ಮಧುಮೇಹಿಗಳೇ ಗಮನಿಸಿ: ಈ ಹಿಟ್ಟಿನಿಂದ ಚಪಾತಿ ರೆಡಿ ಮಾಡಿದ್ರೆ ನಿಮ್ಮ ಶುಗರ್ ಲೆವೆಲ್ ಹೈ ಆಗೋದು ಗ್ಯಾರಂಟಿ!
ಮಧುಮೇಹದ ಚಿಕಿತ್ಸೆಯಲ್ಲಿ ಆಹಾರಕ್ರಮ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಒಂದು ಒಳ್ಳೆಯ ಆಹಾರಕ್ರಮ ಬೇಕು ಅಂತಾರೆ ವೈದ್ಯರು. ಡಯಾಬಿಟಿಸ್ ಡಯೆಟ್ ಅಂದ್ರೆ ಬರೀ ಚಪಾತಿ ತಿನ್ನುವುದಲ್ಲ. ನಾವು ಖರೀದಿಸೋ ಗೋಧಿ ಹಿಟ್ಟಿನಲ್ಲಿ ಸಂಸ್ಕರಿಸಿದ ಹಿಟ್ಟು ಬಳಸಿರುತ್ತಾರೆ. ಇದು ಮಧುಮೇಹಿಗಳಿಗೆ ಒಳ್ಳೆಯದಲ್ಲ. ಗೋಧಿ ಹಿಟ್ಟು ಹೆಚ್ಚಿನ ಗೈಸೆಮಿಕ್ ಸೂಚಿಯನ್ನ ಹೊಂದಿದೆ. ಈ ಕಾರಣದಿಂದಾಗಿ, ಗೋಧಿ ಹಿಟ್ಟಿನಿಂದ ಮಾಡಿದ ಚಪಾತಿಗಳನ್ನ ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣವು ವೇಗವಾಗಿ ಹೆಚ್ಚಾಗುತ್ತದೆ. ಹಾಗಾದ್ರೆ, ಮಧುಮೇಹಿಗಳು ಯಾವ ರೀತಿಯ ಹಿಟ್ಟಿನಿಂದ ತಯಾರಿಸಿದ ರೋಟಿ ತಿನ್ನಬೇಕು ಎಂಬ ಆರೋಗ್ಯಕರ ಮಾಹಿತಿ ಇಲ್ಲಿದೆ.
ಕಾರ್ನ್ ಫ್ಲೋರ್:- ಕಾರ್ನ್ ಆಹಾರದ ಫೈಬರ್’ನ್ನು ಹೊಂದಿರುತ್ತದೆ. ಇದಲ್ಲದೇ, ಇದು ಪ್ರೋಟೀನ್ ಮತ್ತು ಮೆಗ್ನಿಸಿಯಮ್ ಸಹ ಒಳಗೊಂಡಿದೆ. ಇದು ದೇಹವನ್ನು ಆರೋಗ್ಯವಾಗಿರಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನ ನಿಯಂತ್ರಿಸುತ್ತದೆ. ಹಾಗಾಗಿ ಮಧುಮೇಹಿಗಳಿಗೆ ಮೆಕ್ಕೆಜೋಳದ ಹಿಟ್ಟಿನಿಂದ ಮಾಡಿದ ಚಪಾತಿಗಳನ್ನು ತೆಗೆದುಕೊಳ್ಳಲು ಸಲಹೆ ನೀಡಲಾಗುತ್ತದೆ. ಜೋಳದ ಹಿಟ್ಟಿನಿಂದ ತಯಾರಿಸಿದ ರೋಟಿಗಳನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನ ನಿಯಂತ್ರಣದಲ್ಲಿಡುತ್ತದೆ.
ನೆಲಗಡಲೆ: ಕಡಲೆಕಾಯಿಯಿಂದ ಮಾಡಿದ ಚಪಾತಿ ಮಧುಮೇಹ ರೋಗಿಗಳಿಗೂ ಒಳ್ಳೆಯದು. ಈ ಹಿಟ್ಟು ಗ್ಲುಟನ್ ಮುಕ್ತವಾಗಿದೆ. ಇದು ಮಧುಮೇಹಿಗಳಿಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನ ನಿಯಂತ್ರಿಸಲು ಸಹಾಯ ಮಾಡುವುದಲ್ಲದೆ, ಸಕ್ಕರೆ ಮಟ್ಟವನ್ನು ತಗ್ಗಿಸಲು ಸಹಾಯ ಮಾಡುತ್ತದೆ. ಕಡಲೆ ಹಿಟ್ಟಿನಿಂದ ದೋಸೆ ಮಾಡಬಹುದು. ಬೆಳಗಿನ ಉಪಹಾರವಾಗಿ ದೋಸೆ ತಿನ್ನೋದು ಉತ್ತಮ.
ರಾಗಿ ಹಿಟ್ಟು: ಮಧುಮೇಹಿಗಳಿಗೆ ನಾರಿನಾಂಶವಿರೋ ಆಹಾರ ಪದಾರ್ಥಗಳು ಅತಿ ಮುಖ್ಯ. ರಾಗಿಯಲ್ಲಿ ಅತಿ ಹೆಚ್ಚಾಗಿ ಫೈಬರ್ ಅಂಶವಿದೆ. ರಾಗಿಯಲ್ಲಿ ಮಾಡಿದ ಆಹಾರ ಸೇವಿಸಿದ್ರೆ ಬೇಗ ಹೊಟ್ಟೆ ಹಸಿಯುವುದಿಲ್ಲ. ಇದ್ರಿಂದ ಅತಿಯಾಗಿ ತಿನ್ನೋದು ಕಡಿಮೆಯಾಗುತ್ತೆ. ನಿಮ್ಮ ತೂಕವನ್ನು ನಿಯಂತ್ರಣದಲ್ಲಿಡುತ್ತೆ. ರಾಗಿ ಮಧುಮೇಹ ನಿಯಂತ್ರಿಸುವಲ್ಲಿ ನಿರ್ಣಾಯಕ ಪಾತ್ರವಹಿಸುತ್ತೆ. ರಾಗಿ ಹಿಟ್ಟಿನಿಂದ ನೀವು ರಾಗಿ ದೋಸೆ, ರಾಗಿ ರೊಟ್ಟಿ ಹಾಗೂ ರಾಗಿ ಮುದ್ದೆ ಮಾಡಿ ತಿನ್ನಬಹುದು.