ಏರ್‌ಟೆಲ್ ನೀಡಿದೆ ಹೊಸ ವರ್ಷಕ್ಕೆ ಭರ್ಜರಿ ಸಿಹಿಸುದ್ದಿ !

ಭಾರತದ ಟೆಲಿಕಾಂ ಕಂಪನಿಗಳು ಹಲವಾರು ಇವೆ. ಅವುಗಳಲ್ಲಿ ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್ ಕಂಪೆನಿಗಳ ನಡುವಿನ ದರ ಪೈಪೋಟಿ ದಿನೇ ದಿನೇ ಮುಂದುವರಿಯುತ್ತಲೇ ಇದೆ ಅಂದರೆ ತಪ್ಪಾಗಲಾರದು .

ಪ್ರಸ್ತುತ ಜಿಯೋ ದೇಶದ ಅತಿದೊಡ್ಡ ಟೆಲಿಕಾಂ ಕಂಪೆನಿಯಾಗಿ ಹೊರಹೊಮ್ಮಿದ ನಂತರ ಇತ್ತ ಏರ್‌ಟೆಲ್ ಕೂಡ ವಿಭಿನ್ನ ಪ್ರಯೋಜನಗಳ ಮೂಲಕ ಹೆಚ್ಚು ಗ್ರಾಹಕರನ್ನು ಸೆಳೆಯಲು ಮುಂದಾಗಿದ್ದು, ಇದೀಗ
ಬೆಂಗಳೂರು ಸೇರಿದಂತೆ ಭಾರತದ ಹಲವಾರು ನಗರಗಳಲ್ಲಿ 5G ಸೇವೆಗಳನ್ನು ಆರಂಭಿಸಿರುವ ದೇಶದ ಎರಡನೇ ಅತಿದೊಡ್ಡ ಟೆಲಿಕಾಂ ಸಂಸ್ಥೆ ‘ಏರ್‌ಟೆಲ್’ ಆಗಿದೆ. ಪ್ರಸ್ತುತ ಹೊಸ ವರ್ಷದ ಸಂದರ್ಭದಲ್ಲಿ ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಿದೆ.

ಅಕ್ಟೋಬರ್ 1 ರಂದು ಏರ್ಟೆಲ್ ತನ್ನ 5G ವಾಣಿಜ್ಯ ಸೇವೆಗಳನ್ನು ಆರಂಭಿಸಿತ್ತು. ಏರ್‌ಟೆಲ್ 5G ಸೇವೆಯನ್ನು ಪ್ರಾರಂಭಿಸಿದ ಒಂದು ತಿಂಗಳೊಳಗೆ 1 ಮಿಲಿಯನ್ 5G ಬಳಕೆದಾರರನ್ನು ಗಳಿಸಿತ್ತು. ಪ್ರಸ್ತುತ ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು, ಹೈದರಾಬಾದ್, ಸಿಲಿಗುರಿ, ನಾಗ್ಪುರ ಮತ್ತು ವಾರಣಾಸಿಯಂತಹ ಪ್ರಮುಖ ನಗರಗಳಲ್ಲಿ ಏರ್‌ಟೆಲ್ 5G ಸೇವೆ ಆರಂಭವಾಗಿದೆ. ಮುಂದಿನ ಕೆಲ ತಿಂಗಳುಗಳಲ್ಲಿ ನಗರ ಪ್ರದೇಶಗಳಲ್ಲಿ ಮತ್ತು ಮಾರ್ಚ್ 2024 ರ ವೇಳೆಗೆ ಪ್ಯಾನ್ ಇಂಡಿಯಾಗೆ 5G ಸೇವೆ ವಿಸ್ತರಿಸಲು ಏರ್‌ಟೆಲ್ ಯೋಜಿಸಿದೆ.

ದೇಶದಲ್ಲಿ 5G ಸೇವೆಗಳನ್ನು ಆರಂಭಿಸಲು ಸಾಕಷ್ಟು ಬಂಡವಾಳ ಹೂಡಿಕೆಯ ನಂತರವೂ ಸಹ ತನ್ನ 5G ಸೇವೆಗಳನ್ನು ಒದಗಿಸಲು ಪ್ರೀಮಿಯಂ ಶುಲ್ಕ ವಿಧಿಸುವುದಿಲ್ಲ ಎಂದು ಏರ್‌ಟೆಲ್ ತಿಳಿಸಿದ್ದು, 5G ಸ್ಮಾರ್ಟ್‌ಫೋನ್‌ ಹೊಂದಿರುವ ಎಲ್ಲಾ ಏರ್‌ಟೆಲ್ ಬಳಕೆದಾರರು ಅಸ್ತಿತ್ವದಲ್ಲಿರುವ 4G ಡೇಟಾ ಯೋಜನೆಗಳಲ್ಲಿ ಏರ್‌ಟೆಲ್ 5G ಪ್ಲಸ್ ಸೇವೆಯನ್ನು ಪಡೆಯಲು ಅರ್ಹರಾಗಿದ್ದಾರೆ ಎಂದು ತಿಳಿಸಿದೆ.

ದೇಶದಲ್ಲಿ 5G ಸೇವೆಗಳನ್ನು ಆರಂಭಿಸುವ ನಿಟ್ಟಿನಲ್ಲಿಯೂ ಜಿಯೋ ಮತ್ತು ಏರ್‌ಟೆಲ್ ಕಂಪೆನಿಗಳ ನಡುವಿನ ಸಮರ ಮುಂದುವರೆದಿದ್ದು, ಅದಲ್ಲದೆ ಭಾರತದಾದ್ಯಂತ ಬಹುವೇಗವಾಗಿ 5G ಸೇವೆಗಳನ್ನು ಆರಂಭಿಸುವ ನಿಟ್ಟಿನಲ್ಲಿ ಜಿಯೋ ಕಾರ್ಯನಿರ್ವಹಿಸುತ್ತಿದೆ. ಜಿಯೋ ತನ್ನ 5G ಸೇವೆಗಳನ್ನು ಹೆಚ್ಚು ವ್ಯಾಪಿಸುವ ಸಲುವಾಗಿ ಈಗಾಗಲೇ ‘5G ವೆಲ್ಕಮ್ ಆಫರ್’ ಬಿಡುಗಡೆಗೊಳಿಸಿದ್ದು, 234 ರೂಪಾಯಿಗಿಂತ ಹೆಚ್ಚು 4G ಡೇಟಾ ಯೋಜನೆಗಳಿಗೆ ರೀಚಾರ್ಜ್ ಮಾಡಿರುವ ತನ್ನ ಎಲ್ಲಾ ಗ್ರಾಹಕರು ‘ಅನಿಯಮಿತ ಹೈ ಸ್ಪೀಡ್ 5G’ ಡೇಟಾವನ್ನು ಬಳಸಬಹುದು ಎಂದು ತಿಳಿಸಿದೆ. ಇದರಿಂದ ಏರ್‌ಟೆಲ್ ಕೂಡ ಜಿಯೋವನ್ನು ಹಿಂಬಾಲಿಸಬೇಕಾಗಿ ಬಂದಿದ್ದು, ತನ್ನ ಗ್ರಾಹಕರಿಗೂ ಯಾವುದೇ ಹೆಚ್ಚುವರಿ ಪ್ರೀಮಿಯಂ ಶುಲ್ಕಗಳನ್ನು ವಿಧಿಸುವುದಿಲ್ಲ ಎಂದು ಹೇಳಿದೆ.

ಆದರೆ, ಪ್ರಸ್ತುತ ಏರ್‌ಟೆಲ್ 4G ಬಳಕೆದಾರರು ರೀಚಾರ್ಜ್ ಮಾಡಿಸಬೇಕಿರುವ ಕನಿಷ್ಟ ಮೊತ್ತದ ಬಗ್ಗೆ ತಿಳಿಸಿಲ್ಲ. ಆದರೆ, ಉದ್ಯಮ ಮೂಲಗಳು, ಏರ್‌ಟೆಲ್ ಜಿಯೋ ಹಿಂಬಾಲಿಸುವ ಮೂಲಕ ‘ಅನಿಯಮಿತ ಹೈ ಸ್ಪೀಡ್ 5G’ ಡೇಟಾವನ್ನು ಕಡಿಮೆ ಶುಲ್ಕದಲ್ಲಿ ಒದಗಿಸಬಹುದು ಎಂದು ಊಹಿಸಿಕೊಂಡಿದೆ.

ಈಗಾಗಲೇ ಬೆಂಗಳೂರಿನ ‘ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ’ದಲ್ಲಿ ಈಗಾಗಲೇ ಏರ್‌ಟೆಲ್ 5G ಪ್ಲಸ್ ಸೇವೆ ಆರಂಭವಾಗಿದ್ದು, ಅಲ್ಟ್ರಾಫಾಸ್ಟ್ 5G ನೆಟ್‌ವರ್ಕ್‌ ಸೇವೆಗೆ ಪ್ರವೇಶವನ್ನು ಪಡೆದ ‘ಭಾರತದ ಮೊದಲ ವಿಮಾನ ನಿಲ್ದಾಣ’ ಎಂಬ ಖ್ಯಾತಿಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಪಾತ್ರವಾಗಿದೆ.

ಸಂಸ್ಥೆಯ CTO Randeep Sekhon ಪ್ರಕಾರ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌ 2 ನಲ್ಲಿನ ಗ್ರಾಹಕರು ಈಗ ಹೈಡೆಫಿನಿಷನ್ ವೀಡಿಯೊ ಸ್ಟ್ರೀಮಿಂಗ್, ಗೇಮಿಂಗ್, ಮಲ್ಟಿಪಲ್ ಚಾಟಿಂಗ್, ಫೋಟೋಗಳ ತ್ವರಿತ ಅಪ್‌ಲೋಡ್ ಮತ್ತು ಹೆಚ್ಚಿನವುಗಳಿಗೆ ಸೂಪರ್‌ಫಾಸ್ಟ್ ಪ್ರವೇಶವನ್ನು ಹೊಂದಬಹುದು ಎಂದು ಭರವಸೆ ನೀಡಿದ್ದಾರೆ.

ಒಟ್ಟಿನಲ್ಲಿ ಜಿಯೋ ಮತ್ತು ಏರ್‌ಟೆಲ್ ತಾನು ಮೇಲು ತಾನು ಮೇಲೆಂದು ಜನರಿಗೆ ಉತ್ತಮ ಆಫರ್ಗಳನ್ನು ನೀಡುತ್ತಲಿದೆ.

Leave A Reply

Your email address will not be published.