Discount on Smart TV : ಓನ್‌ಪ್ಲಸ್‌ ಸ್ಮಾರ್ಟ್‌ ಟಿವಿ 5 ಸಾವಿರ ರೂಪಾಯಿಗೆ | ಅಮೇಜಿಂಗ್‌ ಫೀಚರ್ಸ್‌​

ಇದೀಗ ಸ್ಮಾರ್ಟ್‌ಫೋನ್‌ಗಳಿಗಿಂತ ಕಡಿಮೆ ಬೆಲೆಯಲ್ಲಿ ದೊರೆಯುತ್ತಿದೆ ಸ್ಮಾರ್ಟ್ ಟಿವಿಗಳು. ನೀವು ಕೇವಲ ಐದು ಸಾವಿರ ರೂ ಬೆಲೆಯಲ್ಲಿ ಸ್ಮಾರ್ಟ್ ಟಿವಿ ಕೊಂಡುಕೊಳ್ಳಬಹುದು. ಅದಲ್ಲದೆ ನೀವು ಸ್ಮಾರ್ಟ್ ಟಿವಿಯಲ್ಲಿ ಚಲನಚಿತ್ರಗಳು, OTT ಪ್ಲಾಟ್‌ಫಾರ್ಮ್‌ಗಳು ಮತ್ತು ನಿಮ್ಮ ಮೆಚ್ಚಿನ ಅಪ್ಲಿಕೇಶನ್‌ಗಳನ್ನು ಸಹ ಬಳಸಬಹುದಾಗಿದೆ.

 

ಇನ್ನೇಕೆ ತಡ ಇದೀಗ ಒನ್​ಪ್ಲಸ್​ ಸ್ಮಾರ್ಟ್​​ ಟಿವಿ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ. ಈ ರಿಯಾಯಿತಿ ಮೂಲಕ ನೀವು ಕೇವಲ 5 ಸಾವಿರ ರೂಪಾಯಿಗೆ 32 ಇಂಚಿನ ಸ್ಮಾರ್ಟ್​​ ಟಿವಿಯನ್ನು ಖರೀದಿಸಬಹುದಾಗಿದೆ.

ಒನ್​ಪ್ಲಸ್​ ವೈ1ಎಸ್​ ವಿಶೇಷತೆಗಳು :

  • ಇದು ಹೆಚ್​ಡಿ ರೆಡಿ ಎಲ್​ಇಡಿ ಡಿಸ್ಪ್ಲೇಯೊಂದಿಗೆ ಬರುತ್ತದೆ. ಈ ಡಿಸ್​ಪ್ಲೇಯು 1366 x 768 ಪಿಕ್ಸೆಲ್​ನಷ್ಟು ರೆಸಲ್ಯೂಶನ್ ಅನ್ನು ಒಳಗೊಂಡಿದೆ.
  • ಇನ್ನು ಈ ಸ್ಮಾರ್ಟ್​ಟಿವಿ ವಿಶೇಷವಾಗಿ ಅಮೆಜಾನ್ ಪ್ರೈಮ್​ ವಿಡಿಯೋ, ಡಿಸ್ನಿ+ಹಾಟ್​ಸ್ಟಾರ್​, ಯೂಟ್ಯೂಬ್ ಅಪ್ಲಿಕೇಶನ್​ಗಳ​ನ್ನು ಬೆಂಬಲಿಸುತ್ತದೆ. ಒನ್​ಪ್ಲಸ್​ನ ಈ ಸ್ಮಾರ್ಟ್​ಟಿವಿ ಆಂಡ್ರಾಯ್ಡ್​ ಮೂಲಕ ಕಾರ್ಯನಿರ್ವಹಿಸುತ್ತದೆ.
  • ಇದು ಗೂಗಲ್ ಅಸಿಸ್ಟೆಂಟ್, ಕ್ರೋಮ್‌ಕಾಸ್ಟ್ ಇನ್ ಬಿಲ್ಟ್ ಅನ್ನು ಸಹ ಬೆಂಬಲಿಸುತ್ತದೆ ಮತ್ತು 20 ವ್ಯಾಟ್‌ಗಳ ಸೌಂಡ್​​ ಔಟ್‌ಪುಟ್ ಅನ್ನು ಹೊಂದಿದೆ.
  • ಸ್ಮಾರ್ಟ್ ಟಿವಿಯನ್ನು ಡಾಲ್ಬಿ ಆಡಿಯೋ ಸೌಂಡ್ ತಂತ್ರಜ್ಞಾನದೊಂದಿಗೆ ನೀಡಲಾಗಿದೆ.

ಒನ್​ಪ್ಲಸ್​ ವೈ1ಎಸ್​ 32 ಇಂಚಿನ ಹೆಚ್​ಡಿ ರೆಡಿ ಎಲ್​​ಇಡಿ ಸ್ಮಾರ್ಟ್ ಆಂಡ್ರಾಯ್ಡ್ ಟಿವಿ ಬೆಲೆ ರೂ. 21,999 ಆಗಿದೆ. ಆದರೆ ಆಫರ್‌ನಲ್ಲಿ ಇದನ್ನು 15,999 ಕ್ಕೆ ಖರೀದಿಸಬಹುದು.

ಇನ್ನು ಈ ಸ್ಮಾರ್ಟ್​ ಟಿವಿಯ ಮೇಲೆ ಎಕ್ಸ್​​ಚೇಂಜ್​ ಆಫರ್​ ಕೂಡ ಲಭ್ಯವಿದೆ. ನಿಮ್ಮಲ್ಲಿ ಹಳೇ ಟಿವಿ ಇದ್ದರೆ ಅದನ್ನು ನೀಡುವ ಮೂಲಕ ನೀವು ಈ ಸ್ಮಾರ್ಟ್​​ಟಿವಿ ಮೇಲೆ ರೂ.11,000 ವರೆಗೆ ರಿಯಾಯಿತಿ ಪಡೆಯಬಹುದು. ಅಂದರೆ ಕೇವಲ 4,999 ರೂಪಾಯಿಗೆ ಪಡೆಯಬಹುದಾಗಿದೆ.

ಜೊತೆಗೆ ಈ ಸ್ಮಾರ್ಟ್​​ ಟಿವಿಯನ್ನು ಬ್ಯಾಂಕ್​ ಆಫರ್ಸ್​​ ಮೂಲಕವೂ ಖರೀದಿಸಬಹುದಾಗಿದೆ. ಫ್ಲಿಪ್‌ಕಾರ್ಟ್​​ನ ಆಕ್ಸಿಸ್ ಬ್ಯಾಂಕ್ ಕಾರ್ಡ್‌ನಿಂದ ಖರೀದಿ ಮಾಡಿದರೆ ಶೇಕಡಾ 5 ಪ್ರತಿಶತ ಕ್ಯಾಶ್‌ಬ್ಯಾಕ್ ಪಡೆಯಬಹುದು. ಅಲ್ಲದೆ, ನೀವು ತಿಂಗಳಿಗೆ ರೂ.2,667 ಪಾವತಿಸಿ ಯಾವುದೇ ವೆಚ್ಚವಿಲ್ಲದೆ ಇಎಮ್​ಐ ಮೂಲಕ ಟಿವಿಯನ್ನು ಖರೀದಿಸಬಹುದಾಗಿದೆ.

ಈ ಎಲ್ಲಾ ವೈಶಿಷ್ಟ್ಯಗಳೊಂದಿಗೆ, ಪ್ಯಾನೆಲ್ನಲ್ಲಿ 1 ವರ್ಷದ ಹೆಚ್ಚುವರಿ ವ್ಯಾರಂಟಿ ನೀಡಲಾಗಿದ್ದು,ಅತೀ ಕಡಿಮೆ ಬೆಲೆಯಲ್ಲಿ ಈ ಸ್ಮಾರ್ಟ್ ಟಿವಿಯನ್ನು 1 ವರ್ಷದ ವ್ಯಾರಂಟಿಯೊಂದಿಗೆ ಖರೀದಿಸಬಹುದಾಗಿದೆ.

Leave A Reply

Your email address will not be published.