ನಡೆದಾಡುವ ದೇವರು, ಸಿದ್ದೇಶ್ವರ ಸ್ವಾಮೀಜಿ ಇನ್ನು ಬರೀ ನೆನಪು!!

ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ (82)ನಿಧನರಾಗಿದ್ದಾರೆ. ಈ ಘಟನೆ ತಿಳಿದ ಭಕ್ತರು ಆಕ್ರಂದನ ಹೆಚ್ಚಾಗಿದ್ದು ಮಠದ ಬಳಿ ಭಕ್ತ ಸಾಗರ ಹರಿದು ಬರುತ್ತಿದೆ.

 

ಶ್ರೀಗಳು ಇಂದು ಸಂಜೆ 6 ಗಂಟೆ 5 ನಿಮಿಷಕ್ಕೆ ಲಿಂಗೈಕ್ಯರಾಗಿದ್ದು, ನಾಳೆ ಸಂಜೆ ಸಿದ್ದೇಶ್ವರ ಶ್ರೀಗಳ ಅಂತ್ಯಸಂಸ್ಕಾರ ನಡೆಯಲಿದೆ. ನಾಳೆ ಸಂಜೆ 4.30ವರೆಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.

ಈಗಾಗಲೇ ಸಿಎಂ ಬಸವರಾಜ ಬೊಮ್ಮಾಯಿ ಟ್ವೀಟ್‌ ಮೂಲಕ ಸಂತಾಪ ಸೂಚಿಸಿದ್ದಾರೆ.

Leave A Reply

Your email address will not be published.