ರಣವೀರ್ ಸಿಂಗ್ ಗೆ ಹೋಲಿಸಿದರೆ ನನ್ನ ಮೇಲೆ ಸ್ವಲ್ಪವಾದರೂ ಬಟ್ಟೆ ಇತ್ತು| ನಟಿ ಶೆರ್ಲಿನ್ ಚೋಪ್ರಾ ಹೀಗೆ ಹೇಳಿದ್ದಾದರೂ ಏಕೆ?

ಕೆಲವು ತಿಂಗಳ ಹಿಂದಷ್ಟೇ ಅಂತರಾಷ್ಟ್ರೀಯ ಮಟ್ಟದ ನಿಯತಕಾಲಿಕೆಗಾಗಿ ರಣವೀರ್ ಸಿಂಗ್ ಬೆತ್ತಲೆಯಾಗಿ ಫೋಸ್ ನೀಡಿ ಮಾಡಿಸಿದ್ದ ಫೋಟೋ ಶೂಟ್ ಸಾಕಷ್ಟು ಸುದ್ಧಿಯಾಗಿತ್ತು. ಇದರ ಕುರಿತು ಸಾಕಷ್ಟು ಪರ ವಿರೋಧಗಳ ಚರ್ಚೆಯಾಗಿ ಕೆಲವರು ದೂರನ್ನು ದಾಖಲು ಮಾಡಿದ್ದರು. ಇದೀಗ ಈ ವಿಚಾರ ಮತ್ತೆ ಮುನ್ನಲೆಗೆ ಬಂದಿದ್ದು ಖ್ಯಾತ ನಟಿ ಶೆರ್ಲಿನ್ ಚೋಪ್ರಾ ‘ರಣವೀರ್ ಗೆ ಹೋಲಿಸಿದರೆ ನನ್ನ ಮೈ ಮೇಲೆ ಸ್ವಲ್ಪವಾದರೂ ಬಟ್ಟೆ ಇತ್ತು’ ಎಂದು ಹೇಳಿದ್ದಾರೆ. ಶೆರ್ಲಿನ್ ಹೀಗೆ ಹೇಳಿದ್ದಾದರೂ ಏಕೆ ಎಂಬ ಕುತೂಹಲವೇ? ಹಾಗಾದರೆ ಈ ಸ್ಟೋರಿ ನೋಡಿ.

 

ರಣವೀರ್ ಅಂತರಾಷ್ಟ್ರೀಯ ಮ್ಯಾಗಝಿನ್ ಗೆ ಫೋಟೋ ಶೂಟ್ ಮಾಡಿಸಿದಂತೆ ಇದೀಗ ನಟಿ ಶೆರ್ಲಿನ್ ಅವರುಕೂಡ ಪತ್ರಿಕೆ ಮತ್ತು ಮ್ಯಾಗಝಿನ್ ಗಳಿಗೆ ನೀಡಲು ಫೋಟೋಶೂಟ್ ಮಾಡಿಸಿದ್ದು ನಂತರ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಫೋಟೋ ನೋಡಿದ ಅಭಿಮಾನಿಗಳು, ಸೆಲೆಬ್ರಿಟಿಗಳು ಮೆಚ್ಚುಗೆ ವ್ಯಕ್ತಪಡಿಸಿದರೆ ಇನ್ನು ಕೆಲವರು ಬೇಸರದೊಡನೆ ಆಕ್ರೋಶ ಹೊರಹಾಕಿದ್ದಾರೆ.

ರಣವೀರ್ ಸಿಂಗ್ ಫೋಟೋ ವಿಚಾರ ಮತ್ತೆ ಚರ್ಚೆಗೆ ಬಂದದ್ದರಿಂದ ಈ ಬಗ್ಗೆ ಪ್ರತಿಕ್ರಿಯಿಸಿರುವ ಶೆರ್ಲಿನ್ ಚೋಪ್ರಾ ‘ರಣವೀರ್‌ ಸಿಂಗ್‌ ನ್ಯೂಡ್‌ ಫೋಟೋ ಶೂಟ್‌ ಅನ್ನು ಕೆಲವರು ಹೊಗಳಿದ್ದಾರೆ. ಆದೆರೆ ತನ್ನ ಬೋಲ್ಡ್ ಮ್ಯಾಗಜೀನ್ ಫೋಟೋಶೂಟ್‌ಗಾಗಿ ತನ್ನನ್ನು ‘ಕ್ಯಾರೆಕ್ಟರ್‌ಲೆಸ್’ ಎಂದು ಏಕೆ ಕರೆಯಲಾಯಿತು, ಅಂತಾರಾಷ್ಟ್ರೀಯ ನಿಯತಕಾಲಿಕೆಗಾಗಿ ನಾನು ಕೂಡ ಇದೇ ರೀತಿಯ ಫೋಟೋಶೂಟ್ ಮಾಡಿದ್ದೇನೆ. ಆದರೆ ಇದರಿಂದ ಕೆಟ್ಟ ಮತ್ತು ಅಸಹ್ಯವಾದ ಕಾಮೆಂಟು ಗಳನ್ನು ಎದುರಿಸಬೇಕಾಯಿತು’ ಎಂದು ನಟಿ ಹೇಳಿದರು.

ನಟಿ ರಣವೀರ್ ವಿರುದ್ಧ ಶೆರ್ಲಿನ್ ಚೋಪ್ರಾ ಈ ರೀತಿ ಇದ್ದಕ್ಕಿದ್ದಂತೆ ಯಾಕೆ ವಾಗ್ಧಾಳಿ ಮಾಡುತ್ತಿದ್ದಾರೆ ಎಂದು ನೋಡಿದಾಗ ಹಿಂದೊಮ್ಮೆ ಈವೆಂಟ್ ಗೆ ಹೋದ ಸಮಯದಲ್ಲಿ ದೀಪಿಕಾ ಪಡುಕೋಣೆ ನಾನು ಹಾಕಿದ್ದ ಬಟ್ಟೆ ನೋಡಿ ನನ್ನನ್ನು ಜಡ್ಜ್‌ ಮಾಡಿದ್ದರು. ಆದರೆ ಅವರ ಪತಿಯೇ ಈ ರೀತಿ ಫೋಟೋ ಶೂಟ್ ಮಾಡಿದ್ದಕ್ಕೆ ಅವರು ಏನು ಹೇಳಲೇ ಇಲ್ಲವಲ್ಲಾ ಎಂದು ಶೆರ್ಲಿನ್‌ ಮಾತಿನಲ್ಲಿ ತಿವಿದ್ದಿದ್ದಾರೆ.

ನಾನೂ ಅಂತಾರಾಷ್ಟ್ರೀಯ ನಿಯತಕಾಲಿಕೆಗಾಗಿ ಬೋಲ್ಡ್ ಫೋಟೋಶೂಟ್ ಮಾಡಿದಾಗ ನನ್ನ ಬಗ್ಗೆ ಸಮಾಜವು ನನ್ನನ್ನು ಬಾಯಿಗೆ ಬಂದಂತೆ ಮಾತನಾಡಿತು. ಕ್ಯಾರೆಕ್ಟರ್‌ಲೆಸ್‌ ಎಂದೆಲ್ಲಾ ನಿಂದಿಸಿತು. ಇತರ ಅನೇಕ ಹೆಸರುಗಳಿಂದ ಕರೆಯಿತು. ಆದರೆ ರಣವೀರ್ ಗೆ ಹೆಚ್ಚಾಗಿ ಏನು ಹೇಳಲೇ ಇಲ್ಲ. ಈ ತರದ ಡಬಲ್ ಸ್ಟಾಂಡರ್ಡ್ ಏಕೆ? ಬೂಟಾಟಿಕೆ ಏಕೆ? ನಾನು ಇದೇ ರೀತಿಯ ಫೋಟೋಶೂಟ್ ಮಾಡಿದಾಗ, ನನ್ನ ದೇಹದಲ್ಲಿ ಏನಾದರೂ ದೋಷವಿದೆಯೇ? ಹಾಗೆ ನೋಡಿದರೆ ರಣವೀರ್ ಗಿಂತ ನನ್ನ ಮೈಮೇಲೆಯೇ ಸ್ವಲ್ಪ ಹೆಚ್ಚಿತ್ತು. ಎಂದು ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಶೆರ್ಲಿನ್ ಹೇಳಿದ್ದಾರೆ.

Leave A Reply

Your email address will not be published.