ತಾಯಿಯ ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾಬೇನ್ ಇಂದು ಮುಂಜಾನೆ ವಿಧಿವಶರಾಗಿದ್ದಾರೆ. ಗಾಂಧಿ ನಗರದ ಪಂಕಜ್ ಮೋದಿ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಪಾರ್ಥೀವ ಶರೀರವನ್ನು ಇಡಲಾಗಿತ್ತು. ಪ್ರಧಾನಿ ಮೋದಿಯವರ ಆಗಮನದ ಬಳಿಕ ಅಂತ್ಯಕ್ರಿಯೆ ನಡೆಯುವುದಾಗಿ ತಿಳಿಸಿದ್ದರು. ಇದೀಗ ಅಂತಿಮ ಯಾತ್ರೆ ಹೊರಟಿದ್ದು ಪ್ರಧಾನಿ ತಮ್ಮ ತಾಯಿಯ ಪಾರ್ಥಿವ ಶರೀರದ ಮೆರವಣಿಗೆಗೆ ಹೆಗಲು ನೀಡಿದ್ದಾರೆ.

ಶತಾಯುಷಿ ಹೀರಾಬೆನ್ ಅವರು ಐವರು ಪುತ್ರರು ಓರ್ವ ಪುತ್ರಿಯನ್ನು ಅಗಲಿದ್ದಾರೆ. ಸದ್ಯ ಹೀರಾಬೆನ್ ನಿಧನಕ್ಕೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ. ಗಣ್ಯರು ಸಂತಾಪಗಳನ್ನು ಸೂಚಿಸುತ್ತಿದ್ದಾರೆ. ಅಲ್ಲದೇ ಪ್ರಧಾನಿಯವರಿಗೆ ಧೈರ್ಯ ತುಂಬುತ್ತಿದ್ದಾರೆ. ಇಂದು ಬೆಳಗ್ಗೆ 10 ಗಂಟೆಗೆ ಸೆಕ್ಟರ್ 30ರ ರುದ್ರಭೂಮಿಯಲ್ಲಿ ಹೀರಾಬೆನ್ ಅಂತ್ಯಕ್ರಿಯೆ ನಡೆದಿದೆ.

ಕಾಲಿಗೆ ಚಕ್ರ ಕಟ್ಟಿಕೊಂಡಂತೆ ದೇಶದ ಸೇವೆ ಮಾಡುತ್ತಿದ್ದ ಮೋದಿಯವರ ತಡೆ ರಹಿತ ಕೆಲಸದ ಹಿಂದೆ ಅಮ್ಮನ ಮಾರ್ಗದರ್ಶನ ಇತ್ತು. ಪರಿಶ್ರಮವೇ- ಜೀವನದ ಮಂತ್ರ ಅಂತಾ ಅಮ್ಮ ಸದಾ ಮಗನಿಗೆ ಕಿವಿಮಾತು ಹೇಳುತ್ತಿದ್ದರು. ಪ್ರಾಮಾಣಿಕತೆ ಮತ್ತು ಸ್ವಾಭಿಮಾನದ ಪಾಠದ ಜೊತೆಗೆ ಸದಾ ಪರಿಶ್ರಮ ಪಡಬೇಕೆಂದು ಸದಾ ಸಲಹೆ ನೀಡುತ್ತಿದ್ದರು. ಯಾವುದೇ ಸವಾಲನ್ನು ಜಯಿಸಲು ನಿರಂತರ ಪರಿಶ್ರಮಪಡಬೇಕು ಎಂಬುದು ಅವರ ಪ್ರಮುಖ ಮಂತ್ರವಾಗಿತ್ತು. ಅದಕ್ಕಾಗಿಯೇ ನನ್ನ ಯಶಸ್ಸಿನ ಹಿಂದೆ ತಾಯಿ ಇದ್ದಾರೆ ಅಂತಾ ಮೋದಿ ಸದಾ ಹೇಳುತ್ತಿದ್ದರು.

Leave A Reply

Your email address will not be published.