ಸ್ಮಶಾನದಲ್ಲಿ ಅಂತಿಮ ಕಾರ್ಯಕ್ಕಾಗಿ ಕರೆತರುತ್ತಿದ್ದಂತೆ ಕಣ್ಣು ತೆರೆದ ಹೆಣ!

ಹುಟ್ಟು-ಸಾವು ದೇವರ ಸೃಷ್ಟಿ. ಹಾಗಾಗಿ ಎಲ್ಲವೂ ಭಗವಂತನ ಮೇಲಿರುತ್ತದೆ. ಆದ್ರೆ, ಕೊಂಚಿತ್ತು ಭಾಗ ವೈದ್ಯರ ಕೈಯಲ್ಲಿ ಇರುತ್ತದೆ ಎಂದರೆ ತಪ್ಪಾಗಲಾರದು. ಯಾಕಂದ್ರೆ, ಮನುಷ್ಯ ಬದುಕಲು-ಸಾಯಲು ವೈದ್ಯರ ಚಿಕಿತ್ಸೆ ಕೂಡ ನೆರವಾಗುತ್ತದೆ. ಹೀಗಾಗಿ, ವೈದ್ಯರು ರೋಗಿಯೂ ಸತ್ತಿದ್ದಾನ ಎಂದು ಘೋಷಿಸಿದ ಮೇಲಷ್ಟೇ ನಿರ್ಧಾರ ಮಾಡಲು ಸಾಧ್ಯ.

ಆದ್ರೆ, ಇಲ್ಲೊಂದು ಕಡೆ ವೈದ್ಯರು ಮಹಿಳೆಯೊಬ್ಬರನ್ನು ಸತ್ತಿದ್ದಾರೆ ಎಂದು ಘೋಷಿಸಿದ ಮೇಲೂ ಅವರು ಸ್ಮಶಾನದಲ್ಲಿ ಜೀವಂತವಾದ ಸಂಗತಿಯೊಂದು ಬೆಳಕಿಗೆ ಬಂದಿದೆ. ಇಂತಹದೊಂದು ಘಟನೆ ಉತ್ತರಪ್ರದೇಶದ ಫಿರೋಜಾಬಾದ್​ನಲ್ಲಿ ನಡೆದಿದೆ. ಅಷ್ಟಕ್ಕೂ ಅಲ್ಲಿ ನಡೆದಿದ್ದಾದರೂ ಏನು ಎಂಬುದನ್ನು ಮುಂದೆ ಓದಿ..

81 ವರ್ಷದ ಮಹಿಳೆ ಹರಿಭೇಜಿ ಎಂಬಾಕೆಗೆ ಬ್ರೇನ್ ಹೆಮರೇಜ್​ಗೆ ಒಳಗಾಗಿದ್ದರು. ಹೀಗಾಗಿ ಆಕೆಯನ್ನು ಆಕೆಯನ್ನು ಡಿ. 23ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮಂಗಳವಾರ ಆಕೆಯ ಮೆದುಳು ನಿಷ್ಕ್ರಿಯಗೊಂಡಿದ್ದು, ಆಕೆ ಬ್ರೇನ್​ ಡೆತ್​ಗೆ ಒಳಗಾಗಿದ್ದಾಳೆ ಎಂದು ವೈದ್ಯರು ಅವಳ ಸಾವಿನ ಕುರಿತಾದ ಮಾಹಿತಿಯನ್ನು ತಿಳಿಸಿದ್ದಾರೆ.

ಸಾಮಾನ್ಯವಾಗಿ ನಡೆಯುವಂತೆ ವೈದ್ಯರ ದೃಢೀಕರಣದ ಬಳಿಕ ಕುಟುಂಬಸ್ಥರು ಮುಂದಿನ ಕಾರ್ಯಕ್ಕಾಗಿ ಆಕೆಯ ಶವವನ್ನು ಮನೆಗೆ ಕರೆತಂದರು. ಬಳಿಕ ಅಂತಿಮಸಂಸ್ಕಾರಕ್ಕಾಗಿ ಸ್ಮಶಾನಕ್ಕೆ ತೆಗೆದುಕೊಂಡು ಹೋಗಿದ್ದರು. ಆದರೆ ಅಲ್ಲಿ ನಡೆದಿದ್ದೆ ರೋಚಕ ಕಹಾನಿ. ಯಾಕಂದ್ರೆ ಶವವಾಗಿದ್ದ ಆಕೆ ಸ್ಮಶಾನದ ಹಾದಿಯಲ್ಲಿ ಕಣ್ಣು ತೆರೆದಿದ್ದಾರೆ.

ಮಹಿಳೆ ಮತ್ತೆ ಕಣ್ಣು ಬಿಟ್ಟಿದ್ದನ್ನು ನೋಡಿ ಮನೆಯವರು ನೋಡಿ ಶಾಕ್ ಆಗಿದ್ದಾರೆ. ಬಳಿಕ ಮಹಿಳೆಯನ್ನು ಬಳಿಕ ವಾಪಸ್ ಮನೆಗೆ ಕರೆದೊಯ್ಯಲಾಗಿತ್ತು. ಆದರೆ, ದುರದೃಷ್ಟವಶಾತ್​ ಅದರ ಮರುದಿನವೇ ಆಕೆ ಸಾವಿಗೀಡಾಗಿದ್ದಾಳೆ. ಒಟ್ಟಾರೆ, ವೈದ್ಯರ ನಿರ್ಧಾರವನ್ನು ದೂರ ಬೇಕೋ, ದೇವರ ಇಚ್ಛೆಯೇ ಹಾಗಿತ್ತೋ ಅನ್ನೋದು ಗೊಂದಲದ ಗೂಡಾಗಿದೆ.

Leave A Reply

Your email address will not be published.