ಡಿ.31ರಂದು 1.54 ಕೋಟಿ ಆದಾಯ ಗಳಿಸಿದ ‘ ನಮ್ಮ ಮೆಟ್ರೋ ‘ : BMRCL ಅಧಿಕಾರಿ ಬಿ.ಎಲ್. ಯಶವಂತ ಚವ್ಹಾನ್‌ ಸ್ಪಷ್ಟನೆ

ಬೆಂಗಳೂರು : ಹೊಸ ವರ್ಷಚರಣೆಯ ಸಂಭ್ರಮದ ದಿನಗಳಲ್ಲಿ ನಮ್ಮ ಮೆಟ್ರೋದ ಆದಾಯವು ಸುಮಾರು 1.54 ಕೋಟಿ ರೂ ಗಳಿಸಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿ ಬಿ.ಎಲ್. ಯಶವಂತ ಚವ್ಹಾನ್‌ ಸಂತಸ ವ್ಯಕ್ತಪಡಿಸಿದ್ದಾರೆ.

ಜನವರಿ 1, 2023 ರ ಮಧ್ಯರಾತ್ರಿ 2 ಗಂಟೆ ವರೆಗೆ ಮೆಟ್ರೋ ರೈಲಿನ ಸಂಚಾರವನ್ನು ವಿಸ್ತರಿಸಲಾಗಿತ್ತು. ಡಿಸೆಂಬರ್ 31 ರಂದು ಬೆಂಗಳೂರಿನ ಮೆಟ್ರೋ ರೈಲುಗಳಲ್ಲಿ 6.54 ಲಕ್ಷಕ್ಕೂ ಹೆಚ್ಚು ಜನರು ಪ್ರಯಾಣ ಮಾಡಿದ್ದಾರೆ . ಆ ದಿನದ (ಡಿ.01ರ ಬೆಳಿಗ್ಗೆ 5 ಗಂಟೆಯಿಂದ ಜನವರಿ 1, 2023 ರ ಮಧ್ಯರಾತ್ರಿ 2 ಗಂಟೆ ವರೆಗೆ) ಮೆಟ್ರೋ ರೈಲುಗಳ ಆದಾಯವು ಸುಮಾರು 1.54 ಕೋಟಿ ರೂಪಾಯಿ ಆಗಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿ ಬಿ.ಎಲ್. ಯಶವಂತ ಚವ್ಹಾನ್‌ ಮಾಹಿತಿ ನೀಡಿದ್ದಾರೆ.

Leave A Reply

Your email address will not be published.