ತಾಯಿಯ ಸೀರೆಯಲ್ಲಿ ಆಟವಾಡಲು ಹೋಗಿ ಘೋರ ಅಂತ್ಯ ಕಂಡ ಬಾಲಕ !

ಮಂಡ್ಯ: ಬಾಲಕನೋರ್ವ ತಾಯಿಯ ಸೀರೆಯಲ್ಲಿ ಜೋಲಿ ಕಟ್ಟಿ ಆಟವಾಡುತ್ತಿದ್ದ ವೇಳೆ ಉಸಿರುಗಟ್ಟಿ ಮೃತಪಟ್ಟಿರುವ ಆಘಾತಕಾರಿ ಘಟನೆ ಕಿಕ್ಕೇರಿ ಸಮೀಪದ ಬೇವಿನಹಳ್ಳಿ ಕೊಪ್ಪಲು ಗ್ರಾಮದಲ್ಲಿ ನಡೆದಿದೆ.

 

ಮೃತ ಬಾಲಕ ಬೇವಿನಹಳ್ಳಿ ಕೊಪ್ಪಲು ಗ್ರಾಮದ ಶ್ರೀನಿವಾಸ ಅವರ ಪುತ್ರ ಸಮರ್ಥ್​(9) ಎಂದು ಗುರುತಿಸಲಾಗಿದೆ.

ಸಂಜೆ ಶಾಲೆ ಮುಗಿಸಿಕೊಂಡು ಮನೆಗೆ ಬಂದ ಬಾಲಕ, ಆಟವಾಡಬೇಕೆನಿಸಿ, ಜೋಕಾಲಿ ಆಡಲು ಅಮ್ಮನ ಸೀರೆ ತೆಗೆದುಕೊಂಡು ಹೋಗಿ, ಈತನೇ ಜೋಲಿ ಕಟ್ಟಿದ್ದಾನೆ. ಬಾಲಕ ಮನೆಗೆ ಬರುವಾಗ ಮನೆಯಲ್ಲಿ ಯಾರೂ ಇರಲಿಲ್ಲ. ಹಾಗಾಗಿ ತಾನೇ ಜೋಲಿ ಕಟ್ಟಿಕೊಂಡಿದ್ದಾನೆ.

ನಂತರ ಅದರೊಳಗೆ ಕುಳಿತು ಆಟವಾಡುತ್ತಿದ್ದ. ಈ ವೇಳೆ ಜೋಲಿಯ ಬಟ್ಟೆ ಸುರುಳಿ ಸುತ್ತಿಕೊಂಡಿದೆ. ಇದರ ಪರಿಣಾಮ ಬಾಲಕ ಉಸಿರುಗಟ್ಟಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ವಿಷಯ ತಿಳಿದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Leave A Reply

Your email address will not be published.