Rishabh Pant : ರಿಷಬ್ ಕಾರು ಓಡಿಸುವಾಗ ಕುಡಿದಿದ್ರಾ? ಬಂತು ನೋಡಿ ಬಿಗ್ ಅಪ್ಡೇಟ್!
ಭಾರತದ ಸ್ಟಾರ್ ಕ್ರಿಕೆಟಿಗ ರಿಷಬ್ ಪಂತ್ ಅವರ ಕಾರು ಮುಂಜಾನೆ ದೆಹಲಿ- ಡೆಹ್ರಾಡೂನ್ ಹೆದ್ದಾರಿಯಲ್ಲಿ ಐಷಾರಾಮಿ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಬೆಂಕಿಗೆ ಸಂಪೂರ್ಣ ಭಸ್ಮವಾಗಿದೆ. ಆದರೆ ಅದೃಷ್ಠವಶಾತ್ ಪಂತ್ ಜೀವಾಪಾಯದಿಂದ ಬದುಕುಳಿದದ್ದಾರೆ.
ಈ ನಡುವೆ ಸ್ಟಾರ್ ಕ್ರಿಕೆಟಿಗನ ಅಪಘಾತದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುಳ್ಳು ಸುದ್ದಿಗಳು ಹರಿದಾಡುತ್ತಿದೆ. ಅದರಲ್ಲಿಯೂ ಪ್ರಮುಖವಾಗಿ ಪಂತ್ ಕಾರು ಅಪಘಾತವಾಗಲು ಅವರು ಆ ವೇಳೆ ಡ್ರಿಂಕ್ಸ್ ಮಾಡಿದ್ದರು ಎಂಬ ಊಹಾಪೋಹಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿಬರುತ್ತಿದೆ. ಇದೀಗ ಹರಿದ್ವಾರದ ಎಸ್ಎಸ್ಪಿ ಅಜಯ್ ಸಿಂಗ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಕ್ರಿಕೆಟಿಗ ಪಂತ್ ಕುಡಿದು ಮಿತಿಮೀರಿದ ವೇಗದ ಬಗ್ಗೆ ಕೆಲವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಆದರೆ ಅವರು ಕಾರು ಚಲಾಯಿಸುವಾಗ ಯಾವುದೇ ರೀತಿಯಲ್ಲಿಯೂ ಕುಡಿದು ಕಾರನ್ನು ಚಲಾಯಿಸುತ್ತಿರಲಿಲ್ಲ ಎಂದು ಹರಿದ್ವಾರದ ಎಸ್ಎಸ್ಪಿ ಅಜಯ್ ಸಿಂಗ್ ಹೇಳಿದ್ದಾರೆ. ಅಲ್ಲದೇ ವಾಹನದ ವೇಗವು ಸಾಮಾನ್ಯವಾಗಿಯೇ ಇತ್ತು ಹಾಗೂ ಪಂತ್ ಮದ್ಯಪಾನದ ಸ್ಥಿತಿಯಲ್ಲಿ ಇರಲಿಲ್ಲ ಎಂದಿದ್ದಾರೆ.
ಇದಕ್ಕೂ ಒಂದು ದಿನ ಮೊದಲು, ದೆಹಲಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯ (ಡಿಡಿಸಿಎ) ಅಧಿಕಾರಿಯೊಬ್ಬರು, ಕ್ರಿಕೆಟಿಗ ಪಂತ್ ಅವರು ಹೆದ್ದಾರಿಯಲ್ಲಿನ ಗುಂಡಿಯನ್ನು ತಪ್ಪಿಸಲು ಪ್ರಯತ್ನಿಸುವಾಗ ಅಪಘಾತಕ್ಕೀಡಾಗಿದ್ದಾರೆ ಎಂದು ಹೇಳಿದ್ದರು. ಡಿಡಿಸಿಎ ನಿರ್ದೇಶಕ ಶ್ಯಾಮ್ ಶರ್ಮಾ ಸೋಂಕಿನ ಅಪಾಯವನ್ನು ಉಲ್ಲೇಖಿಸಿ ಪಂತ್ ಅವರನ್ನು ಯಾರೂ ಸಹ ಭೇಟಿ ಮಾಡದಂತೆ ಜನರಿಗೆ ಸಲಹೆಯನ್ನು ನೀಡಿದ್ದಾರೆ.
ಶರ್ಮಾ ಈ ಕುರಿತು ಮಾತನಾಡಿದ್ದು, ‘ಪಂತ್ ಅವರನ್ನು ಭೇಟಿ ಮಾಡಲು ಹೋಗುವವರು ಸೋಂಕಿನ ಸಾಧ್ಯತೆಯಿರುವುದರಿಂದ ಅದನ್ನು ತಪ್ಪಿಸಬೇಕು‘.ಅಲ್ಲದೇ ಪಂತ್ ಅವರನ್ನು ಭೇಟಿ ಮಾಡಲು ಯಾವುದೇ ವಿಐಪಿ ಗಳಿಗೂ ಅವಕಾಶ ನೀಡಲಾಗುತ್ತಿಲ್ಲ. ಅವರನ್ನು ಭೇಟಿ ಮಾಡಲು ಬರುವ ಜನರಿಂದ ಪಂತ್ ಸೋಂಕಿಗೆ ಒಳಗಾಗಬಹುದು ಎಂಬ ಕಾರಣದಿಂದ ಅದನ್ನು ತಪ್ಪಿಸಬೇಕು. ಹಾಗೂ ಈ ವೇಳೆ ಅವರ ಆರೋಗ್ಯಕ್ಕೆ ಮೊದಲ ಆಧ್ಯತೆ ನೀಡಬೇಕು ಎಂದಿದ್ದಾರೆ.
ಅಪಘಾತದ ನಂತರ ಪಂತ್ ಅವರ ಕಾರಿಗೆ ಬೆಂಕಿ ಹೊತ್ತಿಕೊಂಡಿತು ಆದರೆ ಬೆಂಕಿ ಹೊತ್ತಿಕೊಳ್ಳುವ ಮೊದಲು ಪಂತ್ ಅವರು ಕಾರಿನಿಂದ ಹೊರಬಂದಿದ್ದರ ಕಾರಣ ಅವರಿಗೆ ಯಾವುದೇ ದೊಡ್ಡಮಟ್ಟದ ಅಪಾಯವಾಗಲಿಲ್ಲ. ಆದರೆ ಕ್ರಿಕೆಟಿಗನಿಗೆ ಅಸ್ಥಿರಜ್ಜು ಹರಿದಿದೆ. ಈ ಗಾಯ ಗುಣವಾಗಲು ಕನಿಷ್ಠ ಮೂರರಿಂದ ಆರು ತಿಂಗಳು ಬೇಕಾಗುತ್ತದೆ ಮತ್ತು ಅದು ತೀವ್ರವಾಗಿದ್ದರೆ ಅವರು ಹೆಚ್ಚು ಸಮಯ ತೆಗೆದುಕೊಳ್ಳಬಹುದು ಎಂದು ತಜ್ಞರು ತಿಳಿಸಿದ್ದಾರೆ.
ಶುಕ್ರವಾರ ಮುಂಜಾನೆ ಕ್ರಿಕೆಟಿಗ ರಿಷಬ್ ಪಂತ್ ಅವರು ಚಾಲನೆ ಮಾಡುವಾಗ ನಿದ್ರಿಸಿದ ಕಾರಣ ಅಪಘಾತಕ್ಕೀಡಾಗಿದ್ದಾರೆ ಎಂದು ಉತ್ತರಾಖಂಡ ಪೊಲೀಸರು ತಿಳಿಸಿದ್ದಾರೆ. ರಿಷಬ್ ಗೆ ಚಿಕಿತ್ಸೆ ನೀಡುತ್ತಿರುವ ವೈದ್ಯಕೀಯ ತಂಡದ ಸದಸ್ಯರೊಬ್ಬರು ನೀಡಿರುವ ಮಾಹಿತಿ ಪ್ರಕಾರ, ‘ಅವರ ಸ್ಥಿತಿಯನ್ನು ಮೂಳೆಚಿಕಿತ್ಸೆ ವಿಭಾಗದ ಡಾ. ಗೌರವ್ ಗುಪ್ತಾ ಅವರು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಪಂತ್ ಸ್ಥಿರವಾಗಿದ್ದಾರೆ, ಯಾವುದೇ ಪ್ರಾಣಾಪಾಯಕಾರಿ ಗಾಯದಿಂದ ಬಳಲುತ್ತಿಲ್ಲ. ಅವನ ತಾಯಿ ಅವನೊಂದಿಗೆ ಆಸ್ಪತ್ರೆಯಲ್ಲಿದ್ದಾರೆ‘ ಎಂದು ಹೇಳಿದ್ದಾರೆ.