ಗಮನಿಸಿ ಉದ್ಯೋಗಿಗಳೇ | KSRTC ಯಿಂದ ಬಂತು ಬಿಗ್ ಬಿಗ್ ಅಪ್ಡೇಟ್ !
ರಸ್ತೆ ಸಾರಿಗೆ ನಿಗಮದ ಸಿಬ್ಬಂದಿಗೆ ಸಿಹಿ ಸುದ್ದಿಯೊಂದು ಹೊರಬಿದ್ದಿದೆ. ರಾಜ್ಯದಲ್ಲಿನ ಸಾರ್ವಜನಿಕರಿಗೆ ಉತ್ತಮ ಹಾಗೂ ಗುಣಮಟ್ಟದ ಸಾರಿಗೆ ಸೌಲಭ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಶ್ರಮಿಸುವ ಸಾರಿಗೆ ನಿಗಮಗಳ ನೌಕರರಿಗೆ ಸಿಹಿ ಸುದ್ದಿ ನೀಡಿತ್ತು. ರಸ್ತೆ ಸಾರಿಗೆ ನಿಗಮ ಪ್ರಪ್ರಥಮ ಬಾರಿಗೆ ಹೊಸ ಯೋಜನೆ ರೂಪಿಸಿದ್ದು, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮವು ತಮ್ಮ ಸಿಬ್ಬಂದಿಗಳಿಗೆ ಅಪಘಾತ ವಿಮೆ (Accident Insurance) ನೀಡಲು ಯೋಜನೆ ರೂಪಿಸಲಾಗಿತ್ತು.
ಈ ಯೋಜನೆಯ ಸಲುವಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಈ ಅಪಘಾತ ವಿಮೆಯು ಸಂಪೂರ್ಣ ಪ್ರೀಮಿಯಂ ರಹಿತವಾಗಿರುತ್ತದೆ ಎಂದು ರಸ್ತೆ ಸಾರಿಗೆ ನಿಗಮವು ಮಾಹಿತಿ ನೀಡಿದ್ದು , ಹೀಗಾಗಿ, ರಸ್ತೆ ನಿಗಮ ಹಗಲಿರುಳು ಶ್ರಮಿಸುವ ತನ್ನ ನೌಕರರಿಗೆ ಸಿಹಿ ಸುದ್ದಿಯನ್ನು ನೀಡಿತ್ತು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಕೊಟ್ಟ ಮಾತಿನಂತೆ ನಡೆದುಕೊಂಡ ಘಟನೆ ವರದಿಯಾಗಿದೆ.
ಕೆಎಸ್ಆರ್ಟಿಸಿ ಸಂಸ್ಥೆಯ ಈ ಕಾರ್ಯದಿಂದ ಸಿಬ್ಬಂದಿ ಅಪಘಾತದಲ್ಲಿ ಮೃತಪಟ್ಟರೇ ಇಲ್ಲವೇ ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾದ ಸಂದರ್ಭ ದೊಡ್ಡ ಮೊತ್ತದ ಪರಿಹಾರವನ್ನೂ ಅವರ ಕುಟುಂಬಸ್ಥರಿಗೆ ನೀಡುವುದಾಗಿ ಭರವಸೆ ನೀಡಿದ್ದರು. ಈ ವಿಮಾ ಯೋಜನೆಗೆ ಸಿಬ್ಬಂದಿಗಳು ತಿಂಗಳಿಗೆ 62.50 ರೂಪಾಯಿ ಮತ್ತು ಜೆಎಸ್ಟಿ ಸೇರಿದಂತೆ ಒಟ್ಟಾರೆ ವಾರ್ಷಿಕವಾಗಿ 885 ರೂಪಾಯಿ ಪ್ರೀಮಿಯಂ ಹಣ ಪಾವತಿ ಮಾಡಬೇಕಾಗಿತ್ತು.
ಅಂದು ಕೆಎಸ್ಆರ್ಟಿಸಿ ಅಧ್ಯಕ್ಷ ಎಂ.ಚಂದ್ರಪ್ಪ ಅವರ ಸಮ್ಮುಖದಲ್ಲಿ ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಅವರು, ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿಯ ಅಧಿಕಾರಿಗಳು ಒಡಂಬಡಿಕೆಗೆ ಸಹಿ ಹಾಕಿದ್ದರು. ಕಳೆದ ನವೆಂಬರ್ನಲ್ಲಿ ಕೆಎಸ್ಆರ್ಟಿಸಿ ನಿಗಮ ತನ್ನ ನೌಕರರಿಗೆ ಒಂದು ಕೋಟಿ ರೂಪಾಯಿ ಮೊತ್ತದ ಅಪಘಾತ ವಿಮೆ ಯೋಜನೆ ಜಾರಿ ಮಾಡಿದೆ.
ಈ ಹಿಂದೆ ಅಪಘಾತ ವಿಮಾ ಯೋಜನೆಗೆ ಸಂಬಂಧಿಸಿದಂತೆ ಎಸ್ಬಿಐನೊಂದಿಗೆ ಮಾಡಿಕೊಂಡಿದ್ದ ಒಡಂಬಡಿಕೆಯಂತೆ 50 ಲಕ್ಷ ರೂಪಾಯಿ ಹಾಗೂ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಸಂಸ್ಥೆಯೊಂದಿಗೆ ಮಾಡಿಕೊಂಡ ಒಡಂಬಡಿಕೆಯ 50 ಲಕ್ಷ ರೂಪಾಯಿ ಸೇರಿ ಒಟ್ಟು ಒಂದು ಕೋಟಿ ರೂಪಾಯಿ ಅಪಘಾತ ವಿಮೆಯನ್ನು ಸಿಬ್ಬಂದಿಗೆ ನೀಡುವುದಾಗಿ ಘೋಷಣೆ ಮಾಡಲಾಗಿತ್ತು. ಅದರಂತೆ ಇತ್ತೀಚೆಗೆ ಅಪಘಾತವೊಂದರಲ್ಲಿ ಮೃತಪಟ್ಟ ಚಾಲಕನ ಕುಟುಂಬಕ್ಕೆ ಒಂದು ಕೋಟಿ ರೂಪಾಯಿ ವಿಮೆ ನೆರವಿನ ಚೆಕ್ ಅನ್ನು ಸಾರಿಗೆ ಸಚಿವ ಶ್ರೀರಾಮಲು (Minister Sriramulu) ಅವರು ಹಸ್ತಾಂತರಿಸಿ ನುಡಿದಂತೆ ನಡೆದುಕೊಂಡಿದ್ದಾರೆ.
ಚಿತ್ರದುರ್ಗ ಡಿಪೋಗೆ ಸೇರಿದ್ದ ಚಾಲಕ ಕಮ್ ನಿರ್ವಾಹಕ ಉಮೇಶ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಬಸ್ ಚಾಲನೆ ಮಾಡುವ ವೇಳೆ ನಡೆದ ಅಪಘಾತದಲ್ಲಿ ಜೀವ ಕಳೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಇನ್ಶ್ಯೂರೆನ್ಸ್ ಕೋಟಾ ಮೂಲಕ ಒಂದು ಕೋಟಿ ರೂಪಾಯಿ ಚೆಕ್ ಅನ್ನು ಸಚಿವರು ಮೃತ ಉಮೇಶ್ ಕುಟುಂಬಕ್ಕೆ ವಿತರಣೆ ಮಾಡಿದ್ದಾರೆ.
ಇಂದು ಶಾಂತಿನಗರ KSRTC ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್, ಮತ್ತು ಎಸ್ಬಿಐ ಬ್ಯಾಂಕ್ನಿಂದ ನೆರವುವನ್ನು ಉಮೇಶ್ ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ.