ಮದ್ಯ ಪ್ರಿಯರಿಗೆ ಸಂತಸದ ಸುದ್ಧಿ: ವೈನರಿ ವಿಮಾನಯಾನಕ್ಕೆ ರೆಡಿಯಾಗಿರಿ

ವೈನ್ ಸೇವನೆ ಹೆಚ್ಚಿನವರಿಗೆ ಅತ್ಯಂತ ಪ್ರಿಯವಾದುದು ತಾನೆ. ಹಾಗಿದ್ದರೆ ನಿಮಗೊಂದು ಒಳ್ಳೆಯ ಅವಕಾಶವಿದೆ.
ಗಾಳಿಯಲ್ಲಿ ಹಾರಿಕೊಂಡು ಹೊಸ ವರ್ಷದ ಆಚರನಣೆಯೊಂದಿಗೆ ನೀವು ವೈನ್ ಸೇವಿಸಬಹುದಾಗಿದೆ. ಈ ಚಾನ್ಸ್ ಮಿಸ್ ಮಾಡದಿರಿ.

 

ಹೌದು, ಅನೇಕ ವೈನ್‌ಗಳ ರುಚಿ ಮಾಡುವುದರ ಜೊತೆ ಜೊತೆಗೆ ರಾತ್ರಿ ತಂಗುವಿಕೆ ಕೂಡ ಒಳಗೊಂಡಿರುತ್ತದೆ. ಜೊತೆಗೆ ವಿಮಾನ, ಬೋಟ್ಸ್‌ವಾನಾ ಬುಚೆರಿಗೆ ಭೇಟಿ, ಕ್ವೀನ್ಸ್‌ಟೌನ್‌ನಲ್ಲಿ ಡಿನ್ನರ್ ಮತ್ತು ಹಿಲ್ಟನ್‌ ಕ್ವೀನ್ಸ್‌ಟೌನ್‌ ರೆಸಾರ್ಟ್‌ ಮತ್ತು ಸ್ಪಾನಲ್ಲಿ ರಾತ್ರಿ ಉಳಿಯುವಿಕೆ ಕೂಡ ಟಿಕೆಟ್ ಬೆಲೆಯಲ್ಲಿ ಸೇರ್ಪಡೆಯಾಗಿರುತ್ತದೆ. ಇದಕ್ಕೆ ಪ್ರತಿಕ್ರಿಯೆ ನೀಡುವ ಇನ್ವಿವೊ ಏರ್‌ನ ಸಹ ಸಂಸ್ಥಾಪಕರು, ಇದು ವಿಶ್ವದ ಮೊದಲ ವೈನರಿ ವಿಮಾನಯಾನ ಸಂಸ್ಥೆಯಾಗಲಿದೆ ಎಂದಿದ್ದಾರೆ.

ಸದ್ಯ 2023 ಜನವರಿ ತಿಂಗಳಿನಲ್ಲಿ ವಿಶ್ವದ ಮೊದಲ ವೈನರಿ ವಿಮಾನಯಾನ ಸಂಸ್ಥೆ ಬರಲು ಸಜ್ಜಾಗಿದೆ. ವರದಿಗಳ ಪ್ರಕಾರ, ಈ ವೈನರಿ ವಿಮಾನಯಾನದಲ್ಲಿ ಪ್ರಯಾಣಿಸುವ ಮೂಲಕ ವೈನ್‌ ಸೇರಿದಂತೆ ಇನ್ನು ಅನೇಕ ಐಷಾರಾಮಿತನವನ್ನು ಆನಂದಿಸಬಹುದು. ಅಷ್ಟೇ ಅಲ್ಲ, 18,000 ಅಡಿಗಳಷ್ಟು ಎಂಟು ಹಂತದ ವೈನ್‌ ರುಚಿಯನ್ನು ಪ್ರಯಾಣಿಕರು ಆಸ್ವಾದಿಸಬಹುದು.

ವರದಿಗಳ ಪ್ರಕಾರ, ಮೊದಲ ವಿಮಾನವು ಹೊಸವರ್ಷದ ಮೊದಲ ತಿಂಗಳು ಜನವರಿಯಂದು ಆಕ್ಲೆಂಡ್‌ನಿಂದ ಕ್ವೀನ್ಸ್‌ಟೌನ್‌ಗೆ ಹೊರಡಲಿದೆ. ನೀವು ಕೇವಲ £600 ಬೆಲೆಯಲ್ಲಿ 8 ಹಂತದ ವೈನ್ ರುಚಿ ಆನಂದಿಸುವುದರ ಜೊತೆಗೆ ಅನೇಕ ಪ್ರವಾಸಿ ತಾಣಗಳು, ರೆಸಾರ್ಟ್ ಮತ್ತು ಸ್ಪಾಗಳಲ್ಲಿ ತಂಗಬಹುದಾಗಿದೆ. ಮುಖ್ಯವಾಗಿ ಇದನ್ನು ಇನ್ವಿವೊ ಸಹ ಸಂಸ್ಥಾಪಕರು ಮುನ್ನಡೆಸಲಿದ್ದಾರೆ. ಈ ಎಲ್ಲಾ ಸೌಲಭ್ಯವನ್ನು ಕೇವಲ £600 ಟಿಕೆಟ್ ಬೆಲೆಯಲ್ಲಿ
ಇಂತಹ ರೋಮಾಂಚಕಾರಿ ಪ್ರಯಾಣವನ್ನು ಮುಂದಿನ ಹೊಸವರ್ಷ 2023 ರ ಜನವರಿ ತಿಂಗಳಿನಲ್ಲಿ ನಿಮ್ಮದಾಗಿಸಿಕೊಳ್ಳಬಹುದು.

ಒಟ್ಟಾರೆ ವೈನ್‌ ಪ್ರಿಯರು ಅತ್ಯುತ್ತಮವಾದ ಐಷಾರಾಮಿ ಅನುಭವವನ್ನು ಪಡೆಯುವುದರಲ್ಲಿ ಅನುಮಾನವೇ ಇಲ್ಲ.

Leave A Reply

Your email address will not be published.