Pixel 6a : ಪಿಕ್ಸೆಲ್ ಸ್ಮಾರ್ಟ್ ಫೋನ್ ಕೇವಲ 5100 ರೂ.ಗೆ ಖರೀದಿಸಿ | ಬಂಪರ್ ಆಫರ್, ಈ ಅವಕಾಶ ಮಿಸ್ ಮಾಡ್ಬೇಡಿ

ನೀವು ಮೊಬೈಲ್ ಕೊಂಡು ಕೊಳ್ಳುವ ಯೋಜನೆ ಹಾಕಿದ್ದರೆ ಈ ಭರ್ಜರಿ ಆಫರ್ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು. ವಾಲ್ಮಾರ್ಟ್ ಒಡೆತನದ ಪ್ರಸಿದ್ಧ ಇ ಕಾಮರ್ಸ್ ವೆಬ್ ಸೈಟ್ ಫ್ಲಿಪ್‌ಕಾರ್ಟ್ (Flipkart) ನಲ್ಲಿ ಈಯರ್ ಎಂಡ್ ಸೇಲ್ (Year End Sale) ನಡೆಯುತ್ತಿದ್ದು, ಈ ಈಯರ್ ಎಂಡ್ ಸೇಲ್​ನಲ್ಲಿ ಗೂಗಲ್ ಪಿಕ್ಸೆಲ್ 6a ಸ್ಮಾರ್ಟ್​ಫೋನ್ ಬರೋಬ್ಬರಿ 38,899 ರೂ. ಡಿಸ್ಕೌಂಟ್ ದೊರೆಯಲಿದ್ದು, ಕೇವಲ 5,100 ರೂ. ಗೆ ಖರೀದಿಸಿ ಗೂಗಲ್ ಪಿಕ್ಸೆಲ್ 6a ಸ್ಮಾರ್ಟ್​ಫೋನ್ ನಿಮ್ಮದಾಗಿಸಿಕೊಳ್ಳಬಹುದು.

ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಬಳಕೆ ಮಾಡದೇ ಇರುವವರೇ ವಿರಳ ಎಂದರೆ ತಪ್ಪಾಗದು. ಮೊಬೈಲ್ ಕೊಳ್ಳುವ ಪ್ಲಾನ್ ಹಾಕಿದವರಿಗೆ ಫ್ಲಿಪ್ ಕಾರ್ಟ್ ನಲ್ಲಿ ಬಂಪರ್ ಆಫರ್ ಲಭ್ಯವಿದೆ. ಸ್ಮಾರ್ಟ್​ಫೋನ್​ಗಳು ಸೇರಿದಂತೆ ಲ್ಯಾಪ್​ಟಾಪ್, ಬಟ್ಟೆಗಳು ಬಹುತೇಕ ಎಲ್ಲ ಎಲೆಕ್ಟ್ರಾನ್ ವಸ್ತುಗಳು ಭರ್ಜರಿ ಡಿಸ್ಕೌಂಟ್​ನಲ್ಲಿ ಮಾರಾಟವಾಗುತ್ತಿದೆ.

ಹಾಗಿದ್ರೆ ಮತ್ತೇಕೆ ತಡ!!!! ನೀವು ಕೂಡ ಈ ಆಫರ್ ನಲ್ಲಿ ಪಾಲ್ಗೊಂಡು ನಿಮ್ಮ ನೆಚ್ಚಿನ ಮೊಬೈಲ್ ಅನ್ನು ರಿಯಾಯಿತಿ ದರದಲ್ಲಿ ಪಡೆದುಕೊಳ್ಳಿ!!.. ಆ್ಯಪಲ್, ಸ್ಯಾಮ್​ಸಂಗ್, ಗೂಗಲ್, ರಿಯಲ್ ಮಿ, ಒನ್​ಪ್ಲಸ್ ಸೇರಿದಂತೆ ಅನೇಕ ಸ್ಮಾರ್ಟ್​ಫೋನ್ ಬ್ರ್ಯಾಂಡ್​ಗಳ ಮೇಲೆ ಆಕರ್ಷಕ ರಿಯಾಯಿತಿ ದರದಲ್ಲಿ ಮಾರಾಟವಾಗುತ್ತಿದ್ದು, ಮುಖ್ಯವಾಗಿ ಗೂಗಲ್ ಕಂಪನಿಯ ಗೂಗಲ್ ಪಿಕ್ಸೆಲ್ 6ಎ (Google Pixel 6a) ಸ್ಮಾರ್ಟ್​ಫೋನ್ ನೀವು ನಿರೀಕ್ಷೆ ಮಾಡಲಾಗದ ದರಕ್ಕೆ ಸೇಲ್ ಆಗುತ್ತಿದೆ. 43,999 ರೂ. ಗೆ ಅನಾವರಣಗೊಂಡ ಈ ಫೋನನ್ನು ಇದೀಗ ಕೇವಲ 5,100 ರೂ. ಗೆ ನಿಮ್ಮದಾಗಿಸಿಕೊಳ್ಳಬಹುದಾಗಿದೆ.

ಫ್ಲಿಪ್​ಕಾರ್ಟ್ ಈಯರ್ ಎಂಡ್ ಸೇಲ್​ನಲ್ಲಿ ಗೂಗಲ್ ಪಿಕ್ಸೆಲ್ 6a ಸ್ಮಾರ್ಟ್​ಫೋನ್ 29,999 ರೂ. ಗೆ ಮಾರಾಟವಾಗುತ್ತಿದೆ. ಈ ಫೋನ್ ಮೇಲೆ 14,000 ರೂ. ಗಳ ಬಂಪರ್ ಆಫರ್ ನೀಡಲಾಗಿದೆ. ಇದರ ಜೊತೆಗೆ ಫೆಡರಲ್ ಬ್ಯಾಂಕ್ ಕ್ರೆಡಿಟ್ ಕಾರ್ಡ್​ದಾರರು 5,000 ರೂ. ಗಳ ಮೇಲಿನ ಆರ್ಡರ್​ಗೆ 3,000 ರೂ. ವರೆಗಿನ ಡಿಸ್ಕೌಂಟ್ ಪಡೆಯುವ ಅವಕಾಶ ಕಲ್ಪಿಸಲಾಗಿದೆ.

ಇದರ ಜೊತೆಗೆ 21,900 ರೂ. ವರೆಗೆದಿನ ಎಕ್ಸ್​ಚೇಂಜ್ ಆಫರ್ ಕೂಡ ಲಭ್ಯವಾಗಲಿದೆ. ಹೀಗೆ ಎಲ್ಲ ಬ್ಯಾಂಕ್ ಆಫರ್ ಮತ್ತು ಎಕ್ಸ್​ಚೇಂಜ್ ಆಫರ್ ಮೂಲಕ ಗೂಗಲ್ ಪಿಕ್ಸೆಲ್ 6ಎ ಸ್ಮಾರ್ಟ್​ಫೋನನ್ನು ಆಫರ್ ಜೊತೆಗೆ 5,100 ರೂ. ಗೆ ನಿಮ್ಮದಾಗಿಸಿ ಕೊಳ್ಳಬಹುದು.

ಗೂಗಲ್‌ ಪಿಕ್ಸೆಲ್‌ 6a ಸ್ಮಾರ್ಟ್‌ಫೋನ್‌ 6.1 ಇಂಚಿನ ಫುಲ್‌ HD+ OLED ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1,080 x 2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದಿಂದ ಕೂಡಿದ್ದು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್‌ ಮತ್ತು 90Hz ರಿಫ್ರೆಶ್ ರೇಟ್‌ ಅನ್ನು ಒಳಗೊಂಡಿದೆ.

ಗೂಗಲ್‌ ಪಿಕ್ಸೆಲ್‌ 6a ಸ್ಮಾರ್ಟ್‌ಫೋನ್‌ 4,306mAh ಬ್ಯಾಟರಿಯನ್ನು ಹೊಂದಿದ್ದು, ಇದು 24 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ ಮತ್ತು 72 ಗಂಟೆಗಳವರೆಗೆ ಬ್ಯಾಕಪ್ ಅನ್ನು ಒಳಗೊಂಡಿರುವ ಬ್ಯಾಟರಿ ಸೇವರ್ ಮೋಡ್‌ ಹೊಂದಿದೆ. ಬ್ಯಾಟರಿಗೆ ತಕ್ಕ ಫಾಸ್ಟ್ ಚಾರ್ಜರ್ ಆಯ್ಕೆ ಕೂಡ ನೀಡಲಾಗಿದ್ದು, ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6E, ಬ್ಲೂಟೂತ್ 5.2, ಮತ್ತು USB ಟೈಪ್-C ಪೋರ್ಟ್ ಸೇರಿವೆ.

ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್‌ ಹೊಂದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 12 ಮೆಗಾಪಿಕ್ಸೆಲ್ ಸೆನ್ಸಾರ್‌ ಮತ್ತು ಎರಡನೇ ಕ್ಯಾಮೆರಾ ಕೂಡ 12.2 ಮೆಗಾಪಿಕ್ಸೆಲ್ ಸೆನ್ಸಾರ್‌ ಅಲ್ಟ್ರಾ–ವೈಡ್–ಆಂಗಲ್ ಲೆನ್ಸ್‌ ಅನ್ನು ಒಳಗೊಂಡಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.

ಈ ಫೋನ್‌ನ ರಿಯರ್‌ ಕ್ಯಾಮೆರಾ 30fps ನಲ್ಲಿ 4K ವಿಡಿಯೋ ರೆಕಾರ್ಡಿಂಗ್ ಅನ್ನು ಹೊಂದಿದೆ. ಸೆಲ್ಫಿ ಕ್ಯಾಮೆರಾ ಮುಂಭಾಗದ ಕ್ಯಾಮರಾ 30fps ನಲ್ಲಿ 1080p ವರೆಗೆ ವೀಡಿಯೊ ರೆಕಾರ್ಡಿಂಗ್ ಸಪೋರ್ಟ್ ಹೊಂದಿದೆ.ಆಕ್ಟಾ–ಕೋರ್ ಗೂಗಲ್ ಟೆನ್ಸರ್ GS101 SoC ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್ 12 ಔಟ್ ಆಫ್ ದಿ ಬಾಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಸ್ಮಾರ್ಟ್‌ಫೋನ್ ಕನಿಷ್ಠ ಐದು ವರ್ಷಗಳ ಭದ್ರತಾ ನವೀಕರಣಗಳನ್ನು ಪಡೆಯುತ್ತದೆ ಎಂದು ಗೂಗಲ್ ಕಂಪೆನಿ ಮಾಹಿತಿ ನೀಡಿದೆ.

Leave A Reply

Your email address will not be published.