ಪತ್ನಿಯೊಂದಿಗೆ ಜಗಳ | ಕೋಪದಲ್ಲಿ ತನ್ನ ಮಗುವನ್ನೇ ನೆಲಕ್ಕೆಸೆದ ಪತಿ | ಮುಂದೇನಾಯ್ತು ಗೊತ್ತಾ?

ಗಂಡ ಹೆಂಡತಿ ಜಗಳ ಉಂಡು ಮಲಗೋ ತನಕ ಎಂಬ ಗಾದೆ ಮಾತೇ ಇದೆ. ಸಂಸಾರದಲ್ಲಿ ಎಂತದೇ ಸಮಸ್ಯೆಗಳು ಬಂದರೂ ಅದನ್ನು ಸಾವಧಾನವಾಗಿ ಕೂತು ಬಗೆ ಹರಿಸಿಕೊಂಡರೆ ಜೀವನ ಸುಂದರವಾಗಿರುತ್ತದೆ. ಆದರೆ ಇಲ್ಲೊಬ್ಬ ಭೂಪ ತನ್ನ ಹೆಂಡತಿಯೊಂದಿಗೆ ಜಗಳವಾಡಿಕೊಂಡು ಆಗಷ್ಟೇ ಹುಟ್ಟಿದ ತನ್ನ ಮಗುವನ್ನು ನೆಲಕ್ಕೆ ಎಸೆದ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.

 

ಮಹಾರಾಷ್ಟ್ರ ದ ಅಮರಾವತಿ ಮೂಲದ ವ್ಯಕ್ತಿ 2020ರಲ್ಲಿ ಮದುವೆಯಾಗಿದ್ದ. ಮದುವೆ ಆದಾಗಿನಿಂದಲೂ ತನ್ನ ಪತ್ನಿಯ ನಡತೆ ಬಗ್ಗೆ, ಚಾರಿತ್ರ್ಯದ ಮೇಲೆ ಅನುಮಾನವನ್ನು ವ್ಯಕ್ತಪಡಿಸುತ್ತ ಯಾವಾಗಲೂ ಹಿಂಸೆ ನೀಡುತ್ತಿದ್ದ. ಆದರೆ ಡಿ. 30ರಂದು ಆಕೆ ಮಹಾರಾಷ್ಟ್ರದ ನಾಗ್ಪುರ ನಗರದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಮಗುವಿಗೆ ಜನ್ಮ ನೀಡಿದ್ದಳು.

ಹೆಂಡತಿಗೆ ಹೆರಿಗೆಯಾದ ಹಿನ್ನೆಲೆಯಲ್ಲಿ ಆಕೆಯನ್ನು ಮತ್ತು ಮಗುವನ್ನು ನೋಡಲು ಈ ಪತಿರಾಯ ಆಸ್ಪತ್ರೆಗೆ ಬಂದಿದ್ದ. ಮಾತಿನ ನಡುವೆ ಅಲ್ಲಿಯೂ ಹೆಂಡತಿಯೊಂದಿಗೆ ಜಗಳವಾಡಿದ್ದಾನೆ. ನಂತರ ಕೋಪದ ಭರದಲ್ಲಿ ಕೇವಲ ಎರಡು ದಿನಗಳ ಹಿಂದೆ ಹುಟ್ಟಿದ ತನ್ನ ನವಜಾತ ಶಿಶುವನ್ನು ಎತ್ತಿ ನೆಲಕ್ಕೆ ಎಸೆದಿದ್ದಾನೆ.
ಸದ್ಯ ಮಗುವಿಗೆ ಯಾವುದೇ ಸಮಸ್ಯೆ ಆಗದೆ ಇದ್ದು, ಆರೋಗ್ಯದಲ್ಲಿ ಯಾವುದೇ ತೊಂದರೆಗಳಿಲ್ಲ. ಮಗು ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.