BBK 9 Winner : ಬಿಗ್ ಬಾಸ್ ವಿನ್ನರ್ ಗೆ ಏನು ಸಿಗಲಿದೆ ಗೊತ್ತೇ? ಬಹುಮಾನದ ಒಟ್ಟು ಮೊತ್ತದ ಜೊತೆ ಇದೆಲ್ಲಾ ವಿನ್ನರ್ ಪಾಲಿಗೆ!

ಮನರಂಜನೆಯ ಉಣಬಡಿಸುವ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ದೊಡ್ಮನೆಯ ಆಟಗಳು ಜನರಿಗೆ ಕುತೂಹಲ ಮೂಡಿಸುತ್ತಾ ಮಂದೆನಾಗಲಿದೆಯೋ ಎಂಬ ಕಾತುರ ಅಭಿಮಾನಿಗಳಲ್ಲಿ ಮನೆ ಮಾಡಿದೆ. ‘ಬಿಗ್ ಬಾಸ್​ ಕನ್ನಡ ಸೀಸನ್ 9’ (BBK 9) ಕೊನೆಯ ಹಂತಕ್ಕೆ ತಲುಪಿದೆ.

 

ಇಂದು ಈ ರಿಯಾಲಿಟಿ ಶೋನ ಕಟ್ಟ ಕಡೆಯ ಘಟ್ಟದ ಎಪಿಸೋಡ್ ಪ್ರಸಾರವಾಗಲಿದ್ದು, ಟಾಪ್ ಫೈನಲಿಸ್ಟ್ ಆಗಿ ಆಯ್ಕೆ ಆಗಿದ್ದ ಐದು ಮಂದಿಯಲ್ಲಿ ದಿವ್ಯಾ ಉರುಡುಗ ಎಲಿಮಿನೇಟ್ ಆಗಿದ್ದಾರೆ. ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ರೂಪೇಶ್ ರಾಜಣ್ಣ, ದೀಪಿಕಾ ದಾಸ್ ಇವರಲ್ಲಿ ಯಾರು ವಿನ್ನರ್‌ ಆಗ್ತಾರೆ ಎಂಬ ಕಾತುರ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.

ಮನರಂಜನೆ ಕಾರ್ಯಕ್ರಮಗಳಲ್ಲಿ ಒಂದಾದ ಸೀಸನ್ 9 ಬಿಗ್ ಬಾಸ್ ಕನ್ನಡ ದೂರದರ್ಶನದಲ್ಲಿ ಅತಿದೊಡ್ಡ TRP ಸರಣಿಗಳಲ್ಲಿ ಒಂದಾಗಿದ್ದು, ಇದು ಬಿಗ್ ಬಾಸ್ ಕನ್ನಡ ಸೀಸನ್ 9 ರ ಹದಿಮೂರನೇ ವಾರವಾಗಿದೆ. ಬಿಗ್ ಬಾಸ್ ಸೀಸನ್ 9 ರ ವಿನ್ನರ್‌ ಯಾರು ಎಂಬ ಜೊತೆಗೆ ಅವರಿಗೆ ಏನೆಲ್ಲಾ ಬಹುಮಾನ ಸಿಗಲಿದೆ ಎಂಬ ಕೌತುಕ ಜನರಲ್ಲಿ ಮನೆ ಮಾಡಿದೆ.ಬಿಗ್ ಬಾಸ್ ಕನ್ನಡ 9 ರ ವಿಜೇತರನ್ನು 31 ಡಿಸೆಂಬರ್ 2022 ರಂದು ಘೋಷಿಸಲಾಗುತ್ತದೆ.

ಗ್ರ್ಯಾಂಡ್ ಫಿನಾಲೆಯಲ್ಲಿ ವಿಜೇತರನ್ನು ಕಿಚ್ಚ ಸುದೀಪ್ ಅವರು ಘೋಷಿಸಲಿದ್ದು, ಬಿಗ್ ಬಾಸ್ ಕನ್ನಡ 9 ರ ವಿಜೇತರು ಬೃಹತ್ ಮೊತ್ತದ ಬಿಬಿಕೆ 9 ಚಾಂಪಿಯನ್ ಟ್ರೋಫಿ ಮತ್ತು ಇತರ ಕೆಲವು ಉಡುಗೊರೆಗಳನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ. ಬಿಬಿಕೆ 9 ವೀಕ್ಷಕರು ಸೋಷಿಯಲ್ ಮೀಡಿಯಾದಲ್ಲಿ ಶೋನ ವಿಜೇತ ಮತ್ತು ರನ್ನರ್ ಅಪ್ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ.

ರೂಪೇಶ್ ಶೆಟ್ಟಿ ಮತ್ತು ರಾಕೇಶ್ ಅಡಿಗ ಬಿಬಿಕೆ 9 ವಿಜೇತ ಮತ್ತು ರನ್ನರ್ ಅಪ್‌ ಎಂಬ ಊಹಾಪೋಹ ನಡೆಯುತ್ತಿವೆ. ಈ ಮದ್ಯೆ ಬಿಗ್ ಬಾಸ್ ಕನ್ನಡ ಸೀಸನ್ 9 ರ ವಿಜೇತರ ಬಹುಮಾನದ ಮೊತ್ತದ ಬಗ್ಗೆ ಕೂಡ ನಿಮಗೆ ಕೂತೂಹಲ ಮನೆ ಮಾಡಿರಬಹುದು.

ಹಿಂದಿನ ಸೀಸನ್‌ಗಳ ಅನುಸಾರ, ಬಿಗ್ ಬಾಸ್ ಕನ್ನಡ 9 ವಿಜೇತರು ಟ್ರೋಫಿಯೊಂದಿಗೆ 50 ಲಕ್ಷ ರೂಪಾಯಿಗಳನ್ನು ಪಡೆಯುತ್ತಿದ್ದರು. ಬಿಗ್ ಬಾಸ್ ಸೀಸನ್ 9 ಗ್ರ್ಯಾಂಡ್‌ ಫಿನಾಲೆ ನಡೆಯುತ್ತಿದ್ದು, ಬಿಗ್ ಬಾಸ್ ಕನ್ನಡ ಸೀಸನ್ 9 ವಿನ್ನರ್ ಯಾರು ಎಂಬ ಕುತೂಹಲಕ್ಕೆ ಇನ್ನೇನೂ ಕೆಲವೇ ಗಂಟೆಗಳಲ್ಲಿ ತೆರೆ ಬೀಳಲು ಕ್ಷಣಗಣನೆ ಆರಂಭವಾಗಿದೆ. ಪ್ರೇಕ್ಷಕರು ಬಿಗ್ ಬಾಸ್ ಕನ್ನಡ ಸೀಸನ್ 9 ಫಲಿತಾಂಶ ನೋಡಲು ಎದುರು ನೋಡುತ್ತಿದ್ದಾರೆ.

Leave A Reply

Your email address will not be published.