ಟೋಲ್ ಟ್ಯಾಕ್ಸ್ ಪಾವತಿಯಲ್ಲಿ ವಿನಾಯಿತಿ ಬಗ್ಗೆ ನಿತಿನ್ ಗಡ್ಕರಿ ಘೋಷಣೆ -ಹೊಸ ಪಟ್ಟಿ ಇಲ್ಲಿದೆ
ಇಂದಿನ ಜೀವನ ಶೈಲಿಗೆ ಅನುಗುಣವಾಗಿ ಪ್ರತಿಯೊಬ್ಬರ ಮನೆಯಲ್ಲೂ ವಾಹನಗಳು ಇರುವುದು ಸಹಜ. ದಿನನಿತ್ಯದ ಓಡಾಟಕ್ಕೆ ವಾಹನಗಳು ಅವಶ್ಯಕವಾಗಿದ್ದು, ಬಸ್ ಗಳಿಗೆ ಕಾಯುತ್ತಾ ಟ್ರಾಫಿಕ್ ನಡುವಲ್ಲಿ ಸಿಲುಕಿಕೊಂಡು ಗಂಟೆಗಟ್ಟಲೆ ಕಾಯುವ ಸಮಯದಲ್ಲಿ ವಾಹನಗಳು ನೆರವಾಗುತ್ತವೆ. ಇದೀಗ, ಕೇಂದ್ರ ಸಚಿವ ನಿತಿನ್ ಗಡ್ಕರಿ ಟೋಲ್ ಟ್ಯಾಕ್ಸ್ ಬಗ್ಗೆ ಮಹತ್ವದ ಮಾಹಿತಿ ನೀಡಿದ್ದಾರೆ.
ಟೋಲ್ ತೆರಿಗೆಯನ್ನು NHAI ಸಂಗ್ರಹಿಸುತ್ತದೆ. ಹೆದ್ದಾರಿಯಲ್ಲಿ ನಾಲ್ಕು ಚಕ್ರದ ವಾಹನದಲ್ಲಿ ಪ್ರಯಾಣಿಸಿದರೆ ಟೋಲ್ ತೆರಿಗೆಯನ್ನು ಪಾವತಿಸಬೇಕಾಗುವುದು ಗೊತ್ತಿರುವ ವಿಚಾರವೇ!!. ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುವುದಾದರೆ ಟೋಲ್ ತೆರಿಗೆಯನ್ನು ಪಾವತಿಸಬೇಕಾಗಿಲ್ಲ. ದ್ವಿಚಕ್ರ ವಾಹನ ಖರೀದಿಸುವ ಸಂದರ್ಭದಲ್ಲಿ ಮಾತ್ರ ಗ್ರಾಹಕರಿಂದ ರಸ್ತೆ ತೆರಿಗೆ ಸಂಗ್ರಹ ಮಾಡಲಾಗುತ್ತದೆ. ಪ್ರಸ್ತುತ, ಟೋಲ್ ತೆರಿಗೆಯ ಮೊತ್ತವು ವಾಹನದ ಉದ್ದವನ್ನು ಅವಲಂಬನೆಯಾಗಿರುತ್ತದೆ.
ಇನ್ನು ಮುಂದೆ ಭಾರೀ ಟೋಲ್ ತೆರಿಗೆಯಿಂದ ಮುಕ್ತಿ ದೊರೆಯಲಿದ್ದು, ಈ ಕುರಿತಾಗಿ ಸರ್ಕಾರದಿಂದ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದೆ. ಹೊಸ ನಿಯಮಗಳ ಅಡಿಯಲ್ಲಿ, ಟೋಲ್ ತೆರಿಗೆಯಲ್ಲಿ ವಿನಾಯಿತಿಯನ್ನು ನೀಡಲಾಗುವುದು ಎಂದು ಸರ್ಕಾರ ಹೇಳಿದ್ದು, ಈ ಬಗ್ಗೆ ಸಂಪೂರ್ಣ ಪಟ್ಟಿಯನ್ನು ಕೂಡಾ ಬಿಡುಗಡೆ ಮಾಡಲಾಗಿದೆ.
ಅಗ್ನಿಶಾಮಕ ಇಲಾಖೆ, ಅರೆಸೇನಾ ಪಡೆಗಳು ಮತ್ತು ಪೊಲೀಸ್ ಸೇರಿದಂತೆ ಸಮವಸ್ತ್ರದಲ್ಲಿರುವ ಕೇಂದ್ರ ಮತ್ತು ರಾಜ್ಯ ಸಶಸ್ತ್ರ ಪಡೆಗಳು ಕೂಡಾ ತೆರಿಗೆ ಪಾವತಿಸಬೇಕಾದ ಅವಶ್ಯಕತೆ ಇಲ್ಲ. ಈ ತೆರಿಗೆಯನ್ನು ರಕ್ಷಣಾ ಸಚಿವಾಲಯ ಮತ್ತು ಅಂಗವಿಕಲರಿಗಾಗಿ ತಯಾರಿಸಿದ ಯಾಂತ್ರಿಕ ವಾಹನಗಳ ಮೇಲೂ ವಿಧಿಸುವಂತಿಲ್ಲ.
ಪ್ರಯಾಣಕ್ಕೆ ಅನುಗುಣವಾಗಿ ಟೋಲ್ ವೆಚ್ಚವು ಕೂಡಾ ಭಿನ್ನವಾಗಿರುತ್ತದೆ. ಇದರ ಜೊತೆಗೆ ಪ್ರಯಾಣದ ವೇಳೆ ರಿಟರ್ನ್ ಟೋಲ್ ತೆರಿಗೆಯನ್ನು ತೆಗೆದುಕೊಳ್ಳುವ ಆಯ್ಕೆಯೂ ಇರಲಿದ್ದು, ಇದಲ್ಲದೇ ಪ್ರತಿದಿನ ಹೆದ್ದಾರಿಯಲ್ಲಿ ಸಂಚರಿಸುವವರಿಗೆ ಪಾಸ್ ಸೌಲಭ್ಯ ಕೂಡ ದೊರೆಯಲಿದೆ.
ಎಸ್‌ಎಂಎಸ್ ಮೂಲಕ ಪಟ್ಟಿಯನ್ನು ಪರಿಶೀಲಿಸಬಹುದು :ಎಸ್‌ಎಂಎಸ್ ಮೂಲಕ ಟೋಲ್ ತೆರಿಗೆ ಪಟ್ಟಿಯನ್ನು ತಿಳಿದುಕೊಳ್ಳಬಹುದಾಗಿದೆ. ಇದಕ್ಕಾಗಿ, ನಿಮ್ಮ ಫೋನ್‌ನಿಂದ 56070 ಗೆ TIS < ಟೋಲ್ ಪ್ಲಾಜಾ ID ಎಂದು ಟೈಪ್ ಮಾಡಬೇಕು. ಹೀಗೆ ಮೆಸೇಜ್ ಮಾಡಿದ ತಕ್ಷಣ ಟೋಲ್ ತೆರಿಗೆ ದರ ಪಟ್ಟಿಯ ಪಟ್ಟಿ ನಿಮ್ಮ ಫೋನ್‌ನಲ್ಲಿ ಬರಲಿದೆ.
ಇವರು ಟೋಲ್ ಟ್ಯಾಕ್ಸ್ ಪಾವತಿ ಮಾಡಬೇಕಾಗಿಲ್ಲ
ಭಾರತದ ರಾಷ್ಟ್ರಪತಿ
ಭಾರತದ ಪ್ರಧಾನ ಮಂತ್ರಿ
ಭಾರತದ ಮುಖ್ಯ ನ್ಯಾಯಮೂರ್ತಿ
ಭಾರತದ ಉಪ ರಾಷ್ಟ್ರಪತಿ
ಕೇಂದ್ರದ ಕ್ಯಾಬಿನೆಟ್ ಮಂತ್ರಿ
ಸುಪ್ರೀಂ ಕೋರ್ಟ್ ನ್ಯಾಯಾಧೀಶ
ಲೋಕಸಭೆಯ ಸ್ಪೀಕರ್
ಕೇಂದ್ರ ರಾಜ್ಯ ಸಚಿವರು
ಮುಖ್ಯಮಂತ್ರಿ
ಕೇಂದ್ರಾಡಳಿತ ಪ್ರದೇಶದ ಲೆಫ್ಟಿನೆಂಟ್ ಗವರ್ನರ್
ರಾಜ್ಯದ ವಿಧಾನಸಭೆಯ ಸ್ಪೀಕರ್
ಮುಖ್ಯ ನ್ಯಾಯಮೂರ್ತಿ ಉಚ್ಚ ನ್ಯಾಯಾಲಯ
ರಾಜ್ಯದ ವಿಧಾನ ಪರಿಷತ್ತಿನ ಸ್ಪೀಕರ್ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಭಾರತ ಸರ್ಕಾರದ ಕಾರ್ಯದರ್ಶಿ
ಸಂಸತ್ ಸದಸ್ಯ ಸೇನಾ ಕಮಾಂಡರ್, ಸೇನಾ ಸಿಬ್ಬಂದಿಯ ಉಪಾಧ್ಯಕ್ಷ