ಪುರುಷರೇ ಇತ್ತ ಗಮನಿಸಿ : ವೀರ್ಯಾಣು ಹೆಚ್ಚಿಸಲು ಯಾವ ಅಂಡರ್ ವೇರ್ ಧರಿಸಿದರೆ ಉತ್ತಮ?
ಇತ್ತೀಚಿಗೆ ಬಹುಪಾಲು ಜನರ ಜೀವನ ಶೈಲಿ ಜಡತನದಿಂದ ಕೂಡಿದ್ದು ಇದುವೇ ಸಂತಾನಹೀನತೆಯ ಸಮಸ್ಯೆಗೆ ಪ್ರಧಾನ ಕಾರಣ ಆಗಿರಬಹುದು ಅದಲ್ಲದೆ ಅತಿ ಜಿಡ್ಡಿನ ಆಹಾರ, ಕಲಬೆರಿಕೆ ಆಹಾರ ದೇಹವನ್ನು ಜಡತ್ವಕ್ಕೆ ಪ್ರೇರೆಪನೆ ನೀಡುತ್ತದೆ. ಒತ್ತಡ, ಎಡೆಬಿಡದ ಕೆಲಸ, ಅತಿಯಾದ ಕುಡಿತದ ಚಟ, ತಡವಾದ ಮದುವೆ, ಸಮಯಪಾಲನೆ ಮುಂತಾದವುಗಳಿಂದ ಮನುಷ್ಯ ಮರೆ ಮಾಚಿದ್ದಾನೆ. ಜಡ ಜೀವನ ಶೈಲಿ ರೂಢಿಸಿಕೊಂಡ ಯುವಜನರಲ್ಲಿ ವೀರ್ಯಾಣು ಸಮಸ್ಯೆ ಹೆಚ್ಚಾಗಿದೆ ಎಂಬ ಮಾಹಿತಿ ಸತ್ಯ ಅಂಶ ಅಧ್ಯಯನ ಮೂಲಕ ಬೆಳಕಿಗೆ ಬಂದಿದೆ.
ಸದ್ಯ ಬಂಜೆತನ ಸಮಸ್ಯೆ ಎದುರಿಸುತ್ತಿರುವ ದಂಪತಿಗೆ ಮಕ್ಕಳಾಗದಿರಲು ಕಾರಣ ವೀರ್ಯಾಣುಗಳ ಸಮಸ್ಯೆ ಆಗಿದೆ . ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಹಲವಾರು ಕಾರಣಗಳಿಂದ ಕಡಿಮೆಯಾಗುತ್ತದೆ. ಆದರೆ ಧರಿಸುವ ಅಂಡರ್‌ವೇರ್ ಕೂಡ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗಲು ಕಾರಣ ಎಂಬುವುದು ಸಾಬೀತು ಆಗಿದೆ. ಹೌದು ಕೆಲವೊಂದು ಅಂಡರ್‌ವೇರ್‌ಗಳು ವೀರ್ಯಾಣುಗಳ ಸಂಖ್ಯೆ ಕಡಿಮೆ ಮಾಡುತ್ತದೆ.
ಮುಖ್ಯವಾಗಿ ಪುರುಷರ ಗುಪ್ತಾಂಗಗಳಿಗೆ ಗಾಳಿಯಾಡುವಂತಿರಬೇಕು ಗುಪ್ತಾಂಗಗಳು ವೀರ್ಯಾಣುಗಳ ಸಂಖ್ಯೆ ಹೆಚ್ಚು ಉತ್ಪಾದಿಸಲು ಅವುಗಳ ಉಷ್ಣಾಂಶ ದೇಹದ ಉಷ್ಣತೆಗಿಂತ ಕಡಿಮೆ ಇರಬೇಕು. ಆದ್ದರಿಂದಲೇ ಆ ಅಂಗಗಳು ದೇಹದ ಹೊರ ಭಾಗದಲ್ಲಿದೆ. ಬಿಗಿಯಾದ ಅಥವಾ ನೈಲಾನ್ ಅಂಡರ್‌ವೇರ್ ಧರಿಸಿದರೆ ಗುಪ್ತಾಂಗಗಳು ಬಿಸಿಯಾಗುತ್ತವೆ. ನೀವು ಬ್ರೀಫ್ ಅಂಡರ್‌ವೇರ್ ಧರಿಸಿದರೆ ಗುಪ್ತಾಂಗಗಳು ತುಂಬಾ ಬಿಸಿಯಾಗಿರುತ್ತವೆ. ಈ ಅಂಗಗಳು ಬಿಸಿಯಾದಾಗ ಗುಪ್ತಾಂಗಗಳು ಬಿಸಿಯಾದಾಗ ವೀರ್ಯಾಣುಗಳ ಉತ್ಪತ್ತಿ ಕಡಿಮೆಯಾಗುತ್ತದೆ. ತುಂಬಾ ಬಿಗಿಯಾದ ಅಂಡರ್‌ವೇರ್ ಧರಿಸಿದಾಗ ಶಿಶ್ನ ಹಾಗೂ ವೃಷಣಗಳು ಬಿಸಿಯಾಗಿ ಅವುಗಳು ವೀರ್ಯಾಣುಗಳನ್ನುಸರಿಯಾದ ಪ್ರಮಾಣದಲ್ಲಿ ಉತ್ಪತ್ತಿ ಮಾಡಲು ಸಾಧ್ಯವಾಗುವುದಿಲ್ಲ.
ವೀರ್ಯಾಣುಗಳ ಸಂಖ್ಯೆ ವೃದ್ಧಿಸಲು ಪುರುಷರು ಅನುಸರಿಸಬೇಕಾದ ಕ್ರಮಗಳು :
- ಬಾಕ್ಸರ್ ಅಂಡರ್‌ವೇರ್ ಎಲ್ಲಾ ಸಮಯದಲ್ಲಿ ಧರಿಸಿ, ಏಕೆಂದರೆ ಗುಪ್ತಾಂಗಗಳು ಬಿಗಿಯಾದ ಅಂಡರ್‌ನಲ್ಲಿ ಸರಿಯಾದ ಕೆಲಸ ಮಾಡುವುದಿಲ್ಲ.
- ಎಸ್ಟ್ರಾಡಿಯೋಲ್ ಮತ್ತು ಫ್ಲೇವನಾಯ್ಡ್ಗಳು ಖರ್ಜೂರದಲ್ಲಿ ಕಂಡುಬರುತ್ತವೆ. ಇದು ವೀರ್ಯದ ಸಂಖ್ಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಪುರುಷರು ಪ್ರತಿದಿನವೂ ಖರ್ಜೂರವನ್ನು ಸೇವಿಸಬೇಕು.
- ಪುರುಷರು ಸ್ಪೋರ್ಟ್ಸ್ ಬಟ್ಟೆ ತುಂಬಾ ಹೊತ್ತು ಧರಿಸಬೇಡಿ ತುಂಬಾ ಬಿಗಿಯಾದ ಉಡುಪು ಅಥವಾ ಪ್ಯಾಂಟ್, ಅಂಡರ್‌ವೇರ್ ಧರಿಸಬೇಡಿ. ಸ್ಪೋರ್ಟ್ಸ್ ಬಟ್ಟೆ ಆಟ ಆಡುವಾಗ ಅಷ್ಟೇ ಬಳಸಿ, ನಂತರ ಸಡಿಲವಾದ ಪ್ಯಾಂಟ್ ಧರಿಸಿ. ನೀವು ಕೂತುಕೊಂಡು ಕೆಲಸ ಮಾಡುವುದಾದರೆ ಬಿಗಿಯಾದ ಪ್ಯಾಂಟ್ ಧರಿಸಬೇಡಿ.
- ಮಲಗುವಾಗ ಒಳ ಉಡುಪು ಧರಿಸಬೇಡಿ ಇದರಿಂದ ವೀರ್ಯಾಣುಗಳ ಉತ್ಪತ್ತಿ ಹೆಚ್ಚುವುದು. ಏಕೆಂದರೆ ಗುಪ್ತಾಂಗಗಳಿಗೆ ಚೆನ್ನಾಗಿ ಗಾಳಿಯಾಡುವುದರಿಂದ ಉಷ್ಣಾಂಶ ಹೆಚ್ಚಾಗುವುದಿಲ್ಲ.
- ಬಿಗಿಯಾದ ಶಾರ್ಟ್ಸ್ ಬದಲಿಗೆ ಸಡಿಲವಾದ ಕಾಟನ್ ಪ್ಯಾಂಟ್ ಅಥವಾ ಟ್ರೌಸರ್ ಧರಿಸಿ.
- ಇನ್ನು ಪಂಚೆ ಧರಿಸುವುದು ಕೂಡ ಅತ್ಯುತ್ತಮವಾದ ಆಯ್ಕೆಯಾಗಿದೆ.
- ಕೆಲವೊಂದು ಅಧ್ಯಯನಗಳು ಅತಿಯಾದ ಮೈ ತೂಕ ವೀರ್ಯಾಣುಗಳ ಉತ್ಪತ್ತಿ ಕಡಿಮೆ ಮಾಡುತ್ತದೆ ಎಂದು ಹೇಳಿದೆ. ಆದ್ದರಿಂದ ಸಮತೂಕದ ಮೈ ತೂಕ ಹೊಂದಬೇಕು .
- ಆರೋಗ್ಯಕರ ಆಹಾರಕ್ರಮ ಅಂದರೆ ಮೀನು, ಹಣ್ಣುಗಳು, ತರಕಾರಿಗಳು, ವಾಲ್ನಟ್, ನಟ್ಸ್ ಈ ಬಗೆಯ ಆಹಾರಗಳು ವೀರ್ಯಾಣುಗಳ ಸಂಖ್ಯೆ ಹೆಚ್ಚಿಸುತ್ತದೆ.
- ಲೈಂಗಿಕ ರೋಗಗಗಳಾದ chlamydia ಮತ್ತು gonorrhea ಪುರುಷರಲ್ಲಿ ಬಂಜೆತನ ಉಂಟು ಮಾಡುತ್ತದೆ. ಆದ್ದರಿಂದ ಯಾವಾಗಲೂ ಸುರಕ್ಷಿತ ಲೈಂಗಿಕಕ್ರಿಯೆ ನಡೆಸಿ.
- ಹಾಟ್ ಡಬ್‌ನಲ್ಲಿ ತುಂಬಾ ಜೊತ್ತು ಕೂರಬೇಡಿ.
- ಲ್ಯಾಪ್‌ಟಾಪ್ ತೊಡೆಯ ಮೇಲಿಟ್ಟು ಕೆಲಸ ಮಾಡುವ ಅಭ್ಯಾಸ ಬಿಡಿ.
- ಧೂಮಪಾನ ಮಾಡುವುದರಿಂದಲೂ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುವುದು.
- ಅತಿಯಾಗಿ ಮದ್ಯಪಾನ ಮಾಡಿದರೆ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುವುದು.
- ಸೆಕ್ಸ್ ಮಾಡುವಾಗ ಲೂಬ್ರಿಕಾಂಟ್ಸ್ ಬಳಸಬೇಡಿ ಆರೋಗ್ಯ ತಜ್ಞರ ಮಾಹಿತಿ ಪಡೆಯಿರಿ.
- ನಿಮ್ಮ ಗುಪ್ತಾಂಗಗಳನ್ನು ತಂಪಾಗಿ ಇಡಿ.
- ಮಾನಸಿಕ ಒತ್ತಡ ಅಧಿಕವಾದರೂ ಕೂಡ ವೀರ್ಯಾಣುಗಳ ಉತ್ಪತ್ತಿ ಕಡಿಮೆಯಾಗುತ್ತದೆ.
- ದೈಹಿಕ ವ್ಯಾಯಾಮ ಮುಖ್ಯ. ತುಂಬಾ ಹೊತ್ತು ಒಂದೇ ಕಡೆ ಕೂರುವುದರಿಂದ ವಿರ್ಯಾಣುಗಳ ಸಂಖ್ಯೆ ಕಡಿಮೆಯಾಗುವುದು.
- ಮೊಬೈಲ್ ಅನ್ನು ಪ್ಯಾಂಟ್‌ಜೇಬಿನಲ್ಲಿ ಇಡುವುದರಿಂದ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುತ್ತದೆ.
ಇಡೀ ದೇಶದಲ್ಲಿಯೇ ‘ಫಲವತ್ತತೆ’ ಸಮಸ್ಯೆ ವ್ಯಾಪಕಗೊಳ್ಳತೊಡಗಿದೆ. ಬಂಗಾಳವು ಮೊದಲ ಸ್ಥಾನಕ್ಕೆ ಏರಿದೆ. ಆದರೆ ಸಂತಾನ ಪಡೆಯಬೇಕು ಎನ್ನುವ ಧಾವಂತ ಶುರುವಾದಾಗ ಮಾತ್ರ ಮೊದಲ ಹಂತದಲ್ಲಿ ಮಹಿಳೆಯರನ್ನೇ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಆದರೆ ಸಮಸ್ಯೆ ಮಾತ್ರ ಇಬ್ಬರಲ್ಲೂ ಸಮನಾಗಿಯೇ ಇದೆ ಎನ್ನುತ್ತಾರೆ ಬಿರ್ಲಾ ಐವಿಎಫ್ ಕೇಂದ್ರದ ಮುಖ್ಯಸ್ಥ ಸೌರನ್ ಭಟ್ಟಾಚಾರ್ಯ.
ಜನರು ಇನ್ನಾದರೂ ತಮ್ಮ ಆಧುನಿಕ ಜೀವನದ ಒಲವು ಮತ್ತು ಕೆಲವೊಂದು ಅಹಿತಕರ ಅಭ್ಯಾಸಗಳನ್ನು ನಿಲ್ಲಿಸುವಲ್ಲಿ ಪ್ರಯತ್ನಿಸಬೇಕಾಗಿದೆ. ಮುಂದಿನ ಪೀಳಿಗೆಯಲ್ಲಿ ವೀರ್ಯಾಣು ಸಮಸ್ಯೆ ಹೆಚ್ಚು ಹೆಚ್ಚು ತಲೆದೋರುವ ಮುನ್ನ ಜಾಗೃತ ವಹಿಸಬೇಕಾಗಿದೆ