ದೇಶದ ಜನತೆಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರಕಾರ: ಖಾದ್ಯ ತೈಲ, ಬೇಳೆ ಕಾಳು ಕುರಿತು ನಿರ್ಣಯ

ದಿನಂಪ್ರತಿ ಪ್ರತಿ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಈ ನಡುವೆ ಜನತೆ ಬೆಲೆ ಏರಿಕೆಯ ಬಿಸಿಯಿಂದ ತತ್ತರಿಸಿರುವ ನಡುವೆ ಸಿಹಿ ಸುದ್ದಿಯೊಂದು ನಿಮಗಾಗಿ ಕಾದಿವೆ. ಹೌದು!!!ಕೇಂದ್ರ ಸರ್ಕಾರ ಸಂತಸದ ಸುದ್ದಿಯೊಂದನ್ನು ನೀಡಿದೆ. ಬೆಲೆ ಏರಿಕೆಯ ಬಿಸಿಯಿಂದ ದೊಡ್ಡ ಹೊಡೆತ ಅನುಭವಿಸುತ್ತಿರುವ ಸಾಮಾನ್ಯ ಜನತೆಗೆ ಇದರಿಂದ ಕೊಂಚ ಸಮಾಧಾನ ಉಂಟಾಗಲಿದೆ ಎನ್ನಲಾಗುತ್ತಿದೆ.

ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯ (DGFT) ತನ್ನ ಇತ್ತೀಚಿನ ಅಧಿಸೂಚನೆಯಲ್ಲಿ ಬೇಳೆಕಾಳುಗಳು ಮತ್ತು ಕಡಲೆಗಳ ಉಚಿತ ಆಮದು ನೀತಿಯು ಮಾರ್ಚ್ 31, 2021 ರವರೆಗೆ ಮುಂದುವರಿಯುತ್ತದೆ ಎಂದು ಪ್ರಕಟಣೆ ನೀಡಿದೆ. ಇದಲ್ಲದೆ, ಮತ್ತೊಂದು ಪ್ರಕಟಣೆಯಲ್ಲಿ ಪ್ರತ್ಯೇಕ ಅಧಿಸೂಚನೆಯಲ್ಲಿ ಸಂಸ್ಕರಿಸಿದ ಬ್ಲೀಚ್ಡ್ ಡಿಯೋಡರೈಸ್ಡ್ ತಾಳೆ ಎಣ್ಣೆ ಮತ್ತು ಪಾಮೋಲಿನ್’ಗಳ ಉಚಿತ ಆಮದುಗಳನ್ನು ಕೂಡ ವಿಸ್ತರಿಸಲಾಗಿರುವ ಮಾಹಿತಿ ನೀಡಿದೆ.

ಈ ವಿಸ್ತರಣೆಯನ್ನು ಡಿಸೆಂಬರ್ 31, 2022 ರಿಂದ ವಿಸ್ತರಿಸಲಾಗಲಿದೆ. ಉಚಿತ ಆಮದು ನೀತಿಯು ಮುಂದಿನ ಅಧಿಸೂಚನೆಯವರೆಗೆ ಮುಂದುವರಿಯುತ್ತದೆ. ಬೇಳೆಕಾಳುಗಳ ಬೆಲೆ ಪ್ರಸ್ತುತ ಮಾರುಕಟ್ಟೆಯಲ್ಲಿ ಕನಿಷ್ಠ ಬೆಂಬಲ ಬೆಲೆಗಿಂತ ಏರಿಕೆ ಕಂಡಿದೆ. ಲಾತೂರು ಸಗಟು ಮಾರುಕಟ್ಟೆಯಲ್ಲಿ ಕ್ವಿಂಟಲ್ಗೆ 6,800 ರೂಪಾಯಿ ಆಸುಪಾಸಿನಲ್ಲಿದೆ.

ಸರಕಾರ ಘೋಷಿಸಿರುವ ಕನಿಷ್ಠ ಬೆಂಬಲ ಬೆಲೆ 6,600 ರೂಪಾಯಿ ಆಗಿದೆ.ಇತ್ತೀಚಿನ ದಿನಗಳಲ್ಲಿ ಕಂಡಿ ಬೇಳೆ ಬೆಲೆ ಏರಿಕೆಯಾಗುತ್ತಿದ್ದು, ಇದೀಗ ಕೇಂದ್ರ ಸರಕಾರ ಉಚಿತ ಆಮದು ನೀತಿಯನ್ನು ಮುಂದುವರಿಸಲು ತೀರ್ಮಾನ ಕೈಗೊಂಡಿದ್ದು, ಇದು ಬೆಲೆಗಳನ್ನ ನಿಯಂತ್ರಣದಲ್ಲಿಡಲು ನೆರವಾಗುತ್ತದೆ.

ಈ ಬಾರಿ ಕಂಡಿ ಕಾಳುಗಳ ಇಳುವರಿಯೂ ಕಡಿಮೆಯಾಗಿರುವ ಕುರಿತು ರೈತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಮುಂದಿನ ವರ್ಷವೂ ಬೇಳೆಕಾಳುಗಳ ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಅಡುಗೆ ಎಣ್ಣೆ ಬೆಲೆ ನಿಯಂತ್ರಣದಲ್ಲಿದೆ ಎಎನ್ನಬಹುದಾಗಿದೆ. ಪ್ರಸ್ತುತ ತಾಳೆ ಎಣ್ಣೆಯ ದರ ಕೆಜಿಗೆ 104 ರೂಪಾಯಿ ಇದ್ದು, ಈ ವರ್ಷದ ಆರಂಭದಲ್ಲಿಯೇ ಅಡುಗೆ ಎಣ್ಣೆ ಬೆಲೆ ಏರಿಕೆ ಕಂಡ ಬೆನ್ನಲ್ಲೇ ಕೊಂಚ ಸಮಯದ ಬಳಿಕ ಖಾದ್ಯ ತೈಲದ ಬೆಲೆ ಕಡಿಮೆಯಾಗಿದ್ದು, ಸದ್ಯ, ಅಡುಗೆ ಎಣ್ಣೆ ಬೆಲೆ ನಿಯಂತ್ರಣದಲ್ಲಿದೆ.

ಕೇಂದ್ರ ಸರ್ಕಾರ ಬೇಳೆಕಾಳುಗಳು, ಖಾದ್ಯ ತೈಲ, ಸಿರಿಧಾನ್ಯಗಳ ಕುರಿತಂತೆ ಮುಖ್ಯ ಘೋಷಣೆ ಮಾಡಲಾಗಿದೆ. ಕೇಂದ್ರ ಸರ್ಕಾರ ಉಚಿತ ಆಮದನ್ನು ಒಂದು ವರ್ಷಗಳ ಕಾಲ ಅಂದರೆ 31 ಮಾರ್ಚ್ 2024 ರವರೆಗೆ ಮುಂದುವರಿಯಲಿದೆ ಎಂಬ ಮಾಹಿತಿ ನೀಡಿದೆ. ಹೀಗಾಗಿ, ಕೇಂದ್ರ ಸರ್ಕಾರ ಕಾಂಡಿ ಬೇಳೆಕಾಳು ಮತ್ತು ಕಡಲೆಗಳ ಉಚಿತ ಆಮದನ್ನು ವಿಸ್ತರಣೆ ಮಾಡಲಾಗುತ್ತಿದೆ ಎನ್ನಲಾಗಿದೆ.

2022-23ರ ಆರ್ಥಿಕ ವರ್ಷದಲ್ಲಿ ಭಾರತವು ಏಪ್ರಿಲ್ನಿಂದ ಅಕ್ಟೋಬರ್’ವರೆಗೆ 200 ಮಿಲಿಯನ್ ಡಾಲರ್ ಮೌಲ್ಯದ ರಾಗಿ ಮತ್ತು 194 ಮಿಲಿಯನ್ ಡಾಲರ್ ಮೌಲ್ಯದ ಬೇಳೆಕಾಳುಗಳನ್ನ ಆಮದು ಮಾಡಿಕೊಂಡಿದೆ. ಕೇರಳದ ಯಾವುದೇ ಬಂದರಿನಿಂದ ಸಂಸ್ಕರಿಸಿದ ತೈಲಗಳನ್ನ ಆಮದು ಮಾಡಿಕೊಳ್ಳಬಾರದು ಎಂದು ಸ್ಪಷ್ಟಪಡಿಸಲಾಗಿದ್ದು, ಕೇರಳದ ಬಂದರುಗಳಿಂದ ಸಂಸ್ಕರಿಸಿದ ತೈಲಗಳ ಆಮದು ನಿರ್ಬಂಧಿಸುವುದನ್ನ ಮುಂದುವರೆಸಿದೆ.

Leave A Reply

Your email address will not be published.