ಮೊಬೈಲ್ ನೋಡುವಾಗ ಕಣ್ಣಿನಲ್ಲಿ ನೀರು, ಕಣ್ಣು ಕೆಂಪಾಗುವಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆಯೇ? | ಹಾಗಿದ್ರೆ ಈ ಸಮಸ್ಯೆಗೆ ಕಾರಣ ಇದೇ ನೋಡಿ..
ಇಂದಿನ ಇಂಟರ್ನೆಟ್ ಯುಗದಲ್ಲಿ ಮೊಬೈಲ್ ಫೋನ್ ಬಳಸದ ಜನರಿಲ್ಲ. ಮೊಬೈಲ್ ಎಂಬುದು ಇಂದಿನ ಯುವಜನತೆಯ ಅವಿಭಾಜ್ಯ ಅಂಗವಾಗಿದೆ ಎಂದರೆ ತಪ್ಪಾಗಲಾರದು. ಯಾಕಂದ್ರೆ, ಪ್ರತಿಯೊಬ್ಬರ ಕೈಯಲ್ಲೂ ಇಂದು ಮೊಬೈಲ್ ಕಾಣಿಸಿಕೊಳ್ಳುತ್ತಿದೆ. ಮೊಬೈಲ್ ಬಳಕೆ ಎಷ್ಟು ಮಾಡುತ್ತೇವೋ ಅದರ ಬಗ್ಗೆ ಎಚ್ಚರಿಕೆಯಿಂದ ಇರೋದು ಅಷ್ಟೇ ಮುಖ್ಯ.
ಹೌದು. ಹೆಚ್ಚಿನ ಜನರು ಬೆಳಗ್ಗೆ ಏಳುವುದರಿಂದ ಹಿಡಿದು ರಾತ್ರಿ ಮಲಗುವವರೆಗೂ ಮೊಬೈಲ್ ಬಳಸುತ್ತಾರೆ. ಇದರಿಂದಾಗಿ ಕಣ್ಣಿನಲ್ಲಿ ನೀರು ಬರುವುದು, ಕಣ್ಣು ಕೆಂಪಾಗುವಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆಗೆ ಕಾರಣ ಸೆಲ್‌ಫೋನ್‌ನಿಂದ ಹೊರಬರುವ ನೀಲಿ ದೀಪ.
ಇಂತಹ ಸಮಸ್ಯೆಗೆ ಕಣ್ಣುಗಳಲ್ಲಿ ಶುಷ್ಕತೆ ಇರುವ ವ್ಯಕ್ತಿಗಳು ಹೆಚ್ಚಾಗಿ ತುತ್ತಾಗುತ್ತಾರೆ. ಕಣ್ಣಿನ ಸ್ನಾಯುಗಳು ನಮ್ಮ ದೇಹದ ಅತ್ಯಂತ ಸಕ್ರಿಯ ಸ್ನಾಯುಗಳಾಗಿವೆ. ಕಣ್ಣುಗಳು ಒಣಗದಂತೆ ತಡೆಯುವುದು ಇದರ ಕೆಲಸ. ಹಲವಾರು ಸೆಕೆಂಡುಗಳ ಕಾಲ ನಿರಂತರವಾಗಿ ಕಣ್ಣುಗಳನ್ನು ತೆರೆದುಕೊಂಡೇ ಇದ್ದಾಗ ಅದರಲ್ಲಿ ನೀರು ಬರಲು ಪ್ರಾರಂಭಿಸುತ್ತದೆ ಎಂಬುದು ನಮ್ಮ ಭಾವನೆ. ಆದರೆ ದೇಹದಲ್ಲಿ ನೀರು, ಎಣ್ಣೆ ಮತ್ತು ಲೋಳೆಯ ಸಮತೋಲನವು ಸರಿಯಾದ ರೀತಿಯಲ್ಲಿ ಇಲ್ಲದಿದ್ದಾಗ, ಕಣ್ಣುಗಳು ಒಣಗಲು ಪ್ರಾರಂಭಿಸುತ್ತವೆ, ಆದ್ದರಿಂದ ಅವುಗಳಲ್ಲಿ ನೀರು ಬರುತ್ತದೆ.
ಹಾಗೆಯೇ ಅಲರ್ಜಿ. ಮೊಬೈಲ್‌ನ ನೀಲಿ ಬೆಳಕಿನಿಂದಾಗಿ ಪ್ರತಿ ಬಾರಿಯೂ ಕಣ್ಣುಗಳಲ್ಲಿ ನೀರು ಸುರಿಯುತ್ತಿದ್ದರೆ ಇದಕ್ಕೆ ಅಲರ್ಜಿ ಕೂಡ ಕಾರಣವಿರಬಹುದು. ಇದರಿಂದಾಗಿ ಕಣ್ಣಿನಲ್ಲಿ ತುರಿಕೆ ಕೂಡ ಉಂಟಾಗುತ್ತದೆ.
ಹಾಗೂ ಕಣ್ಣಿನ ರೆಪ್ಪೆಗಳಲ್ಲಿ ಯಾವುದೇ ರೀತಿಯ ಊತ ಕಂಡುಬಂದರೆ, ಕಣ್ಣಿನಲ್ಲಿ ತುರಿಕೆ, ಕೊಳೆ ಮತ್ತು ನೀರು ಬರಲು ಪ್ರಾರಂಭಿಸುತ್ತದೆ. ಹೀಗಾಗಿ ನಮ್ಮ ಕಣ್ಣುಗಳು ಆರೋಗ್ಯವಾಗಿರಬೇಕೆಂದು ಬಯಸಿದರೆ ಕಣ್ಣಿನ ರೆಪ್ಪೆಗಳನ್ನು ಜೋಪಾನ ಮಾಡುವುದು ಬಹಳ ಮುಖ್ಯ.
ಇನ್ನೊಂದು ದೃಷ್ಟಿಯಲ್ಲಿ ನೋಡಿದರೆ ಕಣ್ಣಿನಲ್ಲಿ ನೀರು ಬರಲು ಕಾರಣ ಬ್ಯಾಕ್ಟೀರಿಯಾ ಅಥವಾ ವೈರಸ್ ಸೋಂಕು. ಈ ಕಾರಣದಿಂದಾಗಿ, ಕಣ್ಣುಗಳು ಕೆಂಪು ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತವೆ ಮತ್ತು ಅವುಗಳಲ್ಲಿ ನೀರು ಬರುತ್ತದೆ. ಹೀಗಾಗಿ ಮೊಬೈಲ್ ನಿಂದ ಹೆಚ್ಚಿನ ಕಾಲ ದೂರ ಉಳಿಯುವುದು ಉತ್ತಮ.