ಹೆಂಡ್ತಿಯನ್ನು ಹೇಗೆ ಸಾಯಿಸಬೇಕೆಂದು ಗೂಗಲ್ ನಲ್ಲಿ ಕೇಳಿದ ಪತಿ | ನಂತರ ಆದದ್ದೇನು?
ದಿನಂಪ್ರತಿ ಒಂದಲ್ಲ ಒಂದು ಅಪರಾಧ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಅದರಲ್ಲಿ ಕೆಲ ಭೀಕರ ಕೃತ್ಯ ಗಳು ಎಲ್ಲರನ್ನು ಅಚ್ಚರಿಯ ಜೊತೆಗೆ ಭಯದ ವಾತಾವರಣ ಸೃಷ್ಟಿ ಮಾಡುತ್ತವೆ. ಮತ್ತೆ ಕೆಲವು ಕೊಲೆ ಪ್ರಕರಣ ಜನರಲ್ಲಿ ಕುತೂಹಲ ಮೂಡಿಸಿದರೆ ಆದರೆ ಖಾಕಿ ಪಡೆಗೆ ಕೊಲೆಗೆ ಯತ್ನಿಸಿದ ಕಾರಣದ ಜಾಡು ಹಿಡಿಯುವುದು ಸವಾಲಾಗಿ ಪರಿಣಮಿಸುತ್ತದೆ.
ಅಪರಾಧ ಪ್ರಕರಣಗಳಲ್ಲಿ ಹೆಚ್ಚಿನ ಸಂದರ್ಭಗಳಲ್ಲಿ ಸ್ನೇಹಿತರ, ಮನೆಯವರ ನೆರವು ಪಡೆಯೋದು ಕಾಮನ್.. ಆದ್ರೆ ಈಗ ಕಾಲ ಬದಲಾಗಿದೆ. ಗೂಗಲ್ ಎನ್ನುವ ಸಾಧನ ಎಷ್ಟರಮಟ್ಟಿಗೆ ನೆರವಾಗುತ್ತವೆ ಎಂಬುದಕ್ಕೆ ಈಗ ಬೆಳಕಿಗೆ ಬಂದ ಪ್ರಕರಣ ಸಾಕ್ಷಿಯಾಗಿದೆ. ವಿಕಾಸ್ ಮತ್ತು ಕೊಲೆಯಾದ ಸೋನಿಯಾ ಮದುವೆಯಾಗಿ ಹಲವಾರು ವರ್ಷಗಳಾಗಿದ್ದು, ವಿಕಾಸ್ ವಿವಾಹೇತರ ಸಂಬಂಧ ತಿಳಿದ ಕೂಡಲೇ ಪತ್ನಿ ನಡುವೆ ಮನಸ್ತಾಪ ಹೆಚ್ಚಾಗಿದ್ದು, ಸಂಬಂಧದಲ್ಲಿ ಬಿರುಕು ಮೂಡಲು ಕಾರಣವಾಗಿದೆ ಎನ್ನಲಾಗಿದೆ. ಹೀಗಾಗಿ, ವಿಕಾಸ್ ತನ್ನ ಗೆಳತಿಯೊಂದಿಗೆ ಇರಲು ಸೋನಿಯಾಳನ್ನು ಕೊಲ್ಲಲು ನಿರ್ಧರಿಸಿದ್ದಾನೆ ಎನ್ನಲಾಗಿದೆ.
ಸದ್ಯ, ಘಾಜಿಯಾಬಾದ್ ನಿವಾಸಿ ವಿಕಾಸ್ ಎಂಬ ವ್ಯಕ್ತಿಯನ್ನು ಬಂಧಿಸಿರುವ ಉತ್ತರ ಪ್ರದೇಶ ಪೊಲೀಸರು ಗೂಗಲ್ ಸಹಾಯದಿಂದ ಅವನ ಹೆಂಡತಿಯನ್ನು ಕೊಂದಿದ್ದಕ್ಕಾಗಿ ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಹೆಂಡತಿಯನ್ನು ಕೊಲೆ ಮಾಡುವ ನಿಟ್ಟಿನಲ್ಲಿ ಗೂಗಲ್ ಮೊರೆ ಹೋದ ಗಂಡನ ಕೊಲೆ ಪ್ರಕರಣ ಭೇದಿಸುವಲ್ಲಿ ಪೋಲಿಸ್ ಪಡೆ ಯಶಸ್ವಿಯಾಗಿದ್ದಾರೆ.
ವಿಕಾಸ್ ಈ ಹಿಂದೆ ತನ್ನ ಪತ್ನಿಯ ಕೊಲೆಯ ಕುರಿತಾಗಿ ನವಿರಾದ ಕಥೆ ಹೆಣೆದು ಯುಪಿ ಪೊಲೀಸರನ್ನು ಯಾಮರಿಸುವ ಪ್ರಯತ್ನ ಮಾಡಿದ್ದಾನೆ.ಈ ಸಂದರ್ಭ ಕೊಲೆಯ ಹಿಂದಿನ ಜಾಡನ್ನು ಅರಸುತ್ತಾ ಹೊರಟ ಪೋಲೀಸರಿಗೆ ಆರೋಪಿಯ ಫೋನ್ ನಲ್ಲಿ ವ್ಯಕ್ತಿಯ ವಿರುದ್ಧ ಪ್ರಮುಖ ದೋಷಾರೋಪಣೆಯ ಪುರಾವೆಗಳು ಲಭ್ಯವಾಗಿವೆ ಎನ್ನಲಾಗಿದೆ. ಆರೋಪಿ ವಿಕಾಸ್ ಗೂಗಲ್ ನಲ್ಲಿ ‘ಕೊಲೆ ಮಾಡುವುದು ಹೇಗೆ’ ಎಂದು ತನ್ನ ಮೊಬೈಲ್ ನಲ್ಲಿ ಹುಡುಕಿದ್ದ ಎನ್ನಲಾಗಿದೆ.