗಾವಕಾಶಗಳನ್ನು ಕೂಡ ಸೃಷ್ಟಿಸಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.

ಬದಲಾದ ಪ್ರಸಾರ ತಂತ್ರಜ್ಞಾನದ ಜೊತೆಗೆ ಈ ಎರಡೂ ವಾಹಿನಿಗಳು ಆಧುನಿಕ ಮತ್ತು ಸುಧಾರಿತ ತಂತ್ರಜ್ಞಾನದೊಂದಿಗೆ ಸಜ್ಜಾಗಿದೆ. ಇನ್ನೂ, ಇನ್ಫ್ರಾವನ್ನ ನವೀಕರಿಸಲು ಸರ್ಕಾರ 2,539 ಕೋಟಿ ರೂಪಾಯಿಯನ್ನು ಮೀಸಲಿರಿಸಿದೆ. ದೂರದರ್ಶನದಲ್ಲಿ ವೀಡಿಯೊದ ಗುಣಮಟ್ಟವು ಉತ್ತಮವಾಗಿದ್ದು, ಹಳೆಯ ಟ್ರಾನ್ಸ್ ಮಿಟರ್ ಗಳನ್ನು ಬದಲಾಯಿಸಲಾಗುತ್ತದೆ. ಹೊಸ ಎಫ್‌ಎಂ ಟ್ರಾನ್ಸ್ಮಿಟರ್ಗಳನ್ನು ಸ್ಥಾಪಿಸಿ, ಅಸ್ತಿತ್ವದಲ್ಲಿರುವ ಎಫ್‌ಎಂ ಟ್ರಾನ್ಸ್ಮೀಟರ್ಗಳನ್ನು ನವೀಕರಣ ಮಾಡಲಾಗುತ್ತದೆ ಎಂದು ಹೇಳಲಾಗಿದೆ.

ಸರ್ಕಾರ, ಗಡಿ ಮತ್ತು ಬುಡಕಟ್ಟು ಪ್ರದೇಶಗಳಲ್ಲಿ ಸುಮಾರು 7 ಲಕ್ಷ ಡಿಶ್ ಟಿವಿಯನ್ನು ಸ್ಥಾಪಿಸಲಿದ್ದು, ಈ ಯೋಜನೆ ಅಡಿಯಲ್ಲಿ, ನೇರವಾಗಿ ಮನೆಗೆ ಡಿಟಿಎಚ್ ಅನ್ನು ವಿಸ್ತರಿಸಲಾಗುವುದು. ಈ ಬದಲಾವಣೆಯಲ್ಲಿ, ಹಳೆಯ ಸ್ಟುಡಿಯೋ ಉಪಕರಣಗಳು ಮತ್ತು OB ವ್ಯಾನ್ ಗಳನ್ನು ಬದಲಾಯಿಸಿದ್ದು, ಸದ್ಯ ದೂರದರ್ಶನದ ಅಡಿಯಲ್ಲಿ ಸುಮಾರು 36 ಟಿವಿ ಚಾನೆಲ್ ಗಳನ್ನು ನಡೆಸಲಾಗುತ್ತಿದೆ. ಅದರಲ್ಲಿ 28 ಪ್ರಾದೇಶಿಕ ವಾಹಿನಿಗಳಿದ್ದು, 500 ಪ್ರಸಾರ ಕೇಂದ್ರಗಳನ್ನು ಎಐಆರ್ ಹೊಂದಿದ್ದಾಗಿದೆ.

Leave A Reply

Your email address will not be published.