ಮಾರುಕಟ್ಟೆಗೆ ಭರ್ಜರಿ ಎಂಟ್ರಿ ನೀಡಲಿದೆ ರೆಡ್​​ಮಿ ನೋಟ್​ 12 5G ಸ್ಮಾರ್ಟ್​​ಫೋನ್ | ಇದರ ಸಂಪೂರ್ಣ ಮಾಹಿತಿ ಇಲ್ಲಿದೆ

ಇತ್ತೀಚೆಗೆ ಸ್ಮಾರ್ಟ್ ಫೋನ್ ಕಂಪನಿಗಳು ಹೊಸ ಹೊಸ ಸ್ಮಾರ್ಟ್ ಫೋನ್ ಅನ್ನು ಪರಿಚಯಿಸುತ್ತಿದೆ. ಹಾಗೆಯೇ ರೆಡ್​ಮಿ ನೋಟ್​ ಸೀರಿಸ್​ನಲ್ಲಿ ಹಲವಾರು ಸ್ಮಾರ್ಟ್​ಫೋನ್​ಗಳು ಕೂಡ ಬಿಡುಗಡೆಯಾಗಿದ್ದು, ಇದೀಗ ರೆಡ್​ಮಿ ಕಂಪನಿಯ ಮತ್ತೊಂದು 5ಜಿ ಸ್ಮಾರ್ಟ್​ಫೋನ್​ ಬಿಡುಗಡೆಯಾಗಲು ಸಜ್ಜಾಗಿದೆ.

ಹೌದು!! ರೆಡ್​​ಮಿ ನೋಟ್​ ಸೀರಿಸ್​ನಲ್ಲಿ ರೆಡ್​​ಮಿ ನೋಟ್​ 12 5ಜಿ ಎಂಬ ಸ್ಮಾರ್ಟ್​​ಫೋನ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದ್ದು, ಇದು 2023 ಜನವರಿ 5 ರಂದು ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ಎಂದು ಕಂಪನಿ ಹೇಳಿದೆ. ಭಾರತದಲ್ಲಿ ರೆಡ್ಮಿ ನೋಟ್ 12 5ಜಿ, ರೆಡ್ಮಿ ನೋಟ್ 12 ಪ್ರೋ 5ಜಿ ಮತ್ತು ರೆಡ್ಮಿ ನೋಟ್ 12 ಪ್ರೋ+ 5ಜಿ ಮಾದರಿಗಳಲ್ಲಿ ಲಗ್ಗೆ ಇಡಲಿದೆ ಎನ್ನಲಾಗಿದೆ. ಈ ಸ್ಮಾರ್ಟ್ ಫೋನ್ ನ ಫೀಚರ್ಸ್ ಹೇಗಿದೆ? ಇದರ ವೈಶಿಷ್ಟ್ಯತೆ ಏನು ಎಂಬುದರ ಮಾಹಿತಿ ಇಲ್ಲಿದೆ.

ರೆಡ್​​ಮಿ ನೋಟ್​ 12 5ಜಿ : ಈ ಸ್ಮಾರ್ಟ್​​ಫೋನ್​ 6.67 ಇಂಚಿನ ಅಮೋಲ್ಡ್​ ಡಿಸ್‌ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್​ ಮತ್ತು 240Hz ಟಚ್ ಸ್ಲಾಪಿಂಗ್​ ರೇಟ್​ ಅನ್ನು ಹೊಂದಿದೆ. ಹಾಗೂ ಡ್ಯುಯಲ್ 5ಜಿ ಬ್ಯಾಂಡ್ ಬೆಂಬಲ ಪಡೆದಿದ್ದು, ಕ್ವಾಲ್ಕಮ್‌ ಸ್ನ್ಯಾಪ್‌ಡ್ರಾಗನ್ 4 ಜೆನ್ 1 ಹೊಂದಿದೆ. ಜೊತೆಗೆ 5000mAh ಬ್ಯಾಟರಿ ಮತ್ತು 33W ಇನ್ ಬಾಕ್ಸ್ ಫಾಸ್ಟ್ ಚಾರ್ಜರ್‌ ಅನ್ನು ಹೊಂದಿದೆ. ಹಾಗೇ ಇದು ಟ್ರಿಪಲ್ ಕ್ಯಾಮೆರಾ ಸೆಟಪ್‌ನೊಂದಿಗೆ 48ಎಂಪಿ ಪ್ರಾಥಮಿಕ ಸೆನ್ಸಾರ್​, 8ಎಂಪಿ ಅಲ್ಟ್ರಾವೈಡ್ ಮತ್ತು 2ಎಂಪಿ ಮ್ಯಾಕ್ರೋ ಸೆನ್ಸಾರ್​ ಅನ್ನು ಒಳಗೊಂಡಿದೆ. ಸೆಲ್ಫಿ ಕ್ಯಾಮೆರಾ 13 ಎಂಪಿ ಸಸೆನ್ಸಾರ ಇದೆ.

ರೆಡ್​​ಮಿ ನೋಟ್​ 12 ಪ್ರೋ 5ಜಿ : ಈ ಸ್ಮಾರ್ಟ್​ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 1080 ಪ್ರೊಸೆಸರ್ ಅನ್ನು ಹೊಂದಿದೆ. ಹಾಗೇ 67W ಫಾಸ್ಟ್ ಚಾರ್ಜರ್ ಜೊತೆಗೆ 5000mAh ಬ್ಯಾಟರಿ ಇದ್ದು, ಇದರಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್‌ ಇದೆ. ಇದು 50ಎಂಪಿ ಸೋನಿ IMX766 ಪ್ರಾಥಮಿಕ ಕ್ಯಾಮೆರಾ, 8ಎಂಪಿ ಅಲ್ಟ್ರಾವೈಡ್ ಕ್ಯಾಮೆರಾ ಮತ್ತು 2ಎಂಪಿ ಮ್ಯಾಕ್ರೋ ಕ್ಯಾಮೆರಾವನ್ನು ಹೊಂದಿದೆ. ಅಲ್ಲದೆ, ಸೆಲ್ಫಿಗಾಗಿ 16ಎಂಪಿ ಕ್ಯಾಮೆರಾ ಇದೆ.

ರೆಡ್​​ಮಿ ನೋಟ್​ 12 ಪ್ರೋ+ 5ಜಿ : ರೆಡ್ಮಿ ನೋಟ್ 12 ಪ್ರೋ+ ಸ್ಮಾರ್ಟ್​​ಫೋನ್ 120Hz ರಿಫ್ರೆಶ್ ದರದ ಜೊತೆಗೆ 6.67 ಇಂಚಿನ 10 ಬಿಟ್ ಅಮೋಲ್ಡ್​ ಡಿಸ್ಪ್ಲೇಯನ್ನು ಹೊಂದಿದ್ದು, ಡಾಲ್ಬಿ ವಿಷನ್, ಡಾಲ್ಬಿ ಅಟ್ಮಾಸ್ ಮತ್ತು HDR10+ ಗೆ ಬೆಂಬಲವನ್ನು ಪಡೆದಿದೆ. ಈ ಸ್ಮಾರ್ಟ್ ಫೋನ್ ಭಾರತದ ಮೊದಲ ಓಐಎಸ್​​ನ ಜೊತೆಗೆ 200 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ HPX ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿರುವುದಾಗಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 1080 ಪ್ರೊಸೆಸರ್ ಅನ್ನು ಹೊಂದಿದೆ. ಬಾಕ್ಸ್‌ನಲ್ಲಿ 120W ಹೈಪರ್‌ ಚಾರ್ಜ್‌ನೊಂದಿಗೆ ಬೃಹತ್ 4980mAh ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿದ್ದು, ಅತಿ ಬೇಗನೆ ಫುಲ್ ಚಾರ್ಜ್ ಆಗುತ್ತದೆ.

Leave A Reply

Your email address will not be published.