ಈ 5 ಬದಲಾವಣೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಕಂಡ ತಕ್ಷಣ ಅಲರ್ಟ್‌ ಆಗಿರಿ | ಲೀಕ್ ಆಗುವುದು ಫೋಟೋ, ಚಾಟ್‌

ಸ್ಮಾರ್ಟ್ ಫೋನ್ ಈಗ ನಮಗೆ ಅತೀ ಮುಖ್ಯವಾದ ಲೈಫ್ ಲೈನ್ ಇದ್ದ ಹಾಗೆ. ಒಂದು ಸಲಿ ನಮ್ಮ ಕೈಯಿಂದ ಸ್ಮಾರ್ಟ್ ಫೋನ್ ತಪ್ಪಿ ಹೋದರೆ ಹತ್ತು ಹಲವಾರು ದಾಖಲೆ, ಮಾಹಿತಿಗಳು, ಅಮೂಲ್ಯವಾದ ಫೋಟೋಗಳನ್ನು ಕಳೆದುಕೊಳ್ಳುತ್ತೇವೆ. ಆದರೆ ನಿಮ್ಮ ಕೈಯಲ್ಲಿ ಸ್ಮಾರ್ಟ್ ಫೋನ್ ಇದ್ದರೂ ಸಹ ಕೆಲವೊಮ್ಮೆ ನಿಮ್ಮ ಅಗತ್ಯ ದಾಖಲೆ, ಮಾಹಿತಿಗಳು ಸೋರಿಕೆ ಆಗುವ ಚಾನ್ಸ್ ಇರುತ್ತೆ. ಹೌದು ಮೊಬೈಲ್ ಹ್ಯಾಕಿಂಗ್ ಮೂಲಕ ನಿಮ್ಮ ಪ್ರತಿಯೊಂದು ದಾಖಲೆ ಮಾಹಿತಿ ಕಳ್ಳತನ ಆಗುತ್ತೆ. ಹಾಗಾಗಿ ಸ್ಮಾರ್ಟ್‌ಫೋನ್‌ನಲ್ಲಿ ಈ 5 ಬದಲಾವಣೆ ಕಂಡ ತಕ್ಷಣ ಎಚ್ಚೆತ್ತುಕೊಳ್ಳಬೇಕಾಗುತ್ತದೆ.

 

ಎಚ್ಚತ್ತು ಕೊಳ್ಳಬೇಕಾದ ಸಲಹೆಗಳು :

  • ಸ್ಮಾರ್ಟ್‌ಫೋನ್‌ನಲ್ಲಿ ನಿಮಗೆ ಗೊತ್ತಿಲ್ಲದೆ ಕಾಲ್ ಡಯಲ್ ಆಗಿದ್ದರೆ, ಅದು ಕೂಡಾ ಎಚ್ಚರಿಕೆಯ ಸೂಚನೆ . ತಾಂತ್ರಿಕ ದೋಷದಿಂದ ಫೋನ್ ನಲ್ಲಿ ತನ್ನಷ್ಟಕ್ಕೆ ಡಯಲ್ ಆಗುವುದು ಅಪರೂಪ. ಹ್ಯಾಕ್ ಆಗಿದ್ದಾಗ ಮಾತ್ರ ಹೀಗಾಗುವುದು ಸಾಧ್ಯ.
  • ನಾವು ದಿನನಿತ್ಯ ಬಳಸುವ ಸಾಮಾಜಿಕ ಮಾಧ್ಯಮಗಳು ಕಾರ್ಯನಿರ್ವಹಿಸದಿದ್ದರೆ, ನಿಮ್ಮ ಸಾಮಾಜಿಕ ಮಾಧ್ಯಮ ಖಾತೆಯ ಪಾಸ್‌ವರ್ಡ್ ಬದಲಾಗಿದ್ದರೆ ಅಥವಾ ಪಾಸ್‌ವರ್ಡ್ ತಪ್ಪಾಗಿದ್ದರೆ, ಸ್ಮಾರ್ಟ್‌ಫೋನ್ ಹ್ಯಾಕ್ ಆಗಿರುವ ಸಾಧ್ಯತೆ ಹೆಚ್ಚಾಗಿರುತ್ತದೆ.
  • ಇದ್ದಕ್ಕಿದ್ದಂತೆ ಫೋನ್ ಬ್ಲಿಂಕ್ ಆಗುತ್ತಿದ್ದರೆ, ಅಥವಾ ತನ್ನಷ್ಟಕ್ಕೆ ಫೋನ್ ಲಾಕ್ ಅನ್ ಲಾಕ್ ಆದರೆ ಸ್ಮಾರ್ಟ್‌ಫೋನ್ ಹ್ಯಾಕ್ ಆಗಿರುವ ಸಾಧ್ಯತೆಯಿದೆ.
  • ಸ್ಮಾರ್ಟ್‌ಫೋನ್ ಹ್ಯಾಕ್ ಆಗಿದೆಯೇ ಎಂದು ತಿಳಿದುಕೊಳ್ಳುವ ಇನ್ನೊಂದು ವಿಧಾನವೆಂದರೆ, ಸ್ಮಾರ್ಟ್‌ಫೋನ್‌ನಲ್ಲಿರುವ ಮೆಸೇಜ್ ಗಳು ಡಿಲೀಟ್ ಆಗುವುದು ಅಥವಾ ಮೆಸೇಜ್ ಗಳು ರೀಡ್ ಆಗುವುದು. ನಿಮಗೆ ಗೊತ್ತಿಲ್ಲದಂತೆ ಬೇರೆಯವರು ರಿಮೋಟ್ ಮೂಲಕ ನಿಮ್ಮ ಫೋನ್ ಅಕ್ಸೆಸ್ ಮಾಡುತ್ತಿರುವುದೇ ಹೀಗಾಗುವುದಕ್ಕೆ ಕಾರಣ.

ಇತ್ತೀಚಿಗೆ ಕಳ್ಳರ ಮೊಬೈಲ್ ಹ್ಯಾಕರ್ ಚಾಳಿ ಬಹಳ ಹೆಚ್ಚಾಗಿದೆ. ಆದ್ದರಿಂದ ನಾವು ಎಚ್ಚರದಿಂದ ಇರಬೇಕು. ಮೊಬೈಲ್ ನಲ್ಲಿ ಈ ಮೇಲಿನ ಸೂಚನೆ ನಿಮಗೆ ದೊರೆತಲ್ಲಿ ಕೂಡಲೇ ಜಾಗೃತರಾಗಿ.

Leave A Reply

Your email address will not be published.