Samsung Laptop: ಹೊಸ ಲ್ಯಾಪ್​ಟಾಪ್​ ಬಿಡುಗಡೆ ಮಾಡಿದ ಸ್ಯಾಮ್​ಸಂಗ್​ ಕಂಪನಿ! ಸೂಪರ್‌ ಫೀಚರ್ಸ್‌

ಇತ್ತೀಚಿಗೆ ಲ್ಯಾಪ್ ಟಾಪ್ ಬೇಡಿಕೆ ಸಹ ಹೆಚ್ಚುತ್ತಿದೆ. ಎಲ್ಲವೂ ಈಗ ಆನ್ಲೈನ್ ಮಯ ಆಗಿರುವುದರಿಂದ ಜನರು ಆಧುನಿಕ ತಂತ್ರಜ್ಞಾನಗಳಿಗೆ ಹೆಚ್ಚಿನ ಒಲವು ತೋರಿಸುತ್ತಿದ್ದಾರೆ. ಸ್ಯಾಮ್​​ಸಂಗ್​ ಇದೀಗ ಹೊಸ ಲ್ಯಾಪ್​​ಟಾಪ್ ಅನ್ನು ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗಿದೆ. ಜನರ ಬೇಡಿಕೆಯಂತೆ​ ಇದೀಗ ಸ್ಯಾಮ್​ಸಂಗ್​ ಗ್ಯಾಲಕ್ಸಿ ಬುಕ್​ 2 ಗೋ ಎಂಬ ಲ್ಯಾಪ್​ಟಾಪ್​ ಅನ್ನು ಕಂಪನಿ ಪರಿಚಯಿಸಿದೆ. ಇದು ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಯಾಗಿರುವ ಗುಣಮಟ್ಟದ ಲ್ಯಾಪ್​ಟಾಪ್​ ಆಗಿದೆ.

 

ಸ್ಯಾಮ್​ಸಂಗ್​ ಗ್ಯಾಲಕ್ಸಿ ಬುಕ್​ 2 ಗೋ ಡಿಸ್​​ಪ್ಲೇ ವಿಶೇಷತೆ :

  • ಸ್ಯಾಮ್​ಸಂಗ್​ ಗ್ಯಾಲಕ್ಸಿ ಬುಕ್​​ 2 ಗೋ ಲ್ಯಾಪ್‌ಟಾಪ್‌ 14 ಇಂಚಿನ ಫುಲ್‌ ಹೆಚ್‌ಡಿ ಎಲ್​ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಉನ್ನತ-ಕಾರ್ಯಕ್ಷಮತೆಯನ್ನು ಹೊಂದಿರು ಲ್ಯಾಪ್​​ಟಾಪ್​ ಆಗಿದೆ. ಈ ಲ್ಯಾಪ್‌ಟಾಪ್ 15.5 ಮಿಮೀ ದಪ್ಪ ಮತ್ತು 1.44 ಕೆಜಿ ತೂಕವನ್ನು ಹೊಂದಿದ್ದು, ತೆಳುವಾದ ಮತ್ತು ಹಗುರವಾದ ಲ್ಯಾಪ್​​ಟಾಪ್ ಇದಾಗಿದೆ.
  • ಸ್ಯಾಮ್​ಸಂಗ್​ ಕಂಪನಿಯ ಈ ಲ್ಯಾಪ್​ಟಾಪ್​ 180 ಡಿಗ್ರಿ ಹಿಂಜ್ ಅನ್ನು ಹೊಂದಿದೆ. ಇನ್ನು ಈ ಲ್ಯಾಪ್‌ಟಾಪ್‌ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7c+ Gen 3 ಕಂಪ್ಯೂಟರ್​ ಪ್ಲಾಟ್‌ಫಾರ್ಮ್ ಪ್ರೊಸೆಸರ್‌ನಲ್ಲಿ ಕಾರ್ಯ ನಿರ್ವಹಿಸಲಿದೆ. ಇದು ಗ್ಯಾಲಕ್ಸಿ ಬುಕ್‌ ಗೋ ನಲ್ಲಿರುವ ಸ್ನಾಪ್‌ಡ್ರಾಗನ್‌ 7c Gen 2 ಪ್ರೊಸೆಸರ್‌ಗಿಂತ 40% ವೇಗದ ಸಿಪಿಯು ಮತ್ತು 35% ಹೆಚ್ಚು ಗುಣಮಟ್ಟದ ಜಿಪಿಯು ಅನ್ನು ಒಳಗೊಂಡಿದೆ.
  • ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬುಕ್‌ 2 ಗೋ ಲ್ಯಾಪ್‌ಟಾಪ್‌ 3,200MHz ಮತ್ತು NVMe SSD ಸ್ಟೋರೇಜ್‌ನಲ್ಲಿ LPDDR4X ರ್‍ಯಾಮ್ ಅನ್ನು ಬೆಂಬಲಿಸಲಿದೆ. ಲ್ಯಾಪ್‌ಟಾಪ್‌ ವೈಫೈ 6E ಮತ್ತು ಬ್ಲೂಟೂತ್ 5.2 ನೊಂದಿಗೆ ಸ್ಪೀಡ್‌ ವಾಯರ್‌ಲೆಸ್‌ ಕನೆಕ್ಟಿವಿಟಿ ಸಾಮರ್ಥ್ಯವನ್ನು ಹೊಂದಿರಲಿದೆ.
  • ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬುಕ್‌ 2 ಗೋ ಲ್ಯಾಪ್‌ಟಾಪ್ ವಿಂಡೋಸ್ 11 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಗ್ಯಾಲಕ್ಸಿ ಬಡ್ಸ್ ಆಟೋ ಸ್ವಿಚ್, ವಿಂಡೋಸ್‌ಗೆ ಲಿಂಕ್, ಮಲ್ಟಿ ಕಂಟ್ರೋಲ್ (ಗ್ಯಾಲಕ್ಸಿ ಟ್ಯಾಬ್ಲೆಟ್), ಕ್ವಿಕ್ ಶೇರ್, ಸ್ಯಾಮ್‌ಸಂಗ್ ನೋಟ್ಸ್‌ ಮತ್ತು ಸೆಕೆಂಡ್‌ ಸ್ಕ್ರೀನ್‌ನಂತಹ ಗ್ಯಾಲಕ್ಸಿ ಎಕೋ ಸಿಸ್ಟಂ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇದನ್ನು MIL-STD-810G ಸ್ಪೆಕ್‌ನೊಂದಿಗೆ ನಿರ್ಮಿಸಲಾಗಿದೆ. ಇದರಿಂದ ನಿಮ್ಮ ಲ್ಯಾಪ್​ಟಾಪ್​ ಹೆಚ್ಚು ಕಾಲ ಬಾಳಿಕೆ ಬರುವಂತೆ ಮಾಡಬಹುದು.

ಒಟ್ಟಾರೆ ಸ್ಯಾಮ್​ಸಂಗ್​ ಗ್ಯಾಲಕ್ಸಿ ಬುಕ್​ 2 ಗೋ ಲ್ಯಾಪ್​​ಟಾಪ್​ ಇದೇ 2023ರ ಜನವರಿ 20 ರಂದು ಸ್ಯಾಮ್​ಸಂಗ್​ನ ಅಧಿಕೃತ ವೆಬ್​ಸೈಟ್​ ಮೂಲಕ ಮಾರಾಟ ಪ್ರಾರಂಭವಾಗಲಿದೆ.ಆದರೆ ಈ ಲ್ಯಾಪ್‌ಟಾಪ್‌ನ ರ್‍ಯಾಮ್, ಸ್ಟೋರೇಜ್‌ ಆಯ್ಕೆ ಬಗ್ಗೆ ಮಾಹಿತಿಯನ್ನು ಇನ್ನೂ ಯಾವುದೇ ರೀತಿಯಲ್ಲಿ ಕಂಪನಿ ಬಹಿರಂಗ ಪಡಿಸಿಲ್ಲ. ಜೊತೆಗೆ ಈ ಸ್ಯಾಮ್​ಸಂಗ್​ ಗ್ಯಾಲಕ್ಸಿ ಬುಕ್​ 2 ಗೋ ಲ್ಯಾಪ್​​ಟಾಪ್​ನ ಬ್ಯಾಟರಿ ಸಾಮರ್ಥ್ಯದ ವಿವರ ಕೂಡ ಬಹಿರಂಗವಾಗಿಲ್ಲ.

Leave A Reply

Your email address will not be published.