ಆಧಾರ್ ಕಾರ್ಡ್ ಅಪ್ಡೇಟ್ ಮಾಡಿ, ಇಲ್ಲದಿದ್ದರೆ ಈ ಪ್ರಯೋಜನ ಸಿಗಲ್ಲ | ಕೇಂದ್ರದಿಂದ ಇನ್ನೊಂದು ಮಾಹಿತಿ ಬಹಿರಂಗ

ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ(UIDAI) ಆಧಾರ್‌ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಭಾರತ ಸರ್ಕಾರದಿಂದ ಸ್ಥಾಪಿಸಲ್ಪಟ್ಟ ಶಾಸನ ಬದ್ಧ ಪ್ರಾಧಿಕಾರವಾಗಿದೆ.

 

ಭಾರತದ ನಾಗರಿಕರಿಗೆ ಆಧಾರ್‌ ಎನ್ನುವ ವಿಶೇಷ ಗುರುತಿನ ಸಂಖ್ಯೆ(UDI) ನೀಡುವ ಉದ್ದೇಶದಿಂದ ಯುಐಡಿಎಐ ಇದನ್ನು ಸ್ಥಾಪಿಸಿದ್ದು, ಹೀಗಾಗಿ ಯುಐಡಿ ಮೂಲಕ ಅಸಲಿ ಹಾಗೂ ನಕಲಿ ಗುರುತನ್ನು ಸುಲಭವಾಗಿ ಪರಿಶೀಲನೆ ಮಾಡಬಹುದಾಗಿದೆ.ಇದೀಗ,ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ಜನರಿಗೆ ತಮ್ಮ ಆಧಾರ್ ಕಾರ್ಡ್ ಹಾಗೂ ಅದರ ಪ್ರತಿಗಳನ್ನು ಎಲ್ಲಿಯೂ ಬಿಟ್ಟು ಬರದಂತೆ ಸೂಚನೆ ನೀಡಿದೆ.

ಆಧಾರ್ 12-ಅಂಕಿಯ ವಿಶಿಷ್ಟ ಸಂಖ್ಯೆಯಾಗಿದ್ದು, ಇದನ್ನು ಗುರುತಿನ ಉದ್ದೇಶಗಳಿಗಾಗಿ ಭಾರತ ಸರ್ಕಾರವು ಹೊರತಂದಿದ್ದು ತಿಳಿದಿರುವ ವಿಚಾರವೇ!!.. ಆಧಾರ್ ಕಾರ್ಡ್ ಹೊಂದಿರುವವರಿಗೆ ಮುಖ್ಯ ಮಾಹಿತಿ ಇದ್ದು, UIDAI ನಿಂದ ವಿಶೇಷ ನವೀಕರಣ ಮಾಡಲು ಮುಂದಾಗಿದ್ದು, ಇದು ದೇಶಾದ್ಯಂತ ಆಧಾರ್ ಕಾರ್ಡ್ ಹೊಂದಿರುವವರ ಮೇಲೆ ಪರಿಣಾಮ ಬೀರುವ ಸಾದ್ಯತೆ ದಟ್ಟವಾಗಿದೆ.

ಯಾವಾಗಲೂ ನಿಮ್ಮ ದಾಖಲೆಗಳನ್ನು ಅಪ್ಡೇಟ್ ಮಾಡುತ್ತಿರಬೇಕು ಎಂದು UIDAI ತನ್ನ ಅಧಿಕೃತ ಟ್ವೀಟ್‌ನಲ್ಲಿ ಹೇಳಿದ್ದು, ಯಾವುದೇ ಸರ್ಕಾರಿ ಮತ್ತು ಸರ್ಕಾರೇತರ ಯೋಜನೆಗಳ ಲಾಭವನ್ನು ಪಡೆಯಬೇಕಾದರೆ, ಆಧಾರ್ ಅನ್ನು ಅಪ್ಡೇಟ್ ಮಾಡುವುದು ಅವಶ್ಯಕವಾಗಿದೆ.
ಆನ್‌ಲೈನ್‌ನಲ್ಲಿ ಆಧಾರ್ ಅಪ್‌ಡೇಟ್ ಮಾಡುವುದಾದರೆ, ಇದಕ್ಕಾಗಿ 25 ರೂ. ವೆಚ್ಚ ತಗಲಬಹುದು. ಇಲ್ಲವೇ ಆಫ್‌ಲೈನ್‌ನಲ್ಲಿಯೇ ಅಪ್‌ಡೇಟ್ ಮಾಡುವುದಾದರೆ ಇದಕ್ಕಾಗಿ ಕೇವಲ 50 ರೂಪಾಯಿಯನ್ನು ಮಾತ್ರ ಖರ್ಚು ಮಾಡಬೇಕಾಗಬಹುದು. ಸಾಮಾಜಿಕ ಮಾಧ್ಯಮಗಳು ಮತ್ತು ಇತರ ಸಾರ್ವಜನಿಕ ವೇದಿಕೆಗಳಲ್ಲಿ ಆಧಾರ್ ಸಂಖ್ಯೆಯನ್ನು ಪ್ರದರ್ಶಿಸಬಾರದು ಜೊತೆಗೆ ಹಂಚಿಕೊಳ್ಳಬಾರದು.

ಎಂ-ಆಧಾರ್ ಪಿನ್ ಸಂಖ್ಯೆಯನ್ನು ಯಾರಿಗೂ ನೀಡಬಾರದು ಜೊತೆಗೆ ಬಹಿರಂಗಪಡಿಸಬಾರದು. ಕಳೆದ ಆರು ಪ್ರತಿ ಬಾರಿ ಆಧಾರ್ ದೃಢೀಕರಣವನ್ನು ಮಾಡಿದಾಗ, ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರವು ಇ-ಮೇಲ್ ಮೂಲಕ ಮಾಹಿತಿ ನೀಡಿದ್ದು, ಹೀಗಾಗಿ ಪ್ರತಿಯೊಬ್ಬ ಆಧಾರ್ ಕಾರ್ಡ್ ಬಳಕೆದಾರರು ತಮ್ಮ ಇಮೇಲ್ ಅನ್ನು ಆಧಾರ್ ನೊಂದಿಗೆ ಲಿಂಕ್ ಮಾಡಬೇಕೆಂದು ಹೇಳಿದೆ. ಒಟಿಪಿ ಆಧಾರಿತ ದೃಢೀಕರಣದ ಮೂಲಕ ಅನೇಕ ಸೇವೆಗಳನ್ನು ಪಡೆಯಬಹುದಾಗಿರುವುದರಿಂದ, ಮೊಬೈಲ್ ಸಂಖ್ಯೆಯನ್ನು ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಮಾಡಬೇಕು ಎಂದು ಸೂಚಿಸಲಾಗಿದೆ.

ಆಧಾರ್‌ಗೆ ಸಂಬಂಧಿಸಿದ ಯಾವುದೇ ದೂರುಗಳಿದ್ದಲ್ಲಿ, ಟೋಲ್ ಫ್ರೀ ಸಂಖ್ಯೆ 1947 ಅನ್ನು ಸಂಪರ್ಕಿಸಬಹುದು. ಈ ಸಂಖ್ಯೆಯನ್ನು ಬಳಸಿ 12 ಭಾಷೆಗಳಲ್ಲಿಯೂ ಮಾಹಿತಿ ಪಡೆದುಕೊಳ್ಳಬಹುದು. ಸ್ವಯಂ ಸೇವಾ IVRS ಮತ್ತು ನಿವಾಸ ಸಹಾಯ ಕಾರ್ಯನಿರ್ವಾಹಕ-ಆಧಾರಿತ ಸಹಾಯವನ್ನು ಕೂಡಾ ಈ ನಂಬರ್ ಮೂಲಕ ಪಡೆದುಕೊಳ್ಳಬಹುದು. ಅಧಿಕೃತ ವೆಬ್‌ಸೈಟ್ ಮೂಲಕವೂ ದೂರು ಸಲ್ಲಿಸಬಹುದು. ಇದಕ್ಕಾಗಿ ಅಧಿಕೃತ ವೆಬ್‌ಸೈಟ್ https://myaadhaar.uidai.gov.in/ ಅನ್ನು ಕೂಡ ಸಂಪರ್ಕಿಸಬಹುದಾಗಿದ್ದು, ಇಲ್ಲಿ ನೀಡಿರುವ ಆಪ್ಶನ್ ಗಳನ್ನು ಆಯ್ಕೆ ಮಾಡುವ ಮೂಲಕ ಅಪ್ಡೇಟ್ ಮಾಡಿಕೊಳ್ಳಬಹುದಾಗಿದೆ.

ಆಧಾರ್ ಕಾರ್ಡ್ ಅನ್ನು ಬಳಕೆ ಮಾಡುವಾಗ ಹೆದರುವ ಅಗತ್ಯವಿಲ್ಲ. ಆದರೆ ಆಧಾರ್ ಬಳಕೆಯ ಮೇಲೆ ನಿಗಾ ವಹಿಸುವುದು ಒಳ್ಳೆಯದು ಎಂದು ಶುಕ್ರವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಎಚ್ಚರಿಕೆ ನೀಡಲಾಗಿದೆ. ಇತರರೊಂದಿಗೆ ಆಧಾರ್ ಸಂಖ್ಯೆಯನ್ನು ಹಂಚಿಕೊಳ್ಳುವಾಗ ಜಾಗ್ರತೆ ವಹಿಸಬೇಕು. ಇದರ ಜೊತೆಗೆ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ಒಟಿಪಿಯನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಎಂದು ಮಾಹಿತಿ ನೀಡಿದೆ.

Leave A Reply

Your email address will not be published.