ಸ್ವೆಟರ್ ಹಾಕಿ ಮಲಗೋದು ಆರೋಗ್ಯಕ್ಕೆ ತೊಂದರೆಯೇ? ಇದು ಎಂತಹ ಸಮಸ್ಯೆಗಳನ್ನು ತಂದೊಡ್ಡುತ್ತದೆ ನೀವೇ ನೋಡಿ.

ಚಳಿಗಾಲದ ಆಗಮನ ಆಯ್ತು ಎಂದರೆ ಸಾಕು ಜನರು ಬೆಚ್ಚಗಿನ ಉಡುಪುಗಳ ಒಳಗೆ ಮೈ ತೂರಿಸಲು ಮುಂದಾಗುತ್ತಾರೆ. ಹೆಚ್ಚಾಗಿ ಎಲ್ಲರೂ ಸ್ವೆಟರನ್ನೇ ಧರಿಸುತ್ತಾರೆ. ಬೆಳಗಿನಿಂದ ಸಂಜೆವರೆಗೂ ಶೀತ, ತಂಡಿ ಗಾಳಿಯಿಂದ ಇದು ನಮ್ಮನ್ನು ರಕ್ಷಿಸಿ ಬೆಚ್ಚಗೆ ಮಾಡುತ್ತದೆ. ಆದರೆ ಕೆಲವರು ಮಲಗುವಾಗಲೂ ಕೂಡ ಸ್ವೆಟರನ್ನು ಧರಿಸೇ ಮಲಗುತ್ತಾರೆ. ಇದು ನಿಜವಾಗಿಯೂ ನಮಗೆ ಹಾನಿಕಾರಕವಾದ್ದು. ಹೀಗೆ ಮಾಡುವುದರಿಂದ ನಮಗೆ ಯಾವೆಲ್ಲಾ ದುಷ್ಪರಿಣಾಮಗಳು ಉಂಟಾಗುತ್ತದೆ ಎಂಬುದನ್ನು ಈ ಸ್ಟೋರಿ ಓದಿ ತಿಳಿದುಕೊಳ್ಳಿ.

 

ಕೆಲವುರು ಇತರರಿಗಿಂತ ಹೆಚ್ಚು ಶೀತವನ್ನು, ಚಳಿಯನ್ನು ಅನುಭವಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಕೆಲವರು ರಾತ್ರಿ ಸ್ವೆಟರ್ ಹಾಕಿಕೊಂಡು ಮಲಗುತ್ತಾರೆ. ಆದರೆ ರಾತ್ರಿ ಸ್ವೆಟರ್ ಧರಿಸುವುದರಿಂದ ದೇಹದಲ್ಲಿ ತುರಿಕೆ ಉಂಟಾಗುತ್ತದೆ ಎಂದು ಹೆಚ್ಚಿನವರಿಗೆ ಗೊತ್ತಿಲ್ಲ. ದಪ್ಪ ಬೆಚ್ಚಗಿನ ಬಟ್ಟೆಗಳು ಫೈಬರ್ನಿಂದ ಮಾಡಲ್ಪಟ್ಟಿರುತ್ತದೆ. ಇದರಿಂದಾಗಿ ದೇಹದ ರಕ್ತ ಪರಿಚಲನೆಯು ನಿಲ್ಲುತ್ತದೆ. ಇದು ನಮ್ಮ ಚರ್ಮದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಜನರು ರಾತ್ರಿ ಹೊದಿಕೆಯೊಂದಿಗೆ ಮಲಗುತ್ತಾರೆ. ಅದರ ಮೇಲೂ ಉಣ್ಣೆಯ ಬಟ್ಟೆಗಳನ್ನು ಧರಿಸಿ ನೀವು ಮಲಗುತ್ತಿದ್ದರೆ ರಾತ್ರಿಯಲ್ಲಿ ನಿಮಖೆ ಉಸಿರುಕಟ್ಟುವಿಕೆ ಆಗಬಹುದು. ಏನೋ ಒಂದು ತರಹದ ಹಿಂಸೆ ಅನಿಸಬಹುದು

ರಾತ್ರಿ ವೇಳೆ ಸ್ವೆಟರ್ ಧರಿಸುವುದರಿಂದ ಚರ್ಮದಲ್ಲಿ ಶುಷ್ಕತೆ ಉಂಟಾಗುತ್ತದೆ. ಏಕೆಂದರೆ ಅನೇಕ ಜನರಿಗೆ ಉಣ್ಣೆಯ ಅಲರ್ಜಿ ಸಮಸ್ಯೆಗಳಿವೆ ಮತ್ತು ನಿಮ್ಮ ಚರ್ಮವು ಉಣ್ಣೆಯ ಬಟ್ಟೆಗಳನ್ನು ದೀರ್ಘಕಾಲದವರೆಗೆ ಸಹಿಸುವುದಿಲ್ಲ. ಮಧುಮೇಹ ಹೊಂದಿರುವ ಜನರು, ವಿಶೇಷವಾಗಿ ಅವರು ಬೆಚ್ಚಗಿನ ಬಟ್ಟೆಗಳನ್ನು ಧರಿಸುವುದರಲ್ಲಿ ಸಮಸ್ಯೆಗಳನ್ನು ಹೊಂದಿರಬಹುದು, ಉದಾಹರಣೆಗೆ ರಾತ್ರಿಯಲ್ಲಿ ತಲೆತಿರುಗುವಿಕೆ ಅಥವಾ ಹೆದರಿಕೆ ಉಂಟಾಗಬಹುದು. ಅದಕ್ಕಾಗಿಯೇ ಬೆಳಿಗ್ಗೆಯಿಂದ ಸಂಜೆಯವರೆಗೆ ಮಾತ್ರ ಬೆಚ್ಚಗಿನ ಬಟ್ಟೆಗಳನ್ನು ಧರಿಸಲು ಪ್ರಯತ್ನಿಸಿ, ರಾತ್ರಿಯಲ್ಲಿ ಮೃದುವಾದ ಮತ್ತು ಹಗುರವಾದ ಬಟ್ಟೆಗಳನ್ನು ಮಾತ್ರ ಆರಿಸಿ.

ಉಣ್ಣೆಯ ಬಟ್ಟೆಗಳನ್ನು ಧರಿಸಿ ಮಲಗುವುದರಿಂದ ನಿಮ್ಮ ದೇಹದ ಉಷ್ಣತೆ ಹೊರ ಹೋಗುವುದಿಲ್ಲ. ಹಾಗಾಗಿ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರು ರಾತ್ರಿಯಲ್ಲಿ ಸ್ವೆಟರ್ ಧರಿಸುವುದನ್ನು ಸಂಪೂರ್ಣವಾಗಿ ತ್ಯಜಿಸಬೇಕು. ನೀವು ರಾತ್ರಿಯಲ್ಲಿ ತುಂಬಾ ಚಳಿಯನ್ನು ಅನುಭವಿಸುತ್ತಿದ್ದರೆ ಬೆಚ್ಚಗಿನ ಬಟ್ಟೆಗಳನ್ನು ಧರಿಸುವ ಬದಲು ದಪ್ಪ ಹೊದಿಕೆಯನ್ನು ಆಯ್ಕೆ ಮಾಡಬಹುದು. ಇದರಿಂದ ನೀವು ಚಳಿಯಿಂದ ಪಾರಾಗಬಹುದು ಮತ್ತು ದೇಹಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಬೆಚ್ಚಗಿನ ಸ್ವೆಟರ್ ಧರಿಸುವುದು ಮಗುವಿನಿಂದ ವೃದ್ಧರವರೆಗೆ ಎಲ್ಲರಿಗೂ ಹಾನಿಕಾರಕವಾಗಿದೆ.

Leave A Reply

Your email address will not be published.