ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ ಬಿಎಂಟಿಸಿ |ಚಿಕ್ಕಬಳ್ಳಾಪುರಕ್ಕೂ ಸಂಚರಿಸಲಿದೆ ಬಿಎಂಟಿಸಿ ಬಸ್ ಗಳು
ಹೊಸ ವರ್ಷದ ಆರಂಭದಲ್ಲಿ ಬಿಎಂಟಿಸಿ ಸಂಸ್ಥೆಯು ಪ್ರಯಾಣಿಕರಿಗೆ ಸಿಹಿ ಸುದ್ಧಿ ನೀಡಿದೆ. ತನ್ನ ಬಿಎಂಟಿಸಿ ವ್ಯಾಪ್ತಿಯನ್ನು ವಿಸ್ತರಣೆ ಮಾಡುವತ್ತ ಸಂಸ್ಥೆ ಮುಂದಾಗಿದೆ.
ಇಷ್ಟು ದಿನ ಕೇವಲ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗೆಯ ವ್ಯಾಪ್ತಿಯಲ್ಲಿ ಸಂಚರಿಸುತ್ತಿದ್ದ ಬಿಎಂಟಿಸಿ ಬಸ್ ಗಳು ಇನ್ನು ಮುಂದೆ ಜನವರಿಯ ಮೊದಲ ವಾರದಿಂದ ಚಿಕ್ಕಬಳ್ಳಾಪುರಕ್ಕೂ ತೆರಳಿವೆ. ಇನ್ಮೇಲೆ ಸಾಮಾನ್ಯ ಹಾಗೂ ಐಷಾರಾಮಿ ಬಸ್ ಗಳು ಕೂಡ ಬೆಂಗಳೂರು ಟು ಚಿಕ್ಕಬಳ್ಳಾಪುರಗೆ ಸಂಚರಿಸಲಿವೆ. ಈ ಕುರಿತು ಬಿಎಂಟಿಸಿ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ಬಿಎಂಟಿಸಿ ಬಸ್ ವಿಸ್ತರಣೆ ಆಗುವ ಬಗ್ಗೆ ಬಿಎಂಟಿಸಿ ಉಪಾಧ್ಯಕ್ಷ ಕೆ.ವಿ.ನವೀನ್ ಕಿರಣ್ ಮಾಹಿತಿ ನೀಡಿದ್ದಾರೆ.
ಬಿಎಂಟಿಸಿ ಅಧ್ಯಕ್ಷರಾದ ನಂದೀಶ್ ರೆಡ್ಡಿ ಹಾಗೂ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರ ಪ್ರಯತ್ನದಿಂದಾಗಿ ಚಿಕ್ಕಬಳ್ಳಾಪುರಕ್ಕೂ ಬಿಎಂಟಿಸಿ ಬಸ್ಸುಗಳ ಸಂಚಾರ ಇನ್ನು ಆರಂಭವಾಗಲಿದ್ದು, ಈಗಾಗಲೇ ಎಲ್ಲಾ ತರನಾದ ಪತ್ರವ್ಯವಹಾರಗಳು ನಡೆದಿದೆ. ಪತ್ರ ವ್ಯವಹಾರವು ಕೊನೆ ಹಂತದಲ್ಲಿದ್ದು, ಸದ್ಯದಲ್ಲಿಯೇ ಬಸ್ಸುಗಳು ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಪ್ರವೇಶಿಸಲಿದೆ.
ಈ ಯೋಜನೆಯು ಚಿಕ್ಕಬಳ್ಳಾಪುರ ಜನರ ಹಲವು ವರುಷಗಳ ಬೇಡಿಕೆಯಾಗಿದ್ದು, ಬಿಎಂಟಿಸಿ ಬಸ್ಸುಗಳ ಆಗಮನವನ್ನು ಸದಾ ನಿರೀಕ್ಷಿಸುತ್ತಿದ್ದರು. ಇದೀಗ ನಿರ್ದೇಶಕ ಮಂಡಳಿ ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಂಡು ಬಿಎಂಟಿಸಿ ಮಂಡಳಿ ಚಿಕ್ಕಬಳ್ಳಾಪುರ ಜಿಲ್ಲಾ ಜನತೆಗೆ ಹಿಸಿಸುದ್ದಿ ನೀಡಿದೆ.