ಸಿಕ್ಕ ಸಿಕ್ಕ ಹೆಣ್ಮಕ್ಕಳಿಗೆ ರೇಟ್‌ ಎಷ್ಟೆಂದು ಕೇಳುತ್ತಿದ್ದ ಕಾಮುಕ | ಕೋಪಗೊಂಡ ಮಹಿಳೆಯರಿಂದ ಚಪ್ಪಲಿಯೇಟು

ಕೆಲವೊಂದು ಬಾರಿ ದಂಡಂ ದಶಗುಣಂ ಎಂಬ ಮಾತು ಕೆಲಸಕ್ಕೆ ಬರುತ್ತದೆ. ಹೌದು ಮಾತಿಗೆ ಜಗ್ಗದವರು ದಂಡಕ್ಕೆ ಜಗ್ಗಲೇ ಬೇಕು ತಾನೆ. ಹಾಗೆಯೇ ಮಹಿಳೆಯರು ತಮ್ಮ ಶೀಲದ ವಿಚಾರಕ್ಕೆ ಬಂದರೆ ಒಂದಲ್ಲ ಒಂದು ದಿನ ರೊಚ್ಚಿಗೆದ್ದು ತಕ್ಕ ಶಾಸ್ತಿ ಮಾಡುತ್ತಾರೆ. ಸದ್ಯ ಧಾರವಾಡದ ಮಾರುಕಟ್ಟೆ ಪರಿಸರದಲ್ಲಿ ಕಾಮುಕನೊಬ್ಬ ಮಹಿಳೆಯರಿಂದ ಧರ್ಮದೇಟು ತಿಂದಿರುವ ಘಟನೆ ನಡೆದಿದೆ.

 

ಧಾರವಾಡ ನಗರದ ಶುಭಾಷ್ ಮಾರ್ಕೆಟ್ ನಲ್ಲಿ ಹೂವು, ಹಣ್ಣು ಹಾಗೂ ತರಕಾರಿಗಳನ್ನು ಮಾರಾಟ ಮಾಡುತ್ತಿದ್ದವರು ಹಾಗೂ ಮಾರುಕಟ್ಟೆಗೆ ವಸ್ತುಗಳನ್ನು ಖರೀದಿ ಮಾಡಲು ಬರುತ್ತಿದ್ದ ಮಹಿಳಾ ಗ್ರಾಹಕರಿಗೆ ನಿಮ್ಮ ರೇಟ್‌ ಎಷ್ಟು? ನಿಮ್ಮ ನಂಬರ್‌ ಕೊಡಿ ಎಂದು ಚುಡಾಯಿಸುತ್ತಿದ್ದ ಕಾಮುಕನಿಗೆ ಮಹಿಳೆಯೇ ಹಿಡಿದುಕೊಂಡು ಗೂಸಾ ಕೊಟ್ಟಿರುವ ಘಟನೆ ನಡೆದಿದೆ.

ಧಾರವಾಡ ನಗರದ ಶುಭಾಷ್ ಮಾರ್ಕೆಟ್ ನಲ್ಲಿ ಹಣ್ಣು ಮಾರಾಟ ಮಾಡುವ ಮಹಿಳೆಯರಿಗೆ ಚುಡಾಯಿಸುತ್ತಿದ್ದನು. ಇನ್ನು ಮಹಿಳೆಯರಿಗೆ ಹಲವು ದಿನಗಳಿಂದ ಕಿರುಕುಳ ನೀಡುತ್ತಿದ್ದರಿಂದ ಇಲ್ಲಿ ಮಹಿಳೆಯರು ನೆಮ್ಮದಿಯಾಗಿ ವ್ಯಾಪಾರ ಮಾಡಲು ಆಗುತ್ತಿರಲಿಲ್ಲ. ಮಹಿಳಾ ವ್ಯಾಪಾರಿಗಳ ಜೊತೆಗೆ ಗ್ರಾಹಕರಿಗೂ ಕಿರುಕುಳ ನೀಡುತ್ತಿದ್ದನು. ಇನ್ನು ಗ್ರಾಹಕರು ಒಂದು ದಿನ ಮಾರುಕಟ್ಟೆಗೆ ಬಂದು ಹೋಗುತ್ತಿದ್ದರಿಂದ ಈತನ ಮಾತುಗಳನ್ನು ಲೆಕ್ಕಿಸದೇ ನಿರ್ಲಕ್ಷ್ಯ ಮಾಡಿ ಹೋಗುತ್ತಿದ್ದರು. ಆದರೆ, ಮಾರುಕಟ್ಟೆಯಲ್ಲಿ ಕಾಮುಕನ ಕಿರುಕುಳವನ್ನು ಹಲವು ದಿನಗಳಿಂದ ನೋಡಿದ್ದ ವ್ಯಾಪಾರಸ್ಥ ಮಹಿಳೆಯರು ಸರಿಯಾದ ಸಮಯ ನೋಡಿ ಹಿಡಿದುಕೊಂಡು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.

ಇದೀಗ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಾಮುಕನನ್ನು ವಶಕ್ಕೆ ಪಡೆದು ಆತನ ಹಿನ್ನೆಲೆ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.

ಒಟ್ಟಿನಲ್ಲಿ ದಿನೇ ದಿನೇ ಕಾಮುಕರ ಅಟ್ಟಹಾಸ ಮಿತಿಮೀರಿದೆ. ಸಮಾಜದಲ್ಲಿ ಇಂತಹ ಕಾಮುಕರಿಗೆ ಸಲಿಗೆ ಸಿಕ್ಕಾಗಲೇ ಹೆಣ್ಣು ಮಕ್ಕಳ ಬಾಳು ಹಾಳಾಗುವುದು ಆದ್ದರಿಂದ ಸಮಾಜದಲ್ಲಿ ಇಂತಹ ಕಾಮುಕರಿಗೆ ಕಾನೂನು ಪ್ರಕಾರ ಸರಿಯಾದ ಶಿಕ್ಷೆ ನೀಡಬೇಕು.

Leave A Reply

Your email address will not be published.