ಬಂತು ನೋಡಿ ಹೊಸ ಫ್ಲೇವರ್‌ನಲ್ಲಿ ಪಾರ್ಲೆಜಿ ಬಿಸ್ಕೆಟ್‌ | ಈ ದಿಢೀರ್‌ ಬದಲಾವಣೆಗೆ ಕಾರಣವೇನು ?

ಬಿಸ್ಕೆಟ್ ಅಂದರೆ ಮೊದಲು ನೆನಪಿಗೆ ಬರೋದು ಪಾರ್ಲೆ-ಜಿ. ಹೌದು ಪಾರ್ಲೆ -ಜಿ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಮಕ್ಕಳಿಂದ ಹಿಡಿದು ಅಜ್ಜ ಅಜ್ಜಿಯರು ಸಹ ಬಿಸ್ಕೆಟ್ ತಿನ್ನುವುದರಲ್ಲಿ ಕಡಿಮೆ ಇಲ್ಲ. ಇದೀಗ ಪಾರ್ಲೆಜಿ ಕಂಪನಿಯು ಹೊಸ ಸುದ್ದಿಯನ್ನು ನೀಡಿದೆ.

 

ಹೌದು ಟ್ವಿಟರ್‌ನಲ್ಲಿ ಪಾರ್ಲೆಜಿಯ ಹೊಸ ಫ್ಲೇವರ್‌ನ ಪ್ಯಾಕ್ ಅನ್ನು ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ. ಇದು ಹಿಂದಿನ ಪಾರ್ಲೆಜಿಯಂತಿರದೇ ಹೊಸ ಮಾದರಿಯ ಪ್ಯಾಕೆಟ್ ಹಾಗೂ ವಿನ್ಯಾಸದ ಜೊತೆಗೆ ಓಟ್ಸ್ ಹಾಗೂ ಬೆರಿ ಫ್ಲೇವರ್‌ನಲ್ಲಿತ್ತು. ಪಾರ್ಲೆ-ಜಿ ಪ್ರಿಯರಿಗೆ ಈ ಹೊಸ ವಿನ್ಯಾಸ ಮತ್ತು ಫ್ಲೇವರ್ ಆಶ್ವರ್ಯವನ್ನುಂಟು ಮಾಡಿದೆ.

ಪ್ಯಾಕೆಟ್‌ನ ಮೇಲೆ ಓಟ್ಸ್ ಹಾಗೂ ಬೆರಿ ಎಂದು ಲೇಬಲ್ ಹೊಂದಿರುವ ಪಾರ್ಲೆ-ಜಿ ಬಿಸ್ಕತ್ತಿನ ಪ್ಯಾಕೆಟ್ ಅನ್ನು ಟ್ವಿಟರ್ ಬಳಕೆದಾರರು ಹಂಚಿಕೊಂಡಿದ್ದು ತಮ್ಮ ಅಧಿಕೃತ ಬಳಕೆದಾರ ಹೆಸರು @hojevlo ನಲ್ಲಿ ಪ್ಯಾಕೆಟ್‌ನ ಹೊಸ ವಿನ್ಯಾಸವನ್ನು ಬಹಿರಂಗಗೊಳಿಸಿದ್ದಾರೆ. ಪ್ರಸ್ತುತ ಸಂಸ್ಥೆಯು ವಿವಿಧ ಫ್ಲೇವರ್‌ಗಳಲ್ಲಿ ಬಿಸ್ಕತ್ತನ್ನು ಬಿಡುಗಡೆ ಮಾಡಿದ್ದು ದೇಶದ ಮಾರುಕಟ್ಟೆಗಳಲ್ಲಿ ಕೂಡ ಈಗಾಗಲೇ ದೊರೆಯುತ್ತಿದೆ.

ಟ್ವಿಟರ್‌ನಲ್ಲಿ ಹಂಚಿಕೊಂಡ ಫೋಟೋವನ್ನು ಲಕ್ಷ ಜನರು ವೀಕ್ಷಿಸಿದ್ದು ಸಾವಿರಾರು ಲೈಕ್‌ಗಳನ್ನು ಪಡೆದುಕೊಂಡಿದೆ. ಅದಲ್ಲದೆ ಹೊಸ ಪಾರ್ಲೆ-ಜಿ ಫ್ಲೇವರ್‌ಗೆ ಬಳಕೆದಾರರು ಕಾಮೆಂಟ್‌ಗಳ ಮೂಲಕ ಪ್ರತಿಕ್ರಿಯೆ ನೀಡಿದ್ದು ಹಲವಾರು ಮಂದಿ ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ.

ಕೆಲವರು ಯಾವಾಗಲೂ ಹೊಸತನ ಇಷ್ಟ ಪಟ್ಟರೆ ಇನ್ನು ಕೆಲವರು ಓಲ್ಡ್ ಇಸ್ ಗೋಲ್ಡ್ ಅನ್ನುವ ತತ್ವ ಪಾಲಿಸುವಂತೆ ಕಾಮೆಂಟ್ ಮಾಡಿದ್ದಾರೆ. ಒಟ್ಟಾರೆ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಲು ಪಾರ್ಲೆ-ಜಿ ಬೆಸ್ಟ್ ಉದಾಹರಣೆ ಅನ್ನುತ್ತಾ ಕೆಲವರು ಭಾವನಾತ್ಮಕ ಆಗಿರುವುದಂತೂ ಸತ್ಯ.

Leave A Reply

Your email address will not be published.