ಹೊಸ ವರ್ಷಕ್ಕೆ ಬಂಪರ್ ಖುಷಿ ಸುದ್ದಿ ಕೊಟ್ಟ ಪವಿತ್ರ ಲೋಕೇಶ್ – ನರೇಶ್ | ಲಿಪ್ ಕಿಸ್ ಕೊಟ್ಟು ಮದುವೆ ಸುದ್ದಿ ಬಿಚ್ಚಿಟ್ಟ ಜೋಡಿ | ಲಿಪ್ ಕಿಸ್ ವೀಡಿಯೋ ವೈರಲ್

ಇತ್ತೀಚಿನ ದಿನಗಳಲ್ಲಿ ಪವಿತ್ರಾ ಲೋಕೇಶ್ ಟ್ರೋಲಿಂಗ್ ವಿಷಯವಾಗಿ ಮಾರ್ಪಟ್ಟಿದ್ದಾರೆ . ನಟಿ ಪವಿತ್ರಾ ಲೋಕೇಶ್ ಹಾಗೂ ಹಿರಿಯ ನಟ ನರೇಶ್ ಅವರ ಸಂಬಂಧದ ಬಗ್ಗೆ ದಿನಕ್ಕೊಂದು ಕಥೆ ಕೇಳಿ ಬರುತ್ತಿದ್ದವು. ಇವರಿಬ್ಬರು ಲಿವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿ ಇದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದವು. ಮಾಧ್ಯಮಗಳಲ್ಲಿ ವಿಭಿನ್ನ ಕಥೆಗಳು ಹರಿದಾಡುತ್ತಿರುವ ಬೆನ್ನಲ್ಲೆ ಪವಿತ್ರಾ ಅವರನ್ನು ನಾಲ್ಕನೇ ಮದುವೆಯಾಗಲು ನರೇಶ್ ರೆಡಿಯಾಗಿದ್ದಾರೆ ಎಂಬ ಗಾಳಿ ಸುದ್ದಿ ಎಲ್ಲೆಡೆ ಸಂಚಲನ ಮೂಡಿಸಿತ್ತು.

 

ಇಬ್ಬರ ಬಗ್ಗೆಯೂ ನಾನಾ ರೀತಿಯ ಸುದ್ದಿಗಳು ಹರಿದಾಡುತ್ತಿದ್ದವು. ಈ ನಡುವೆ ಟಾಲಿವುಡ್‌ ನಟ ನರೇಶ್‌ ಹಾಗೂ ನಟಿ ಪವಿತ್ರಾ ಲೋಕೇಶ್‌ ಲಿವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿ ಇದ್ದಾರೆ ಎಂದು ನರೇಶ್‌ ಮೂರನೇ ಪತ್ನಿ ರಮ್ಯಾ ರಘುಪತಿ ಈ ಹಿಂದೆ ಆರೋಪಿಸಿದ್ದರು. ಇದೀಗ ಅದಕ್ಕೆ ತೆರೆ ಎಳೆಯುವ ಮೂಲಕ ಎಲ್ಲ ಊಹಾ ಪೋಹಗಳಿಗೆ ಉತ್ತರ ನೀಡಲು ಮುಂದಾಗಿದ್ದಾರೆ.

ತಾವಿಬ್ಬರೂ ನಟಿಸಿದ ಚಿತ್ರದ ಕುರಿತು ನರೇಶ್‌ ಮಾತನಾಡುವಾಗ ಪವಿತ್ರಾ ಲೋಕೇಶ್‌ ಅವರ ಭುಜದ ಮೇಲೆ ಕೈ ಹಾಕಿರುವ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗೆ ಅವಕಾಶ ಕಲ್ಪಿಸಿದಂತಾಗಿತ್ತು. ಇದನ್ನು ನೋಡಿ ನೆಟ್ಟಿಗರು ಇಬ್ಬರೂ ರಿಲೇಷನ್‌ ಶಿಪ್‌ನಲ್ಲಿ ಇದ್ದಾರೆ ಎಂದು ಅಂದಾಜಿಸಿದ್ದರು.ಇದೀಗ ಈ ಜೋಡಿ ತಮ್ಮ ಟ್ವಿಟರ್ ಖಾತೆಯ ಮೂಲಕ ಸಿಹಿ ಸುದ್ದಿಯೊಂದನ್ನು ಹಂಚಿ ಕೊಂಡಿದ್ದಾರೆ.

ಇದೀಗ ಹೊಸ ವರ್ಷದ ಹೊಸ್ತಿಲಲ್ಲಿ ನರೇಶ್‌ ಟ್ವೀಟ್‌ ಮೂಲಕ ಹೊಸ ಸುದ್ದಿಯನ್ನು ನೀಡಿದ್ದು, ನರೇಶ್‌- ಪವಿತ್ರಾ ಜೋಡಿ ಹೊಸ ಇನಿಂಗ್ಸ್ ಶುರು ಮಾಡಿದ್ದಾರೆ.

ಟ್ವೀಟ್‌ ಮೂಲಕ ನರೇಶ್‌ ಅವರು ʻʻʻʻನಮ್ಮ ಪ್ರಪಂಚಕ್ಕೆ ಸ್ವಾಗತ ಶೀಘ್ರದಲ್ಲೇ ನಾವು ಮದುವೆಯಾಗಲಿದ್ದೇವೆ. ಹಾಗಾಗಿ, ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರಲಿʼʼ ಎಂದು ಪವಿತ್ರಾ ಲೋಕೇಶ್‌ ಅವರಿಗೆ ಲಿಪ್‌ ಕಿಸ್‌ ಕೊಟ್ಟಿರುವ ವಿಡಿಯೊ ಹಂಚಿಕೊಂಡಿದ್ದಾರೆ. ಈ ಶುಭ ಸಂದರ್ಭದಲ್ಲಿ ಕೇಕ್‌ ಕಟ್‌ ಮಾಡಿ, ಪವಿತ್ರಾ ಲೋಕೇಶ್‌ ಅವರಿಗೆ ಲಿಪ್‌ ಕಿಸ್‌ ನೀಡಿದ್ದಾರೆ. ಇದೀಗ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿ ಸಂಚಲನ ಮೂಡಿಸಿದೆ.

Leave A Reply

Your email address will not be published.