ಸಾರ್ವಜನಿಕರೇ ನಿಮಗೊಂದು ಗುಡ್ ನ್ಯೂಸ್ | ಕೇಂದ್ರ ಸರ್ಕಾರದ ಈ ಯೋಜನೆಯಡಿ 10 ಲಕ್ಷ ಸಾಲ ಪಡೆಯಿರಿ
ಕೇಂದ್ರ ಸರ್ಕಾರ ಜನರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಲೇ ಇದೆ. ಜನರ ಆರ್ಥಿಕ ಕಷ್ಟಕ್ಕೆ ನೆರವು ನೀಡುತ್ತಿದೆ. ಇದೀಗ ಕೇಂದ್ರ ಸರ್ಕಾರದ ಈ ಯೋಜನೆಯಡಿಯಲ್ಲಿ ಜನರಿಗೆ ಸಾಲವನ್ನು ಒದಗಿಸುತ್ತಿದೆ. ಆ ಯೋಜನೆ ಪ್ರಧಾನ ಮಂತ್ರಿ ಮುದ್ರಾ ಸಾಲ ಯೋಜನೆ ಆಗಿದೆ. ಇದರ ಅಡಿಯಲ್ಲಿ ಸಾಲವನ್ನು ಸುಲಭವಾಗಿ ಪಡೆಯಬಹುದು. ವ್ಯಾಪಾರಿಗಳಿಗೆ 10 ಲಕ್ಷ ರೂ.ವರೆಗೆ ಭದ್ರತೆ ರಹಿತ ಸಾಲ ನೀಡಲಾಗುತ್ತಿದೆ.
ಪ್ರಧಾನ ಮಂತ್ರಿ ಮುದ್ರಾ ಸಾಲ ಯೋಜನೆ ಅಡಿಯಲ್ಲಿ, ಶಿಶು, ಕಿಶೋರ್ ಮತ್ತು ತರುಣ್ ಎಂಬ ಮೂರು ವರ್ಗಗಳ ಅಡಿಯಲ್ಲಿ ಸಾಲವನ್ನು ಪಡೆಯಬಹುದಾಗಿದೆ. ಇನ್ನೂ, ಸಾಲ ಪಡೆಯಲು ನೀವು ಸರಿಯಾದ ದಾಖಲೆಗಳ ಜೊತೆಗೆ ಬ್ಯಾಂಕ್ ಗೆ ಅರ್ಜಿ ಸಲ್ಲಿಸಬೇಕು. ಇನ್ನೂ ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಶಿಶು ವಿಭಾಗ : ನೀವೇನಾದರೂ ವ್ಯಾಪಾರವನ್ನು ಪ್ರಾರಂಭಿಸಲು ಯೋಚಿಸಿದ್ದರೆ, ನಿಮ್ಮ ಆರ್ಥಿಕ ಕಷ್ಟಕ್ಕೆ ಈ ವರ್ಗ ಸಹಕಾರಿಯಾಗಿದೆ. ನೀವು ಶಿಶು ವರ್ಗದ ಅಡಿಯಲ್ಲಿ ಸಾಲವನ್ನು ತೆಗೆದುಕೊಳ್ಳಬಹುದು. ಹಾಗೇ ಇದರಲ್ಲಿ ಸುಮಾರು 50 ಸಾವಿರ ರೂಪಾಯಿವರೆಗೆ ಸಾಲ ಪಡೆಯಬಹುದಾಗಿದೆ. ಅಲ್ಲದೆ, ಸಾಲದ ಮೊತ್ತವನ್ನು ಮರುಪಾವತಿಸಲು ನಿಮಗೆ 5 ವರ್ಷಗಳ ಕಾಲಾವಕಾಶ ಕೂಡ ನೀಡಲಾಗುತ್ತದೆ. ಈ ವೇಳೆ ಶೇಕಡಾ 10 ರಿಂದ 12ರಷ್ಟು ಬಡ್ಡಿಯನ್ನು ವಿಧಿಸಬಹುದು.
ಕಿಶೋರ್ ಸಾಲ : ಈ ಸಾಲ ನೀವು ಈಗಾಗಲೇ ವ್ಯವಹಾರವನ್ನು ಪ್ರಾರಂಭಿಸಿದ್ದರೆ ಆಗ ನೀವು 50 ಸಾವಿರದಿಂದ 5 ಲಕ್ಷದವರೆಗೆ ಈ ವರ್ಗದಿಂದ ಸಾಲ ಪಡೆಯಬಹುದು. ಸಾಲದ ಸಂಸ್ಥೆ ನೀವು ತೆಗೆದುಕೊಳ್ಳುವ ಸಾಲದ ಮೊತ್ತದ ಮೇಲೆ ವಿಭಿನ್ನ ಬಡ್ಡಿ ದರವನ್ನು ನಿರ್ಧರಿಸುತ್ತದೆ. ಹಾಗೂ ಸಾಲದ ಮೊತ್ತವನ್ನು ವಿತರಿಸುವಾಗ ಅರ್ಜಿ ಸೇರಿದಂತೆ ಕ್ರೆಡಿಟ್ ದಾಖಲೆಗಳನ್ನು ಪರಿಶೀಲಿಸಲಿದೆ. ನೀವು ನೀಡಿದ ದಾಖಲೆಗಳು ಸರಿಯಾಗಿದ್ದರೆ ಸಾಲ ಮಂಜೂರು ಮಾಡಲಾಗುತ್ತದೆ.
ತರುಣ್ ಸಾಲ : ವ್ಯಾಪಾರವನ್ನು ಸ್ಥಾಪಿಸಿದ ಅಥವಾ ವ್ಯಾಪಾರವನ್ನು ಮತ್ತಷ್ಟು ವಿಸ್ತರಿಸಬೇಕೆಂದಿರುವ ಜನರಿಗೆ ಈ ಸಾಲ ನೀಡಲಾಗುತ್ತದೆ. ಸಾಲದ ಮೊತ್ತ ರೂ.5 ಲಕ್ಷದಿಂದ 10 ಲಕ್ಷದವರೆಗೆ ಇರುತ್ತದೆ. ಇನ್ನೂ, ಬಡ್ಡಿ ದರವನ್ನು ಸಾಲ ನೀಡುವ ಸಂಸ್ಥೆ ನಿರ್ಧಾರ ಮಾಡುತ್ತದೆ.
ಇನ್ನೂ, ಈ ಎಲ್ಲಾ ಸಾಲಗಳಿಗೆ ಅರ್ಜಿ ಸಲ್ಲಿಸಲು ಯಾವುದೆಲ್ಲಾ ದಾಖಲೆಗಳು ಬೇಕು ಎಂದು ನೋಡೋಣ. ಅರ್ಜಿ ನಮೂನೆ, ಪಾಸ್ಪೋರ್ಟ್ ಅಳತೆಯ ಭಾವಚಿತ್ರ, KYC ದಾಖಲೆ, ಗುರುತಿನ ಚೀಟಿ, ವಿಳಾಸದ ಪುರಾವೆ, ಆದಾಯದ ಪುರಾವೆ, ಸಂಪೂರ್ಣ ವ್ಯವಹಾರ ಸಂಬಂಧಿತ ವಿವರಗಳು, ಕಚೇರಿಯ ಪುರಾವೆ, ಪರವಾನಗಿ, ನೋಂದಣಿ ಪುರಾವೆ ಇವೆಲ್ಲಾ ಅರ್ಜಿ ಸಲ್ಲಿಕೆಗೆ ಬೇಕಾದ ದಾಖಲೆಗಳು.