ದೇವರ ಹುಂಡಿಯಲ್ಲಿ ಸಿಕ್ತು ಮತ್ತೊಂದು ಪತ್ರ! ದೇವರ ಮೂರ್ತಿಯೇ ಈಕೆಗೆ ತಾಳಿಕಟ್ಟಬೇಕಂತೆ!

ದೇವಾಲಯಕ್ಕೆ ಹೋಗುವ ಭಕ್ತರು ದೇವರಲ್ಲಿ ಪ್ರಾರ್ಥಸಿ ದೇವರ ಹುಂಡಿಗೆ ಹಣವನ್ನು ಕಾಣಿಕೆಯಾಗಿ ಹಾಕುತ್ತಾರೆ. ಹೆಚ್ಚೆಂದರೆ ಕೆಲವೆಡೆ ಚಿನ್ನದ ವಸ್ತುಗಳನ್ನೋ, ಬೆಳ್ಳಿಯ ವಸ್ತುಗಳನ್ನೋ ಹರಕೆಯ ರೂಪದಲ್ಲಿ ಹುಂಡಿಗೆ ಹಾಕುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಭಕ್ತರು ದೇವರ ಕಾಣಿಕೆ ಹುಂಡಿಗಳಲ್ಲಿ ಚಿತ್ರ ವಿಚಿತ್ರವಾದ ಬೇಡಿಕೆಗಳನ್ನು ಹೊತ್ತ ಕಾಗದದ ಪತ್ರಗಳನ್ನು ಹಾಕಿ ಮನವಿ ಮಾಡಿಕೊಳ್ಳುವುದು ಸಮಾನ್ಯವಾಗಿದೆ. ಅಂತಹುದೇ ಘಟನೆ ಇದೀಗ ಚಾಮರಾಜನಗರ ದೇವಾಲಯವೊಂದರಲ್ಲಿ ನಡೆದಿದೆ.

 

ಚಾಮರಾಜನಗರ ತಾಲೂಕಿನ ಮುಕ್ಕಡಹಳ್ಳಿ ಮಾಯಮ್ಮದೇವಮ್ಮ ದೇವಸ್ಥಾನದ ಹುಂಡಿಲ್ಲಿ ಒಂದು ಪತ್ರ ಸಿಕ್ಕಿದ್ದು ಅದರಲ್ಲಿ ದೇವರ ಮೂರ್ತಿ ಬಿಟ್ಟು ನನ್ನ ಕುತ್ತಿಗೆಗೆ ಬೇರೆ ಯಾರೂ ತಾಳಿ ಕಟ್ಟಬಾರಾದು ಎಂದು ಬರೆದಿರುವುದು ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ.

ಕೆಲವು ದಿನಗಳ ಹಿಂದಷ್ಟೇ ಇದೇ ಚಾಮರಾಜನಗರದ ಚಾಮರಾಜೇಶ್ವರ ದೇವಾಲಯದ ಹುಂಡಿ ಎಣಿಸುವಾಗ
‘ದೇವರೆ ನನಗೆ ಹೆಣ್ಣನ್ನು ಕರುಣಿಸು’ ಎಂದು ಬರೆದಿದ್ದ ಪತ್ರ ಹುಂಡಿಯಲ್ಲಿ ಸಿಕ್ಕಿತ್ತು. ಇದೀಗ ದೇವರೆ ನನ್ನ ಕುತ್ತಿಗೆಗೆ ತಾಳಿ ಕಟ್ಟಬೇಕು, ಬೇರೆ ಯಾರೂ ತಾಳಿ ಕಟ್ಟಬಾರಾದು ಎಂದು ಪ್ರೇಮಿಯೊಬ್ಬಳು ದೇವರಿಕೆ ಹರಕೆ ಕಟ್ಟಿಕೊಂಡು ಹುಂಡಿಗೆ ಚೀಟಿಯನ್ನು ಹಾಕಿರುವುದು ತಮಾಷೆಯಂತಿದೆ.

ಮೊದಲೆಲ್ಲ ತಮ್ಮ ಇಷ್ಟಾರ್ಥಗಳನ್ನು ಕರುಣಿಸು ಎಂದು ದೇವರಿಗೆ ಕಾಣಿಕೆ ಹಾಕುವುದನ್ನು ನೋಡಿದ್ದೇವೆ. ತೀರ ಅಪರೂಪವೆಂಬಂತೆ ಇತ್ತೀಚೆಗೆ ಕಾಣಿಕೆ ಹಾಕುವ ಹುಂಡಿಯಲ್ಲಿ ಕೆಲವೊಂದು ವಿಚಿತ್ರ ಪತ್ರಗಳನ್ನು ದೇವರ ಹುಂಡಿಯಲ್ಲಿ ಪತ್ತೆಯಾಗುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ ಎನ್ನುತ್ತಾರೆ ಜನರು ಮತ್ತು ದೇವಾಲಯದ ಸಿಬ್ಬಂದಿಗಳು

Leave A Reply

Your email address will not be published.