ಉದ್ಯಮಿ ಪ್ರದೀಪ್ ಆತ್ಮಹತ್ಯೆ ಕೇಸ್‌ : ತನಿಖೆಗೆ ಸಂಪೂರ್ಣ ಸಹಾಯ ನೀಡುತ್ತೇನೆ : ಸುದ್ದಿಗೋಷ್ಠಿಯಲ್ಲಿ ಅರವಿಂದ ಲಿಂಬಾವಳಿ ಸ್ಪಷ್ಟನೆ

Share the Article

ಬೆಂಗಳೂರು : ತಲೆಗೆ ಗುಂಡು ಹಾರಿಸಿಕೊಂಡು ಉದ್ಯಮಿ ಪ್ರದೀಪ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಡೆತ್‌ ನೋಟ್‌ ನಲ್ಲಿ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಹೆಸರು ಸೇರಿದಂತೆ  ಆರು ಜನರ ವಿರುದ್ಧ ಎಫ್‌ ಐಆರ್‌ ದಾಖಲಾದ ಬೆನ್ನಲ್ಲೆ ಇಂದು ವಿಧಾನಸೌಧದಲ್ಲಿ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಸುದ್ದಿಗೋಷ್ಠಿ ನಡೆಸಿದ್ದಾರೆ

ಸುದ್ದಿಗಾರರೊಂದಿಗೆ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಮಾತನಾಡಿ, ಪ್ರದೀಪ್‌ನ ಆತ್ಮಕ್ಕೆ ಶಾಂತಿ ಸಿಗಲಿ  ಆಥ್ಮಹತ್ಯೆಗೆ ಶರಣಾದ ಪ್ರದೀಪ್‌ ನಮ್ಮ ಕಾರ್ಯಕರ್ತನೇ ಆಗಿದ್ದಾನೆ. ಚುನಾವಣೆಯಲ್ಲಿ ಸೋಷಿಯಲ್‌ ಮೀಡಿಯಾ ಗುತ್ತಿಗೆ ತೆಗೆದುಕೊಂಡಿದ್ದನು. ಈತ ವಾರ್ಡ್‌ ಮಟ್ಟದಲ್ಲಿಪ್ರವೀಣ್‌  ಉತ್ತಮ ಕೆಲಸ ಮಾಡುತ್ತಿದ್ದನು. ಜೂನ್‌ ಜುಲೈನಲ್ಲಿ ನಮ್ಮ ಪಕ್ಷದ ಕಚೇರಿಗೆ ಬಂದಿದ್ದನು .

ಜನತಾ ದರ್ಶನ ವೇಳೆ ನನ್ನನ್ನು ಭೇಟಿಯಾಗಿದ್ದು ನಿಜ. ನನಗೆ ಸಮಸ್ಯೆಯಾಗಿದೆ ಎಂದು ನನ್ನ ಬಳಿ ಹೇಳಿಕೊಂಡಿದ್ದನು. ಆತ ನೀಡಿದ ಸಂಖ್ಯೆಗೆ ಹಣ ನೀಡುವಂತೆ ಹೇಳಿದ್ದೆನೆ. ಕೊರೊನಾ ಹಿನ್ನೆಲೆ ಸ್ವಲ್ಪ ಸಮಯ ಕಾಯುವಂತೆ ಹೇಳಿದ್ದೆ. ಪರಸ್ಪರ ಕೂತು ಚರ್ಚೆ ಮಾಡಿ ಸಮಸ್ಯೆ ಬಗೆ ಹರಿಸಿಕೊಳ್ಳುವಂತೆ ಹೇಳಿದ್ದೆ. ಬಳಿ ಭೂಮಿ ಪೂಜೆ ಸಂದರ್ಭದಲ್ಲೂ ಆತ ಭೇಟಿಯಾಗಿದ್ದನು.

ಅನ್ಯಾಯವಾಗಿದೆ ಎಂದು ಯಾರೇ ನನ್ನ ಬಳಿ ಬಂದರು ನಾನು ಸಹಾಯ ಮಾಡುತ್ತೇನೆ. ಡೆತ್‌ ನೋಟ್‌ ಬರೆದ ಹೆಸರಿನವರ ಬಗ್ಗೆಯೂ ನನಗೆ ಪರಿಚಯವಿದೆ. ಉದ್ಯಮಿ ಪ್ರದೀಪ್ ಆತ್ಮಹತ್ಯೆ ಮಾಡಿಕೊಂಡಾಗ ಬರೆದಿಟ್ಟ ಡೆತ್‌ ನೋಟ್‌ನಲ್ಲಿ ನನ್ನ ಹೆಸರು ಉಲ್ಲೇಖಿಸಿದ್ದಾರೆ. ಪ್ರಕರಣದ ತನಿಖೆಗೆ ಸಂಪೂರ್ಣ ಸಹಾಯ ನೀಡುತ್ತೇನೆ. ಇನ್ಮುಂದೆ ಇಂತಹ ವಿಚಾರದಲ್ಲಿ ಸಹಾಯ ಮಾಡೋದಕ್ಕೆ ಹೋಗುವ ಮುನ್ನಾ ಜನಪ್ರತಿನಿಧಿಗಳೆ ಹುಷಾರಾಗಿರಿ ಎಂದು ಎಚ್ಚರಿಕೆ ನೀಡಿದ್ದಾರೆ.  

ಡೆತ್‌ ನೋಟ್‌ ನಲ್ಲಿ ಬಿಜೆಪಿ ಶಾಸಕ  ಅರವಿಂದ ಲಿಂಬಾವಳಿ ಸೇರಿದಂತೆ  ಆರು ಜನರ ವಿರುದ್ಧ ಎಫ್‌ ಐಆರ್‌ ಪೊಲೀಸರು ದಾಖಲಿಸಿದ್ದರು. ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌  ನೀಡುವ ಸಾಧ್ಯತೆ  ಇದೆ.

Leave A Reply