Airtel ಗ್ರಾಹಕರಿಗೆ ಗುಡ್ ನ್ಯೂಸ್ | ಇನ್ಮುಂದೆ ಏರ್ಟೆಲ್ ಮೂಲಕವೂ ಸಿಗಲಿದೆ ಸಾಲ ಸೌಲಭ್ಯ!

ಟೆಕ್ನಾಲಜಿ ಜಗತ್ತಿನಲ್ಲಿ ಅತೀ ಹೆಚ್ಚು ಕೇಳಿಬರುತ್ತಿರುವ ಪದವೆಂದರೆ ಏರ್ಟೆಲ್. ಅತೀ ವೇಗ ಓಡುತ್ತಿರುವ ಈ ನೆಟವರ್ಕ್ ಪ್ರಪಂಚದಲ್ಲಿ ಭಾರಿ ಸಂಚಲನವನ್ನೇ ಮೂಡಿಸುತ್ತಿದೆ. ಏರ್ಟೆಲ್ ಹೊಸ ಹೊಸ ಯೋಜನೆಗಳನ್ನು ರೂಪಿಸುವುದರ ಮೂಲಕ ಗ್ರಾಹಕರಿಗೆ ಹತ್ತಿರವಾಗುತ್ತಲೇ ಬಂದಿದೆ. ಇದೀಗ ಮತ್ತೊಂದು ಹೊಸ ಯೋಜನೆಯ ಮೂಲಕ ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗಲು ಮುಂದಾಗಿದೆ.

ಹೌದು. ಇನ್ಮುಂದೆ ಏರ್ಟೆಲ್ ಮೂಲಕ ಸಾಲ ಸೌಲಭ್ಯವೂ ಸಿಗಲಿದ್ದು, ಈ ಪ್ರಯೋಜನವು ಏರ್‌ಟೆಲ್ ಸಿಮ್ ಕಾರ್ಡ್ ಬಳಕೆದಾರರಿಗೆ ಮಾತ್ರ ಅನ್ವಯಿಸುತ್ತದೆ. ಏರ್‌ಟೆಲ್ ಗ್ರಾಹಕರು ರೂ. 8 ಲಕ್ಷದಿಂದ ಕನಿಷ್ಠ ರೂ. 10 ಸಾವಿರದವರೆಗೆ ಸಾಲ ಪಡೆಯಬಹುದು. ಏರ್‌ಟೆಲ್ ಥ್ಯಾಂಕ್ಸ್ ಮೂಲಕ ನೀವು ಆನ್‌ಲೈನ್‌ನಲ್ಲಿ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು.

ಸಾಲ ಪಡೆಯಲು ಬಯಸುವ ಏರ್‌ಟೆಲ್ ಗ್ರಾಹಕರು ಮೊದಲು ಗೂಗಲ್ ಪ್ಲೇ ಸ್ಟೋರ್‌ನಿಂದ ಏರ್‌ಟೆಲ್ ಥ್ಯಾಂಕ್ಸ್ ಆಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ನಂತರ ಓಟಿಪಿ ಸಹಾಯದಿಂದ ಲಾಗಿನ್ ಮಾಡಿ. ನಿಮ್ಮ ಏರ್‌ಟೆಲ್ ಸೇವೆಗಳ ಬಗ್ಗೆ ಇಲ್ಲಿ ನೀವು ತಿಳಿದುಕೊಳ್ಳಬಹುದು. ನೀವು ಆಪ್​ನಲ್ಲಿ ಶಾಪ್ ಆಯ್ಕೆಗೆ ಹೋಗಿ, ಫೈನಾನ್ಷಿಯಲ್ ಸರ್ವೀಸಸ್​​ ಎಂಬ ಆಯ್ಕೆಯನ್ನು ನೋಡಬಹುದು. ಅದರ ಮೇಲೆ ಕ್ಲಿಕ್ ಮಾಡಿ. ಇದರಲ್ಲಿ ನಿಮಗೆ ಹಲವು ಆಯ್ಕೆಗಳಿರುತ್ತವೆ. ಇವುಗಳಲ್ಲಿ ನೀವು ಪರ್ಸನಲ್ ಲೋನ್ ಎಂಬ ಆಯ್ಕೆಯನ್ನು ಸೆಲೆಕ್ಟ್​ ಮಾಡಬೇಕು.

ನಂತರ ನಿಮಗಾಗಿ ಹೊಸ ಪೇಜ್​ ಒಂದು ತೆರೆದುಕೊಳ್ಳುತ್ತದೆ. ಇಲ್ಲಿ ನೀವು ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು. ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಬ್ಯಾಂಕ್ ಖಾತೆಯಂತಹ ವಿವರಗಳನ್ನು ನೀಡಬೇಕಾಗುತ್ತವೆ. ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿರುವವರಿಗೆ ಸಾಲದ ಅರ್ಜಿ ಸಲ್ಲಿಸಲು ಇನ್ನಷ್ಟು ಸುಲಭವಾಗಿರುತ್ತದೆ.

ಏರ್‌ಟೆಲ್ ನೇರವಾಗಿ ಸಾಲ ಯಾರಿಗೂ ನೀಡುವುದಿಲ್ಲ. ಇದು ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತದೆ. ಏರ್‌ಟೆಲ್ ತನ್ನ ಅಪ್ಲಿಕೇಶನ್‌ನಲ್ಲಿ ಹಲವಾರು ಕಂಪನಿಗಳ ಸಹಭಾಗಿತ್ವದಲ್ಲಿ ಸಾಲ ಸೇವೆಗಳನ್ನು ನೀಡುತ್ತಿದೆ. ಏರ್‌ಟೆಲ್ ಡಿಎಂಐ ಫೈನಾನ್ಸ್, ಮನಿ ವ್ಯೂ ಮತ್ತು ಐಡಿಎಫ್‌ಸಿ ಫಸ್ಟ್ ಬ್ಯಾಂಕ್‌ನಂತಹ ಹಣಕಾಸು ಸಂಸ್ಥೆಗಳೊಂದಿಗೆ ಪಾಲುದಾರಿಕೆ ಹೊಂದಿದೆ.

ಇನ್ನು ಸಾಲಕ್ಕೆ ಅರ್ಜಿ ಸಲ್ಲಿಸಿದ 24 ಗಂಟೆಯಲ್ಲಿ ಗ್ರಾಹಕರ ಬ್ಯಾಂಕ್ ಖಾತೆಗೆ ಹಣ ಬೀಳುತ್ತದೆ. ನಂತರ ನಿಮ್ಮ ಬ್ಯಾಂಕ್ ಖಾತೆಯಿಂದ ಪ್ರತಿ ತಿಂಗಳು ನೀವು ನಿಗದಿ ಪಡಿಸಿದಷ್ಟು ಇಎಮ್​ಐ ಹಣ ಕಟ್​ ಆಗುತ್ತದೆ. ವೇಗದ ಸಾಲ ಮರುಪಾವತಿ ವಿಷಯಕ್ಕೆ ಸಂಬಂಧಿಸಿದಂತೆ ಇಎಮ್​ಐ ಮೂಲಕ ಹಣ ಪಾವತಿಸುವ ಆಯ್ಕೆಯೂ ಇದೆ.

Leave A Reply

Your email address will not be published.