ಇವರೇ ನೋಡಿ ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ಮೊತ್ತ ಪಡೆದ ಟಾಪ್ 10 ಆಟಗಾರರು!
ಐಪಿಎಲ್ ಮ್ಯಾಚ್ ಆರಂಭವಾಗುತ್ತದೆ ಎಂದಾಕ್ಷಣ ಇಡೀ ವಿಶ್ವದ ಕ್ರಿಕೆಟ್ ಪ್ರಿಯರು ಭಾರತದತ್ತ ನೋಡುತ್ತಾರೆ. ಅದರಲ್ಲೂ ಕೂಡ ಐಪಿಎಲ್ ಹರಾಜು ಪ್ರಕ್ರಿಯೆ ಶುರುವಾಯಿತೆಂದರೆ ಅತೀ ಹೆಚ್ಚು ಮೊತ್ತಕ್ಕೆ ಯಾರನ್ನು ಕೊಂಡುಕೊಂಡರು, ಹೊಸ ಆಟಗಾರರು ಯಾರಾದರೂ ಸೇರ್ಪಡೆ ಆಗಿದ್ದಾರೆಯೇ ಎಂಬ ಕುತೂಹಲವಂತೂ ಎಲ್ಲರಿಗೂ ಇದ್ದೇ ಇರುತ್ತದೆ.
ಈ ವರುಷವೂ ಇಂಡಿಯನ್ ಪ್ರೀಮಿಯರ್ ಲೀಗ್ ನ ಹರಾಜು ಪ್ರಕ್ರಿಯೆ ಮುಗಿದ್ದಿದ್ದು ಎಲ್ಲರ ಕುತೂಹಲವು ತಣಿದಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ಮೂಲಕ ಅತೀ ಹೆಚ್ಚು ಮೊತ್ತ ಪಡೆದ ಆಟಗಾರರೆಂದರೆ ಎಂಎಸ್ ಧೋನಿ. ಆದರೆ ಮಹೇಂದ್ರ ಸಿಂಗ್ ಧೋನಿಯನ್ನು ಹಿಂದಿಕ್ಕಿ ರೋಹಿತ್ ಶರ್ಮಾ ಅಗ್ರಸ್ಥಾನ ಅಲಂಕರಿಸಿದ್ದಾರೆ. ಇನ್ನು ಇಂಡಿಯನ್ ಪ್ರೀಮಿಯರ್ ಲೀಗ್ ಆಟದ ಇತಿಹಾಸದಲ್ಲೇ ಅತೀ ಹೆಚ್ಚು ಮೊತ್ತ ಪಡೆದ ಟಾಪ್ 10 ಆಟಗಾರರು ಯಾರೆಂದು ತಿಳಿಯುವ ಕುತೂಹಲವೆ? ಹಾಗಾದರೆ ಈ ಸ್ಟೋರಿ ನೋಡಿ.
ಟಾಪ್ ಒನ್ ಆಗಿ ಹೊರಹೊಮ್ಮಿರುವ ಆಟಾಗಾರ ರೋಹಿತ್ ಶರ್ಮಾ ಅವರು16 ಸೀಸನ್ ಮೂಲಕ ಪಡೆದಿರುವ ಒಟ್ಟು ಮೊತ್ತ 178.6 ಕೋಟಿ. 2008 ರಿಂದ ಐಪಿಎಲ್ ನಲ್ಲಿ ಆಡುತ್ತಿರುವ ಮಹೇಂದ್ರ ಸಿಂಗ್ ಧೋನಿ ಒಟ್ಟು 176.84 ಕೋಟಿ ಗಳಿಸಿ 2ನೇ ಸ್ಥಾನದಲ್ಲಿದ್ದಾರೆ. 2008 ರಿಂದ ಆರ್ಸಿಬಿ ಪರ ಮಾತ್ರ ಆಡಿರುವ ವಿರಾಟ್ ಕೊಹ್ಲಿ ಒಟ್ಟು 173 ಕೋಟಿ ಗಳಿಸಿ 3ನೇ ಸ್ಥಾನದಲ್ಲಿದ್ದಾರೆ. 2021 ರವರೆಗೆ ಐಪಿಎಲ್ನಲ್ಲಿ ಕಾಣಿಸಿಕೊಂಡ ಸುರೇಶ್ ರೈನಾ 110 ಕೋಟಿ ಗಳಿಸಿ 4ನೇ ಸ್ಥಾನದಲ್ಲಿದ್ದಾರೆ.
ಸಿಎಸ್ಕೆ ತಂಡದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಒಟ್ಟು 109 ಕೋಟಿಗಳೊಂದಿಗೆ 5ನೇ ಸ್ಥಾನದಲ್ಲಿದ್ದಾರೆ. 2012 ರಿಂದ ಕೆಕೆಆರ್ ಪರ ಕಣಕ್ಕಿಳಿಯುತ್ತಿರುವ ವೆಸ್ಟ್ ಇಂಡೀಸ್ ಸ್ಪಿನ್ನರ್ ನರೈನ್ 107ಕೋಟಿ ಗಳಿಕೆಯೊಂದಿಗೆ 6ನೇ ಸ್ಥಾನದಲ್ಲಿದ್ದಾರೆ. 2021 ರವರೆಗೆ ಐಪಿಎಲ್ ಟೂರ್ನಿಗಳಲ್ಲಿ RCBಯಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ಮನ ಗೆದ್ದಿದ್ದ ಸೌತ್ ಆಫ್ರಿಕಾ ಎಬಿ ಡಿವಿಲಿಯರ್ಸ್ 102.5 ಕೋಟಿ ಗಳೊಂದಿಗೆ 7ನೇ ಸ್ಥಾನದಲ್ಲಿದ್ದಾರೆ.
2018 ರವರಗೆ ಐಪಿಎಲ್ನ ಭಾಗವಾಗಿದ್ದ ಗೌತಮ್ ಗಂಭೀರ್ 94.62 ಕೋಟಿ ಗಳಿಕೆಯೊಂದಿಗೆ 8ನೇ ಸ್ಥಾನದಲ್ಲಿದ್ದಾರೆ. 2008 ರಿಂದ ಐಪಿಎಲ್ ತಂಡಗಳ ಭಾಗವಾಗಿರುವ ಶಿಖರ್ ಧವನ್ ಗಳಿಸಿರುವ ಒಟ್ಟು ಆದಾಯ 91.8 ಕೋಟಿ ಇದ್ದು 9ನೇ ಸ್ಥಾನದಲ್ಲಿದ್ದಾರೆ. ಪ್ರಸ್ತುತ ಆರ್ಸಿಬಿ ತಂಡದ ಆಟಗಾರನಾಗಿರುವ ದಿನೇಶ್ ಕಾರ್ತಿಕ್ ಐಪಿಎಲ್ ಮೂಲಕ 86.92 ಕೋಟಿ ಸಂಪಾದಿಸಿದ್ದು 10 ನೇ ಸ್ಥಾನದಲ್ಲಿದ್ದಾರೆ.