ಹೆಂಡ್ತಿಯ ಲವ್ವಿಡವ್ವಿ ಗಂಡನ ಕೊಲೀಗ್ ಜೊತೆ | ಗಂಡನಿಗೆ ತಿಳಿದಾಗ ಏನಾಯ್ತು?

ಮದುವೆ ಎಂಬ ಸುಂದರ ಬೆಸುಗೆಗೆ ಮುನ್ನುಡಿ ಬರೆಯುವಾಗ ನೂರಾರು ಕನಸುಗಳ ಜೊತೆಗೆ ಬೆಸೆದುಕೊಂಡು ಹಸೆಮಣೆ ಏರುವ ಜೋಡಿಗೆ ಮದುವೆ ಜೀವನದ ಮುಖ್ಯ ಘಟ್ಟವಾಗಿ ಪರಿಣಮಿಸುತ್ತದೆ. ಅದರಲ್ಲೂ ಕೂಡ ಪ್ರೀತಿಸಿ ಮದುವೆ ಆಗುವುದಾದರೆ ಅದರ ಸಂಭ್ರಮವೇ ಬೇರೆ. ಏಕೆಂದರೆ ಈ ಸೌಭಾಗ್ಯ ಎಲ್ಲರಿಗೂ ಕೂಡಿ ಬರದು.

 

ಪ್ರೀತಿ ಕುರುಡು ಎಂಬ ಮಾತಿನಂತೆ.. ಜಾತಿಯ ಗಡಿರೇಖೆಯನ್ನು ದಾಟಿ, ಅದೆಷ್ಟೊ ಮಂದಿ ಪ್ರೀತಿಸಿ ಮದುವೆಯಾದ ಪ್ರಕರಣಗಳು ದಿನಂಪ್ರತಿ ವರದಿಯಾಗುತ್ತಲೇ ಇರುತ್ತವೆ. ಇತ್ತೀಚಿನ ದಿನಗಳಲ್ಲಿ ಮದುವೆ ಎಂಬ ಸುಮಧುರ ಬಾಂಧವ್ಯಕ್ಕೆ ಜಾತಿ ಎಂಬ ಚೌಕಟ್ಟು ಅಡ್ಡಿಯಾದ ನಿದರ್ಶನ ಕೂಡ ಇವೆ. ಪ್ರೀತಿ ಪ್ರೇಮ.. ಎಂದು ಪ್ರೇಮದ ಬಲೆಯಲ್ಲಿ ಬಿದ್ದು ಮನೆಯವರ ವಿರೋಧದ ನಡುವೆಯೆ ವಿವಾಹವಾಗಿ ಮನೆಯವರಿಂದಲೇ ಸಾವಿನ ಕದ ತಟ್ಟಿದ ಪ್ರಕರಣ ಕೂಡ ಇದೆ. ಆದರೆ, ಪ್ರೀತಿಯಲ್ಲಿ ಬಿದ್ದ ಪ್ರೇಮ ಹಕ್ಕಿಗಳಲ್ಲಿ ನಿರಾಸಕ್ತಿ ಮನೆ ಮಾಡಿ, ಪ್ರೀತಿಸುತ್ತಿರುವಾಗಲೆ ಮತ್ತೊಬ್ಬನ ಮೇಲೆ ಆಕರ್ಷಣೆ ಮೂಡಿ ಪ್ರೇಮವೆಂಬ ಬಂಧದಲ್ಲಿ ಬಿರುಕು ಮೂಡುವ ಪ್ರಕರಣ ಕೂಡ ಇವೆ.

ಬಿಹಾರದ ಜೆಹಾನಾಬಾದ್ ಜಿಲ್ಲೆಯ ಕುಮ್ಡಿ ಗ್ರಾಮದ ರಾಮರಾಜ್ ಹಾಗೂ ಸೋಲಂನ ರೂಪ ಕುಮಾರಿ ಎಂಬ ಜೋಡಿ ಇಬ್ಬರು ಒಬ್ಬರನ್ನು ಪರಸ್ಪರ ಪ್ರೀತಿಸಿ ಮದುವೆ ಎಂಬ ಸುಮಧುರ ಬಾಂಧವ್ಯಕ್ಕೆ ಮುನ್ನುಡಿ ಬರೆದು ನವ ಜೀವನಕ್ಕೆ ಪಾದಾರ್ಪಣೆ ಮಾಡಿದ್ದರು. ಆದ್ರೆ, ಮದುವೆಯಾದ ಬಳಿಕ ವಿರಸ ಮೂಡಿ ಸತಿ ಪತಿ ಗಳ ನಡುವೆ ಸಣ್ಣ ಪುಟ್ಟ ಮುನಿಸು ಶುರುವಾಗಿ ಇಬ್ಬರ ನಡುವೆ ಮನಸ್ತಾಪ ಹೆಚ್ಚಾಗಿ ಗಂಡ ನನಗೆ ಸಮಯ ಕೊಡುತ್ತಿಲ್ಲ ಎಂಬ ವಾದ ಹೆಂಡತಿ ಮಾಡಿದರೆ , ಹೆಂಡತಿ ನನಗೆ ಸಮಯ ಕೊಡುತ್ತಿಲ್ಲ ಎನ್ನುವ ವಿಚಾರ ದೊಡ್ಡದಾಗಿ ಪರಿಣಮಿಸಿದೆ.

ಆದ್ರೆ, ಈ ನಡುವೆ ಪ್ರೀತಿಸಿ ಹೊಸ ಜೀವನಕ್ಕೆ ಕಾಲಿಟ್ಟ ಯುವತಿಗೆ ಮತ್ತೊಬ್ಬ ಯುವಕನ ಮೇಲೆ ಪ್ಯಾರ್ ಆಗ್ಬಿಟ್ಟಿದೆ. ಪ್ರೀತಿಸಿ ಮದುವೆಯಾದ ಜೋಡಿ ಹೊಸ ಮನೆಯನ್ನು ಖರೀದಿ ಮಾಡಿ ಸಂತೋಷದ ಜೀವನ ನಡೆಸುತ್ತಿದ್ದರು ಎನ್ನಲಾಗಿದೆ. ಆದರೆ ಈ ನಡುವೆ ರೂಪಾ ನೆಟ್ ವರ್ಕಿಂಗ್ ಕಂಪನಿಯೊಂದರಲ್ಲಿ ಕೆಲಸ ಪಡೆದುಕೊಂಡಿದ್ದಾಳೆ.

ಆದ್ರೆ ಆರು ತಿಂಗಳ ಬಳಿಕ ರೂಪಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ರಂಜಿತ್ ಎಂಬ ಯುವಕನ ಭೇಟಿಯಾದ ಬಳಿಕ ಸ್ನೇಹವಾಗಿ, ಸ್ನೇಹ ಪ್ರೇಮಾಂಕುರವಾಗಲು ಕಾರಣವಾಗಿದೆ. ಪ್ರೀತಿಸಿ ಮದುವೆಯಾಗಿದ್ದರು ಕೂಡ ರೂಪಾ, ಪತಿ ಕೆಲಸದ ನಿಮಿತ್ತ ಹೊರಗಿರುವ ವೇಳೆ ಗೆಳೆಯನನ್ನು ಮನೆಗೆ ಕರೆಸಿಕೊಳ್ಳುತ್ತಿದ್ದಳು ಎನ್ನಲಾಗಿದೆ.

ಆದರೆ, ಈ ನಡುವೆ ಗಂಡನ ಕೈಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ರೂಪ ಪತಿ ರಾಮ್ ರಾಜು ಮನೆಯಿಂದ ಹೊರಗೆ ಹೋಗಿದ್ದ ವೇಳೆ ರೂಪಾ ಎಂದಿನಂತೆ ಯುವಕನನ್ನು ಮನೆಗೆ ಕರೆಸಿಕೊಂಡಿದ್ದಾಳೆ.

ಆದರೆ, ಸಿನಿಮಿಯ ಮಾದರಿಯಲ್ಲಿ ಪತಿ ರಾಮ್ ರಾಜು ಏನೋ ಮರೆತುಹೋಗಿದ್ದರಿಂದ ಮತ್ತೆ ಮನೆಗೆ ಮರಳಿದಾಗ ಮನೆಯಲ್ಲಿದ್ದ ದೃಶ್ಯ ಕಂಡು ಅಚ್ಚರಿ ಗೊಂಡಿದ್ದಾನೆ. ತನ್ನ ಹೆಂಡತಿ ಮತ್ತೊಬ್ಬನ ಜೊತೆಗೆ ರಾಸಲೀಲೆಯಲ್ಲಿ ತೊಡಗಿದ್ದನ್ನು ಕಂಡು ನಖ ಶಿಖಾಂತ ಕೋಪಗೊಂಡ ಪತಿ ಇಬ್ಬರನ್ನೂ ರೂಮಿನಲ್ಲಿಟ್ಟು ಬಾಗಿಲು ಹಾಕಿದ್ದು ಅಲ್ಲದೆ ಪೊಲೀಸರಿಗೆ ಕರೆ ಮಾಡಿ ಪತ್ನಿಯ ಅಕ್ರಮ ಸಂಬಂಧದ ಬಗ್ಗೆ ದೂರು ನೀಡಿದ್ದಾನೆ.

ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸುವ ವೇಳೆ ಕಳೆದ ಆರು ತಿಂಗಳಿನಿಂದ ರಂಜಿತ್ನನ್ನು ಪ್ರೀತಿಸುತ್ತಿರುವುದಾಗಿ ರೂಪಾ ಹೇಳಿದ್ದು, ಗೆಳೆಯ ರಂಜಿತ್ ಕೂಡ ಇದೇ ಮಾತನ್ನು ಪುನರುಚ್ಚರಸಿದ್ದಾನೆ. ಇದನ್ನು ಕೇಳಿದ ರಾಮರಾಜ್ ಆಶ್ಚರ್ಯಚಕಿತನಾಗಿದ್ದಾನೆ.

ತನ್ನನ್ನು ಪ್ರೀತಿಸಿ ಮದುವೆಯಾಗಿರುವ ಹೆಂಡತಿ ಈಗ ಮತ್ತೊಬ್ಬನನ್ನು ಪ್ರೀತಿಸುತ್ತಿರುವುದು ಆತನಿಗೆ ವಾಸ್ತವ ಅರಿಯಲು ಗೊಂದಲ ಉಂಟಾಗಿದೆ. ಆದರೂ ಕೂಡ ಇಬ್ಬರನ್ನೂ ದೂರ ಮಾಡುವ ಬದಲಿಗೆ ತಾನೇ ದೂರವಿದ್ದು ಅವರಿಬ್ಬರು ಒಂದಾಗಲು ಅವಕಾಶ ಮಾಡಿಕೊಟ್ಟಿರುವ ಅಪರೂಪದ ಘಟನೆ ಬೆಳಕಿಗೆ ಬಂದಿದೆ.

Leave A Reply

Your email address will not be published.