ಮಂಗಳೂರು : ತಣ್ಣೀರುಬಾವಿ ಬೀಚ್ ನಲ್ಲಿ ಪೊಲೀಸರ ಅತಿರೇಕದ ವರ್ತನೆ | ಬಾಲಕರ ಮೇಲೆ ಹಲ್ಲೆ, ಸಾರ್ವಜನಿಕರಿಂದ ಆಕ್ರೋಶ

ಮಂಗಳೂರು:ನಗರದ ತಣ್ಣೀರುಬಾವಿ ಬೀಚ್ ನಲ್ಲಿ ಸೇರಿದ್ದ ಯುವಕರಿಗೆ ಪೊಲೀಸರು ಲಾಠಿ ರುಚಿ ತೋರಿದ್ದು, ಪೊಲೀಸರ ಈ ವರ್ತನೆಯಿಂದ ಸ್ಥಳೀಯರು ತಿರುಗಿ ಬಿದ್ದ ಘಟನೆ ನಡೆದಿದೆ.

 

ವೀಕೆಂಡ್ ಹಾಗೂ ಹೊಸ ವರ್ಷದ ಸಂಭ್ರಮಾಚರಣೆಗೆ ಸೇರಿದ ಜನಜಂಗುಳಿಯಿಂದಾಗಿ ಬ್ಲಾಕ್ ಆದ ತಣ್ಣೀರುಬಾವಿ ಬೀಚ್ ನಲ್ಲಿ ಯುವಕರ ಮೇಲೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಈ ಘಟನೆಯಲ್ಲಿ ಆರನೇ ತರಗತಿ ಮತ್ತು ಪಿಯುಸಿ ಓದುತ್ತಿದ್ದ ವಿದ್ಯಾರ್ಥಿಗಳಿಗೂ ಪೊಲೀಸರ ಲಾಠಿ ರುಚಿ ತಟ್ಟಿದೆ.

ಪೊಲೀಸರ ಈ ದುರ್ವರ್ತನೆ ವಿರುದ್ಧ ಸ್ಥಳೀಯರು ಕೆಂಡಾಮಂಡಲರಾಗಿ ಪೊಲೀಸರ ವಿರುದ್ಧ ತಿರುಗಿಬಿದ್ದರು

Leave A Reply

Your email address will not be published.