Smart Lock : ಗೂಗಲ್ ಸ್ಮಾರ್ಟ್ ಲಾಕ್ ಬಗ್ಗೆ ನಿಮಗೆ ತಿಳಿದಿರದ ಕೆಲವೊಂದು ಮಾಹಿತಿ ಇಲ್ಲಿದೆ!
ಈ ಟೆಕ್ನಾಲಜಿ ಯುಗದಲ್ಲಿ ಎಲ್ಲರ ಕೈಯಲ್ಲೂ ಸ್ಮಾರ್ಟ್’ಫೋನ್ ಎಂಬ ಮಾಯಾವಿ ಇದ್ದೇ ಇದೆ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರು ಸ್ಮಾರ್ಟ್’ಫೋನ್ ಬಳಸುವುದು ಸಾಮನ್ಯವಾಗಿದೆ. ಹಲವಾರು ಮಾಹಿತಿಗಳನ್ನು ನಾವು ಈ ಸ್ಮಾರ್ಟ್ ಫೋನಿನಲ್ಲಿ ಸಂಗ್ರಹಿಸುತ್ತೇವೆ. ಹೆಚ್ಚಿನ ಜನರು ತಮ್ಮ ಮೊಬೈನಲ್ಲಿರುವ ಮಾಹಿತಿಯ್ನನು ಹೆಚ್ಚು ಗೌಪ್ಯವಾಗಿಡಲು ಬಯಸುತ್ತಾರೆ. ಹಾಗೂ ಅದಕ್ಕೆ ತಕ್ಕನಾಗಿ ಪ್ರಯತ್ನವನ್ನು ಮಾಡುತ್ತಾರೆ. ಮೊಬೈಲ್ ಎಷ್ಟು ಗೌಪ್ಯತೆ ಹಾಗೂ ಸುರಕ್ಷತೆಯನ್ನು ನೀಡುತ್ತದೆಯೋ ಅವರು ಅಷ್ಟು ಖುಷಿ ಪಡುತ್ತಾರೆ. ಹಾಗಾಗಿ ಜನರು ಹೆಚ್ಚು ಸುರಕ್ಷಿತವಾಗಿರುವ ಫೋನ್‌ಗಳನ್ನು ಖರೀದಿಸಲು ಬಯಸುತ್ತಾರೆ.
ಸ್ಮಾರ್ಟ್‌ಫೋನ್‌ಗಳು ಎಷ್ಟು ವೇಗವಾಗಿ ಮುನ್ನಡೆಯುತ್ತಿವೆಯೋ ಅಷ್ಟೇ ವೇಗದಲ್ಲಿ ಅವುಗಳ ಗೌಪ್ಯತೆಯ ಬಗ್ಗೆಯೂ ಜನರು ಗಮನಹರಿಸುತ್ತಿದ್ದಾರೆ.ಜನರು ಹೆಚ್ಚಿನ ಸುರಕ್ಷತೆ ಬಯಸುತ್ತಾರೆ. ಅದಕ್ಕಾಗಿಯೇ ಫೋನ್ ತಯಾರಕರು ಈಗ ಫೋನ್ ಸುರಕ್ಷತೆ ಮತ್ತು ಗೌಪ್ಯತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದ್ದಾರೆ. ಇದಕ್ಕಾಗಿ ಫೋನ್‌ಗೆ ಹೊಸ ವೈಶಿಷ್ಟ್ಯಗಳನ್ನು ಸೇರಿಸಲಾಗುತ್ತಿದೆ.
ವಾಸ್ತವವಾಗಿ, ಫೋನ್ ಪಾಸ್‌ಕೋಡ್, ಪ್ಯಾಟರ್ನ್ ಲಾಕ್, ಫಿಂಗರ್‌ಪ್ರಿಂಟ್ ಲಾಕ್‌ನಂತಹ ಹಲವು ಆಯ್ಕೆಗಳನ್ನು ಹೊಂದಿದೆ. ಇದು ಎಲ್ಲಾ ಸಾಮಾನ್ಯ ಮೊಬೈಲ್ಗಳಲ್ಲೂ ಲಭ್ಯವಿದೆ. ಆದರೆ ಇದೀಗ ಆಂಡ್ರಾಯ್ಡ್ ಫೋನ್‌ಗಳಲ್ಲಿ ಗೂಗಲ್ ಸ್ಮಾರ್ಟ್‌ಲಾಕ್ ಎಂಬ ಮತ್ತೊಂದು ಗೌಪ್ಯತೆಯ ಪರ್ಯಾಯವನ್ನು ಒದಗಿಸಲಾಗಿದೆ. ಇದರ ಮೂಲಕ ಹೆಚ್ಚಿನ ಸುರಕ್ಷತೆಯನ್ನು ಜನರಿಗೆ ಒದಗಿಸಬಹುದು. ಈ ವೈಶಿಷ್ಟ್ಯಗಳನ್ನು iOS ಮತ್ತು Android ಫೋನ್‌ಗಳಿಗೆ ಹೊರತರಲಾಗುತ್ತಿದೆ. ಈ ಕಾರಣದಿಂದಾಗಿ, ಜನರು ತಮ್ಮ ಗೌಪ್ಯತೆಯ ಬಗ್ಗೆ ಹೆಚ್ಚು ಸುರಕ್ಷಿತವಾಗಿರುತ್ತಾರೆ.
ಗೂಗಲ್ ಸ್ಮಾರ್ಟ್ ಲಾಕ್ ಇದರ ವಿಶೇಷತೆಯ ಬಗ್ಗೆ ತಿಳಿಯುವುದಾದರೆ, ನಿಮ್ಮ ಕೈಯಲ್ಲಿ ಡಿವೈಸ್ ಇರುವವರೆಗೂ ಅನ್ ಲಾಕ್ ಮಾಡುತ್ತದೆ. ನೀವು ಫೋನ್ ಅನ್ನು ಕೆಳಗೆ ಇಟ್ಟಾಗ ಅದು ತಕ್ಷಣವೇ ಆಫ್ ಆಗುತ್ತದೆ. ಫೋನ್ ಅನ್ನು ಅನ್‌ಲಾಕ್ ಮಾಡಲು ನೀವು ಪಾಸ್‌ವರ್ಡ್ ಅನ್ನು ಪದೇ ಪದೇ ನಮೂದಿಸುವ ಅಗತ್ಯವಿಲ್ಲ.