BBK9 : ತನ್ನ ತಾಳ್ಮೆಯಿಂದಲೇ ಎಲ್ಲರ ಹೃದಯ‌ ಗೆದ್ದ ರಾಕೇಶ್ ಅಡಿಗ | ಈ ಬಾರಿಯ ಬಿಗ್ ಬಾಸ್ ವಿನ್ನರೇ!?

ಮನರಂಜನೆಯ ಉಣಬಡಿಸುವ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ದೊಡ್ಮನೆಯ ಆಟಗಳು ಜನರಿಗೆ ಕುತೂಹಲ ಮೂಡಿಸುತ್ತಾ ಮಂದೆನಾಗಲಿದೆಯೋ ಎಂಬ ಕಾತುರ ಅಭಿಮಾನಿಗಳಲ್ಲಿ ಮನೆ ಮಾಡಿದೆ. ‘ಬಿಗ್ ಬಾಸ್​ ಕನ್ನಡ ಸೀಸನ್ 9’ (BBK 9) ಕೊನೆಯ ಹಂತಕ್ಕೆ ತಲುಪಿದೆ.

 

ಇಂದು ಈ ರಿಯಾಲಿಟಿ ಶೋನ ಕಟ್ಟ ಕಡೆಯ ಘಟ್ಟದ ಎಪಿಸೋಡ್ ಪ್ರಸಾರವಾಗಲಿದ್ದು, ಟಾಪ್ ಫೈನಲಿಸ್ಟ್ ಆಗಿ ಆಯ್ಕೆ ಆಗಿದ್ದ ಐದು ಮಂದಿಯಲ್ಲಿ ದಿವ್ಯಾ ಉರುಡುಗ ಎಲಿಮಿನೇಟ್ ಆಗಿದ್ದಾರೆ. ಡಿಸೆಂಬರ್ 30 ಮತ್ತು 31ರಂದು ಬಿಗ್ ಬಾಸ್ ಗ್ರಾಂಡ್ ಫಿನಾಲೆ ನಡೆಯಲಿದ್ದು, ದಿವ್ಯಾ ಎಲಿಮಿನೇಷನ್ ಬಳಿಕ ರೂಪೇಶ್ ಶೆಟ್ಟಿ, ರೂಪೇಶ್ ರಾಜಣ್ಣ, ದೀಪಿಕಾ ದಾಸ್ ಮತ್ತು ರಾಕೇಶ್ ಅಡಿಗ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ.

ಯಾರಿಗೆ ಸಿಗಲಿದೆ ಈ ಬಾರಿಯ ಬಿಗ್‌ಬಾಸ್ ರಿಯಾಲಿಟಿ ಶೋನ ಪಟ್ಟ ಎಂಬುದನ್ನು ತಿಳಿಯಲು ನಿಜಕ್ಕೂ ಅಭಿಮಾನಿಗಳು ಕೌತುಕದಿಂದ ಎದುರು ನೋಡುತ್ತಿದ್ದಾರೆ. ಈ ನಡುವೆ ಬಿಗ್ ಬಾಸ್ ವಿನ್ನರ್ ರಾಕೇಶ್ ಅಡಿಗ ಆಗಲಿದ್ದಾರಾ ?? ಎಂಬ ಚರ್ಚೆ ಅಭಿಮಾನಿಗಳಲ್ಲಿ ಮೂಡಿದೆ.

ಬಿಗ್ ಬಾಸ್ ಜರ್ನಿಯಲ್ಲಿ ರಾಕೇಶ್ ಅಡಿಗ ಹೆಚ್ಚೆಂದರೆ ಒಂದೆರಡು ಬಾರಿ ತಮ್ಮ ದ್ವನಿ ಕೊಂಚ ಮಟ್ಟಿಗೆ ಏರಿಸಿ ಮಾತನಾಡಿದ್ದು ಇನ್ನುಳಿದ ಎಂತಹ ಕಠಿಣ ಸಂದರ್ಭ ಎದುರಾದರೂ ಕೂಡ ಶಾಂತ ಚಿತ್ತತೆ ಕಾಯ್ದುಕೊಂಡಿದ್ದು, ಸ್ಥಿರ ಮನಸ್ಥಿತಿ ಉಳಿಸಿಕೊಂಡಿದ್ದಾರೆ. ಇದರ ಜೊತೆಗೆ, ಕೆಲವು ಅನಧಿಕೃತ ಸಾಮಾಜಿಕ ಮಾಧ್ಯಮ ಪುಟಗಳಲ್ಲಿ ಈಗಾಗಲೇ ರಾಕೇಶ್ ಅಡಿಗ ಅವರನ್ನು ಬಿಗ್ ಬಾಸ್ ಕನ್ನಡ ಸೀಸನ್ 9 ರ ವಿನ್ನರ್ ಎಂದು ಹೇಳಲಾಗಿದೆ.

ರಾಕೇಶ್ ಅಡಿಗ ಅವರ ತಾಳ್ಮೆ, ಸಂಯಮವೇ ಬಿಗ್‌ ಬಾಸ್‌ ಮನೆಯಲ್ಲಿ ಅವರಿಗೆ ಪ್ಲಸ್ ಪಾಯಿಂಟ್ ಆಗಿ ಪರಿಣಮಿಸಿದೆ. ಕಾವ್ಯಶ್ರೀ ಗೌಡ, ಅನುಪಮಾ ಗೌಡ, ಅಮೂಲ್ಯ ಗೌಡ, ದಿವ್ಯಾ ಉರುಡುಗ, ನೇಹಾ ಗೌಡ ಜೊತೆ ರಾಕೇಶ್ ಅಡಿಗ ಅವರ ಸ್ನೇಹ ಸಂಬಂಧ ನೋಡುಗರ ಕಣ್ಣಿಗೆ ಹಬ್ಬ ಉಂಟು ಮಾಡಿತ್ತು.

ರಾಕೇಶ್ ಅಡಿಗ ಬಿಗ್ ಬಾಸ್ ಮನೆಯೊಳಗೆ ಹಾಡುತ್ತಾ ಕುಣಿಯುತ್ತಾ ಕೂಲ್‌ ಆಂಡ್‌ ಕಾಮ್‌ ಆಗಿ ಎಲ್ಲರ ಗಮನ ಸೆಳೆದಿದ್ದಾರೆ. ರಾಕೇಶ್ ಅಡಿಗ ಅವರು ದೊಡ್ಮನೆ ಆಟದಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ಟಾಸ್ಕ್‌ಗಳಲ್ಲಿ ತಮ್ಮ ಕಾರ್ಯಕ್ಷಮತೆ ಮತ್ತು ನಡವಳಿಕೆಯಿಂದ ಸಾಮಾಜಿಕ ಮಾಧ್ಯಮದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.

ಇದೀಗ, ರಾಕೇಶ್ ಅಡಿಗ ಅಭಿಮಾನಿಗಳು ಅವರನ್ನು ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಪ್ರತಿ ಬಾರಿ ನಾಮೆನೇಟ್‌ ಆದಾಗ ಸೇವ್‌ ಆಗುವವರಲ್ಲಿ ಯಾವಾಗಲೂ ಹೆಚ್ಚು ಮತ ಪಡೆದು ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಹೀಗಾಗಿ, ರಾಕೇಶ್ ಅಡಿಗಟ್ರೋಫಿ ಗೆಲ್ಲುವ ಸಾಧ್ಯತೆ ದಟ್ಟವಾಗಿದೆ ಎಂಬ ಮಾತುಗಳು ಅಭಿಮಾನಿಗಳಲ್ಲಿ ಕೇಳಿಬರುತ್ತಿವೆ. ಆದರೆ, ಶೋ ಮೇಕರ್‌ಗಳಾದ ಕಲರ್ಸ್ ಕನ್ನಡದಿಂದ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ.

Leave A Reply

Your email address will not be published.