Smartwatch : ಲಕ್ಷ ಬೆಲೆಬಾಳುವ ಆ್ಯಪಲ್ ವಾಚ್ ಗೆ ಪೈಪೋಟಿ ನೀಡುವ ಈ ಅಗ್ಗದ ಸ್ಮಾರ್ಟ್ ವಾಚ್ ಗಳಿವು!
ಆ್ಯಪಲ್ ವಾಚ್ ಈಗ ಒಂದು ಪ್ಯಾಷನ್ ಆಗಿದೆ ಮತ್ತು ತುಂಬಾ ಉಪಯೋಗಕಾರಿ ಆದುದು. ಆ್ಯಪಲ್ ಕಂಪನಿಯ ಸ್ಮಾರ್ಟ್‌ಫೋನ್ /ಐಫೋನ್ ಅಂದರೆ ಹಲವರಿಗೆ ಪಂಚಪ್ರಾಣ. ಇದೀಗ ಫೈರ್ ಬೋಲ್ಟ್ ಭಾರತೀಯ ಮಾರುಕಟ್ಟೆಗೆ ತನ್ನ ಹೊಸ ಸ್ಮಾರ್ಟ್ ವಾಚ್ ಬಿಡುಗಡೆ ಮಾಡಿದೆ. ಅದಲ್ಲದೆ ಈ ಹೊಸ ಸ್ಮಾರ್ಟ್‍ವಾಚ್ ನೋಡಲು Apple Watch Ultraನಂತೆ ಕಾಣುತ್ತದೆ. ಅಲ್ಲದೆ 3 ಸಾವಿರಕ್ಕಿಂತಲೂ ಕಡಿಮೆ ಬೆಲೆಗೆ ಸಿಗುವ ಈ ಸ್ಮಾರ್ಟ್‍ವಾಚ್ ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿದೆ
ಹೌದು ಫೈರ್ ಬೋಲ್ಟ್ ಭಾರತೀಯ ಮಾರುಕಟ್ಟೆಗೆ ತನ್ನ ಹೊಸ ಸ್ಮಾರ್ಟ್ ವಾಚ್ ಬಿಡುಗಡೆ ಮಾಡಿದೆ. ಇದು ಅನೇಕ ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಸ್ಮಾರ್ಟ್‍ವಾಚ್ ಅಲ್ಟ್ರಾ-ಸ್ಲೀಕ್ ಮೆಟಾಲಿಕ್ ಫ್ರೇಮ್‌ನಲ್ಲಿ ಬರುತ್ತದೆ. ಇದು ಬ್ಲೂಟೂತ್ ಕರೆ ಮಾಡುವ ವೈಶಿಷ್ಟ್ಯವನ್ನು ಹೊಂದಿದ್ದು, 1.96-ಇಂಚಿನ ಡಿಸ್ಪ್ಲೇಯೊಂದಿಗೆ ಬರುತ್ತದೆ. ರೋಮನ್ ವೀರ ಸೈನಿಕನ ಹೆಸರು(ಗ್ಲಾಡಿಯೇಟರ್)ಹೊಂದಿರುವ ಈ ಸ್ಮಾರ್ಟ್‍ವಾಚ್ 90 ಸಾವಿರ ರೂ. ಮೌಲ್ಯದ Apple Watch Ultraನಂತೆ ಕಾಣುತ್ತದೆ.
ಈ ಸ್ಮಾರ್ಟ್ ವಾಚ್ ಡಿಸೆಂಬರ್ 30ರಿಂದ Amazon.in ಮತ್ತು Fire-Bolt ವೆಬ್‌ಸೈಟ್‌ನಲ್ಲಿ 2,499 ರೂ,ಗಳ ಆರಂಭಿಕ ಬೆಲೆಯಲ್ಲಿ ಖರೀದಿಗೆ ಲಭ್ಯವಿರುತ್ತದೆ. ಅಲ್ಲದೆ ಇದನ್ನು 4 ಬಣ್ಣಗಳಲ್ಲಿ ಕಪ್ಪು, ನೀಲಿ, ಬ್ಲ್ಯಾಕ್ ಗೋಲ್ಡ್ ಮತ್ತು ಗೋಲ್ಡ್ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದೆ.
ಫೈರ್-ಬೋಲ್ಟ್ ಗ್ಲಾಡಿಯೇಟರ್ ವಿಶೇಷಗಳು :
- ಗ್ಲಾಡಿಯೇಟರ್ ವಾಚ್ ಗಾತ್ರದಲ್ಲಿ ದೊಡ್ಡದಾಗಿದ್ದು, 600 ನಿಟ್ಸ್ ಬ್ರೈಟ್‌ನೆಸ್‌ನೊಂದಿಗೆ ಬರುತ್ತದೆ. ಅಂದರೆ ಡಿಸ್ಪ್ಲೇ ಸೂರ್ಯನ ಪ್ರಕಾಶಮಾನದಲ್ಲಿಯೂ ಚೆನ್ನಾಗಿ ಗೋಚರಿಸುತ್ತದೆ. ವಾಚ್‌ನಲ್ಲಿ 123 ಕ್ರೀಡಾ ವಿಧಾನಗಳು ಲಭ್ಯವಿವೆ.
- ವಾಚ್ ಸಂಪೂರ್ಣವಾಗಿ ಜಲನಿರೋಧಕ, ಧೂಳು ಮತ್ತು ಸ್ಕ್ರಾಚ್ ನಿರೋಧಕವಾಗಿದೆ. ಇದು ಬಜೆಟ್ ಸ್ಮಾರ್ಟ್ ವಾಚ್ ಆಗಿದ್ದು, ಇದರ ಬೆಲೆ 3 ಸಾವಿರ ರೂ.ಗಿಂತಲೂ ಕಡಿಮೆಯಿದೆ. ಈ ಸ್ಮಾರ್ಟ್ ವಾಚ್ ಶಕ್ತಿಯುತ ಅಂತರ್ಗತ ಸ್ಪೀಕರ್‌ನಿಂದ ಬೆಂಬಲಿತವಾಗಿದೆ, ಇದು ಬಳಕೆದಾರರು ಪ್ರಯಾಣದಲ್ಲಿರುವಾಗ ಕರೆಗಳನ್ನು ಸ್ವೀಕರಿಸಲು ಅವಕಾಶ ಮಾಡಿಕೊಡುತ್ತದೆ.
- ಫೈರ್-ಬೋಲ್ಟ್ ಗ್ಲಾಡಿಯೇಟರ್ ಶಕ್ತಿಯುತ ಬ್ಯಾಟರಿಯೊಂದಿಗೆ ಬರುತ್ತದೆ. 7 ದಿನಗಳ ಸುದೀರ್ಘ ಬ್ಯಾಟರಿಯ ಈ ಸ್ಮಾರ್ಟ್ ವಾಚ್ ತ್ವರಿತ ಚಾರ್ಜಿಂಗ್ ಬೆಂಬಲಿಸುತ್ತದೆ. 10 ನಿಮಿಷಗಳ ಕಾಲ ಚಾರ್ಜ್ ಮಾಡಿದ್ರೆ ಸುಮಾರು 24 ಗಂಟೆಗಳವರೆಗೆ ಬಳಸಬಹುದು. ಇದು 5 ಜಿಪಿಎಸ್ ನೆರವಿನ ಮೋಡ್‌ಗಳನ್ನು ಹೊಂದಿದೆ. ಇದು ಅಂತರ್ಗತ ಆಟಗಳು, ಕ್ಯಾಲ್ಕುಲೇಟರ್, ಹವಾಮಾನ ಅಪ್‌ಡೇಟ್‌ಗಳು, ಡ್ರಿಂಕ್ ವಾಟರ್ ರಿಮೈಂಡರ್, ಅಲಾರಾಂ ಮತ್ತು ಕ್ಯಾಮೆರಾ ನಿಯಂತ್ರಣಗಳನ್ನು ಹೊಂದಿದೆ. ಇದರ ನವೀಕರಿಸಿದ ಆರೋಗ್ಯ ಸೂಟ್ ನಿಮ್ಮ ಹೃದಯ ಬಡಿತ, SpO2 ಮತ್ತು ಋತುಚಕ್ರವನ್ನು ಟ್ರ್ಯಾಕ್ ಮಾಡುತ್ತದೆ. ಹೀಗಾಗಿ ಅಂಗೈಯಲ್ಲಿಯೇ ನಿಮ್ಮ ಆರೋಗ್ಯವನ್ನು ಪರೀಕ್ಷಿಸಿಕೊಳ್ಳಬಹುದಾಗಿದೆ.
ಅತೀ ಕಡಿಮೆ ಬೆಲೆಗೆ 3 ಸಾವಿರಕ್ಕಿಂತಲೂ ಕಡಿಮೆ ಬೆಲೆಗೆ ಸಿಗುವ ಈ ಸ್ಮಾರ್ಟ್‍ವಾಚ್ ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿದ್ದು ಅದ್ಭುತ ಪ್ರಯೋಜನ ನೀಡಲಿವೆ.