BBK9 : ದೊಡ್ಮನೆಯಿಂದ ದಿವ್ಯಾ ಉರುಡುಗ ಔಟ್‌

Share the Article

ಬಿಗ್‌ ಬಾಸ್‌ ಸೀಸನ್‌ 9 ಫೈನಲ್‌ ಹಂತಕ್ಕೆ ತಲುಪಿದೆ. ಇಂದು ಮತ್ತು ನಾಳೆ ಈ ರಿಯಾಲಿಟಿ ಶೋನ ಕಡೇ ಘಟ್ಟ ಪ್ರಸಾರವಾಗಲಿದ್ದು, ಟಾಪ್‌ ಫೈನಲಿಸ್ಟ್‌ ಆಗಿ ಆಯ್ಕೆ ಆಗಿದ್ದ ಐದು ಮಂದಿಯಲ್ಲಿ ದಿವ್ಯಾ ಉರುಡುಗ ಎಲಿಮಿನೇಟ್‌ ಆಗಿದ್ದಾರೆ. ಈ ಮೂಲಕ ಟ್ರೋಫಿ ಗೆಲ್ಲುವ ದಿವ್ಯಾ ಉರುಡುಗ ಅವರ ಕನಸು ಈ ಬಾರಿಯೂ ನನಸಾಗಿಲ್ಲ. ಬಿಗ್ ಬಾಸ್ (Bigg Boss Kannada) ಸೀಸನ್ 8ರಲ್ಲಿ ಫೈನಲಿಸ್ಟ್‌ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದ ದಿವ್ಯಾ ಉರುಡುಗ (Divya Uruduga) ಈ ಬಾರಿ ಸೀಸನ್ 9ಕ್ಕೂ ಬಂದಿದ್ದರು.

ಈ ಬಾರಿ ಭಿನ್ನವಾಗಿ ಪ್ರಾರಂಭವಾಗಿದ್ದ ಬಿಗ್ ಬಾಸ್ ಸೀಸನ್ 9 (Bigg Boss Kannada 9) ಈ ಬಾರಿ ಪ್ರವೀಣರು ಮತ್ತು ನವೀನರು ಎಂಬ ಯೋಜನೆಯ ಅಡಿ ಬಿಗ್ ಬಾಸ್ ಶೋ ಮೂಡಿ ಬಂದಿತ್ತು. ಪ್ರವೀಣರ ಪೈಕಿಯಲ್ಲಿ ಗುರುತಿಸಿಕೊಂಡಿದ್ದ ದಿವ್ಯಾ ಉರುಡುಗ ಈ ಬಾರಿ ಟಿವಿ ಬಿಗ್ ಬಾಸ್ ಸೀಸನ್ 9ಕ್ಕೂ ಕಾಲಿಟ್ಟಿದ್ದರು.

ಅಂದ ಹಾಗೆ ಕಳೆದ ಸೀಸನ್‌ನಲ್ಲಿ ಅರವಿಂದ್ ಕೆ.ಪಿ (Aravind Kp) ಜೊತೆ ದಿವ್ಯಾ ತುಂಬಾನೇ ಕ್ಲೋಸ್‌ ಆಗಿದ್ದ ದಿವ್ಯಾ ಈ ವಿಚಾರವಾಗಿಯೇ ಭಾರೀ ಚರ್ಚೆಯಲ್ಲಿದ್ದರು. ಹಾಗೆಯೇ ಸೀಸನ್‌ 9ರಲ್ಲಿ ಒಂಟಿಯಾಗಿ ಆಟ ಆಡಿ ಮತ್ತೊಮ್ಮೆ ತಮ್ಮ ಅದೃಷ್ಟ ಪರೀಕ್ಷೆಗೆ ಬಂದಿದ್ದರು. ಆರ್ಯವರ್ಧನ್‌ ಗುರೂಜಿ ಎಲಿಮಿನೇಟ್‌ ಆಗಿ ಹೋದಾಗ, ಅವರ ಬದಲು ದಿವ್ಯಾ ಉರುಡುಗ ಮನೆಯಿಂದ ಹೊರ ಹೋಗ ಬೇಕಿತ್ತು ಎಂಬ ಮಾತು ಕೂಡಾ ಸಾಮಾಜಿಕ ಜಾಲತಾಣದಲ್ಲಿ ಬಂದಿತ್ತು. ಟಾಪ್‌ ಫೈವ್‌ ಫೈನಲಿಸ್ಟ್‌ ವರೆಗೆ ಬಂದ ದಿವ್ಯಾ ಅವರ ಬಿಗ್‌ಬಾಸ್ ಮನೆಯ ಆಟ ಇಲ್ಲಿಗೆ ಅಂತ್ಯವಾಗಿದೆ. ಡಿಸೆಂಬರ್‌ 30 ಮತ್ತು 31ರಂದು ಬಿಗ್‌ ಬಾಸ್‌ ಗ್ರ್ಯಾಂಡ್‌ ಫಿನಾಲೆ ನಡೆಯಲಿದೆ. ದಿವ್ಯಾ ಎಲಿಮಿನೇಷನ್‌ ನಂತರ ರೂಪೇಶ್ ಶೆಟ್ಟಿ, ರೂಪೇಶ್ ರಾಜಣ್ಣ, ದೀಪಿಕಾ ದಾಸ್ ಮತ್ತು ರಾಕೇಶ್ ಅಡಿಗ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಯಾರಿಗೆ ಸಿಗಲಿದೆ ಈ ಬಾರಿಯ ಬಿಗ್‌ಬಾಸ್‌ ರಿಯಾಲಿಟಿ ಶೋನ ಪಟ್ಟ ಎಂಬುದನ್ನು ತಿಳಿಯಲು ನಿಜಕ್ಕೂ ಅಭಿಮಾನಿಗಳು ಕಾತುರದಿಂದ ಕಾಯ್ತಾ ಇದ್ದಾರೆ.

Leave A Reply