ಡಿಸೆಂಬರ್ 31ರ ರಾತ್ರಿ ನಂದಿಬೆಟ್ಟಕ್ಕೆ ನೋ ಎಂಟ್ರಿ! ಪಾರ್ಟಿ ಪ್ರಿಯರಿಗೆ ನಿರಾಶೆ ಮಾಡಿದ ಜಿಲ್ಲಾಡಳಿತ
ಹೊಸ ವರ್ಷ ಬಂದಾಕ್ಷಣ ನ್ಯೂ ಇಯರ್ ಸೆಲೆಬ್ರೇಷನ್ ಹೆಸರಲ್ಲಿ ಸಂಭ್ರಮ, ಮೋಜು, ಮಸ್ತಿ ಅಂತ ಬಹುತೇಕರು ಟ್ರಿಪ್ ಹೋಗೋದು, ಪಾರ್ಟಿ ಮಾಡೋದು, ಜಾಲಿ ರೇಡ್ ಹೋಗುವಂತಹ ಪ್ಲಾನ್ ಮಾಡಿಕೊಂಡಿರುತ್ತಾರೆ. ಈ ವರುಷವೂ ಕೂಡ 2023 ರನ್ನು ಸಂಭ್ರಮದಿಂದ ಬರಮಾಡಿಕೊಳ್ಳು ಎಲ್ಲರೂ ಕಾತುರದಿಂದ ಕಾಯ್ತಾ ಇದ್ದಾರೆ. ನಮ್ಮ ಕರ್ನಾಟಕದಲ್ಲಂತೂ ಮೋಜು ಮಸ್ತಿಗಳಿಗೆ ಸಾಕಷ್ಟು ಪ್ಲೇಸ್ ಇದ್ದಾವೆ. ಆದರೆ ಈ ಸಲದ ಎಂಜಾಯ್ಮೆಂಟನ್ನು ನೀವು ನಂದಿಬೆಟ್ಟದಲ್ಲಿ (Nandi hills) ಮಾಡೋಣ ಅಂತ ಪ್ಲಾನ್ ಮಾಡಿಕೊಂಡಿದ್ದರೆ ನಿಮ್ಮ ಪ್ಲಾನ್ ಚೇಂಜ್ ಮಾಡಿಕೊಳ್ಳಿ.
ಹೌದು ಈ ಭಾರಿಯ ಹೊಸ ವರುಷದ ಸಂಭ್ರಮಕ್ಕೆ ಜಿಲ್ಲಾಡಳಿತವು ನಂದಿಬೆಟ್ಟಕ್ಕೆ ನೋ ಎಂಟ್ರಿ ಎಂದು ಆದೇಶ ಹೊರಡಿಸಿದೆ. ಡಿಸೆಂಬರ್ 31ರ ಸಂಜೆ 6 ಗಂಟೆಯಿಂದ 2023 ಜನವರಿ 1ರ ಬೆಳಗ್ಗೆ 6 ಗಂಟೆವರೆಗೂ ನಂದಿಗಿರಿಧಾಮಕ್ಕೆ ಸಾರ್ವಜನಿಕ ಪ್ರವೇಶ ನಿರ್ಬಂಧಿಸಲಾಗಿದೆ. ಮೋಜು ಮಸ್ತಿ ಪಾರ್ಟಿ ಸೆಲೆಬ್ರೇಷನ್ ಹೆಸರಲ್ಲಿ ಅಪಘಾತ ಅಥವಾ ಏನಾದರೂ ಅನಾಹುತಗಳು ಆಗಬಹುದು ಎಂದು ಈ ನಿರ್ಧಾರ ಕೈಗೊಳ್ಳಲಾಗಿದೆ. ಇದರ ಸಲುವಾಗಿ ಅತಿಥಿ ಗೃಹಗಳಿಗೆ ಪ್ರವೇಶ ನಿರ್ಬಂಧ ಹೇರಲಾಗಿದೆ. ಡಿ.31ರ ರಾತ್ರಿ ಬೆಟ್ಟದ ಮೇಲೆ ಯಾರೂ ಉಳಿದುಕೊಳ್ಳುವಂತಿಲ್ಲ. ರಾತ್ರಿ ವೇಳೆ ಬೆಟ್ಟದ ಮೇಲೆ ಸಂಚಾರ ಒಳ್ಳೆಯದಲ್ಲ ಎಂಬುದು ಇದರ ಉದ್ದೇಶ. ನಂದಿಗಿರಿಧಾಮಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧ ಮಾಡಿದ ಕಾರಣ ಸಾರ್ವಜನಿಕರು ಗಿರಿಧಾಮಕ್ಕೆ ಹೊಂದಿಕೊಂಡಿರುವ ಸ್ಕಂದಗಿರಿ ಬೆಟ್ಟ, ಚನ್ನಗಿರಿ ಬೆಟ್ಟ, ಆವುಲಬೆಟ್ಟ, ಕೈವಾರ ಬೆಟ್ಟಕ್ಕೂ ಭೇಟಿ ನೀಡುವ ಸಾಧ್ಯತೆ ಹಿನ್ನೆಲೆ ಈ ಬೆಟ್ಟಗಳಿಗೂ ನಿರ್ಬಂಧ ಹೇರಲಾಗಿದೆ.
ನಂದಿ ಬೆಟ್ಚದ ಸುತ್ತಮುತ್ತ ಇರುವ ಹೋಟೆಲ್, ರೆಸಾರ್ಟ್, ಹೋಮ್‍ಸ್ಟೇ ಮಾಲೀಕರ ಜೊತೆ ಸಭೆ ನಡೆಸಿರುವ ಪೊಲೀಸರು, ಲಾಭದ ಆಸೆಗೆ ಬಿದ್ದು ಸರ್ಕಾರದ ನೀತಿ ನಿಯಮಗಳನ್ನು ಉಲ್ಲಂಘನೆ ಮಾಡಿದ್ರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವುದಾಗಿ ಚಿಕ್ಕಬಳ್ಳಾಪುರ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಜನವರಿ 1 ರ ಬೆಳಗ್ಗೆ 6 ಗಂಟೆಯಿಂದ ಎಂದಿನಂತೆ ನಂದಿಬೆಟ್ಟಕ್ಕೆ ಹೋಗಲು ಅವಕಾಶವಿದ್ದು ಎಂದಿನಂತೆ ಪ್ರವಾಸಿಗರು ಬಂದು ಹೋಗಬಹುದಾಗಿದೆ. ಎಂದು ಜಿಲ್ಲಾಆಡಳಿತ ತಿಳಿಸಿದೆ.
ನಂದಿಬೆಟ್ಟವು ಕರ್ನಾಟಕದ ಪ್ರಮುಖ ಪ್ರವಾಸಿತಾಣಗಳಲ್ಲಿ ಒಂದಾಗಿದ್ದು ಅನೇಕ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ. ಸಮುದ್ರ ಮಟ್ಟದಿಂದ 1,600 ಮೀಟರ್ ಎತ್ತರವಿರುವ ಈ ಗಿರಿಧಾಮವು ಮೋಜು ಮಸ್ತಿಗಳಿಗೆ, ಮನಸ್ಸನ್ನು ಹಗುರವಾಗಿಸಿಕೊಳ್ಳಲು ಹೇಳಿ ಮಾಡಿಸಿದ ಸ್ಥಳವಾಗಿದೆ. ಈ ಭಾರಿಯೂ ಅನೇಕರು ಅಲ್ಲಿ ಹೊಸ ವರುಷವನ್ನು ಸಂತೋಷದಿಂದ ಬರಮಾಡಿಕೊಳ್ಳಲು ತಯಾರಿ ನಡೆಸಿದ್ದರು. ಆದರೆ ಜಿಲ್ಲಾಡಳಿಸಿ ಪಾರ್ಟಿ ಪ್ರಿಯರಿಗೆ ನಿರಾಶೆ ಮಾಡಿದೆ.